ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣ; ಸ್ಪೀಕರ್‌ಗೆ ವರದಿ ಸಲ್ಲಿಸಿದ ಜೋಷಿ (Meira Kumar | MM Joshi | PAC report | 2G scam)
2ಜಿ ಸ್ಪೆಕ್ಟ್ರಂ ಹಗರಣದ ಕುರಿತು ತನಿಖೆ ನಡೆಸಲು ನೇಮಿಸಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವರದಿಯನ್ನು ತೀವ್ರ ವಿರೋಧದ ನಡುವೆಯೇ ಲೋಕಸಭಾಧ್ಯಕ್ಷರಿಗೆ ಶನಿವಾರ ಸಲ್ಲಿಸಿರುವುದಾಗಿ ಸಮಿತಿ ಅಧ್ಯಕ್ಷ ಮುರಳಿ ಮನೋಹರ ಜೋಷಿ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸಿ ಸಮಿತಿಯ ಅಧಿಕಾರಾವಧಿ ಏ.30ರಂದು ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಲೋಕ ಸಭಾಧ್ಯಕ್ಷೆ ಮೀರಾ ಕುಮಾರ್‌ ಅವರಿಗೆ ಶನಿವಾರ ವರದಿ ನೀಡಿರುವುದಾಗಿ ಹೇಳಿದರು. ವರದಿ ಸಲ್ಲಿಸಲು ಜೋಷಿ ನೇತೃತ್ವದ ಸಮಿತಿಗೆ ಏ.30ರಂದು ಅಂತಿಮ ಗಡುವು ನೀಡಲಾಗಿತ್ತು.

2ಜಿ ಹಗರಣದ ಕುರಿತು ಪಿಎಸಿ ಸಿದ್ದಪಡಿಸಿರುವ 270 ಪುಟಗಳ ವರದಿ ವಿವಾದಾತ್ಮಕವಾಗಿದ್ದು, ಕಾಂಗ್ರೆಸ್‌, ಡಿಎಂಕೆ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಸೇರಿದಂತೆ ಸಮಿತಿಯಲ್ಲಿದ್ದ 21 ಸದಸ್ಯರ ಪೈಕಿ 11ಮಂದಿ ಸದಸ್ಯರು ವರದಿಗೆ ವಿರೋಧ ವ್ಯಕ್ಪಡಿಸಿದ್ದರು.

ಪಿಎಸಿ ವರದಿ ಲೋಕಸಭೆಯಲ್ಲಿ ಮಂಡಿಸುವ ಮುನ್ನವೇ ವರದಿಯಲ್ಲಿದ್ದ ಅಂಶಗಳು ಬಹಿರಂಗವಾಗಿರುವುದರ ಕುರಿತು ಕಾಂಗ್ರೆಸ್‌ ಹಾಗೂ ಮಿತ್ರ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ದೇಶಕ್ಕೆ ಕೋಟ್ಯಂತರ ರೂ.ನಷ್ಟ ಉಂಟು ಮಾಡಿರುವ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಪ್ರಧಾನಿ ಮನಮೋಹನ ಸಿಂಗ್‌ ಅವರು ಪರೋಕ್ಷವಾಗಿ ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ಆಪಾದಿಸಲಾಗಿತ್ತು. ಆ ಸಂದರ್ಭದಲ್ಲಿ ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂ ಹಾಗೂ ದೂರ ಸಂಪರ್ಕ ಖಾತೆ ಸಚಿವರಾಗಿದ್ದ ಎ.ರಾಜಾ ಅವರೂ ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ಆಪಾದಿಸಲಾಗಿತ್ತು.
ಇವನ್ನೂ ಓದಿ