ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಿಎಸಿ ವರದಿ-ಸ್ಪೀಕರ್ ಮೀರಾ ನಿರ್ಧಾರವೇ ಅಂತಿಮ: ಕಪಿಲ್ (PAC | Speakar | Meera kumar | 2G spectrum | Kapil sibal | Lokasabhe)
ಪಿಎಸಿ ವರದಿ-ಸ್ಪೀಕರ್ ಮೀರಾ ನಿರ್ಧಾರವೇ ಅಂತಿಮ: ಕಪಿಲ್
ನವದೆಹಲಿ, ಭಾನುವಾರ, 1 ಮೇ 2011( 16:26 IST )
2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಸಂಸದೀಯ ಹಣಕಾಸು ಸಮಿತಿ ನೀಡಿರುವ ವರದಿಯನ್ನು ವರದಿಯೇ ಅಲ್ಲ ಎಂದು ವಾಗ್ದಾಳಿ ನಡೆಸಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಾಲ್, ಈ ಬಗ್ಗೆ ಲೋಕಸಭೆ ಸ್ಪೀಕರ್ ಮೀರಾಕುಮಾರ್ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಸಮಿತಿಯ ವರದಿಯನ್ನು ನೀಡುವಾಗ ಬಹುಮತ ಕಳೆದುಕೊಂಡಿರುವ ಜೋಷಿ ಏಕಪಕ್ಷೀಯವಾಗಿ ವರದಿಯನ್ನು ನೀಡಿದ್ದಾರೆ. ಬಹುಮತ ಇಲ್ಲದ ಕಾರಣ ಈ ವರದಿಯನ್ನು ಒಪ್ಪಲು ಸಾಧ್ಯವಿಲ್ಲ. ಆದರೂ ಸ್ಪೀಕರ್ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಎಂದು ಖಾಸಗಿ ಚಾನಲ್‌ಗೆ ನೀಡಿರುವ ಸಂದರ್ಭನದಲ್ಲಿ ಹೇಳಿದ್ದಾರೆ.
2ಜಿ ಹಗರಣಕ್ಕೆ ಸಂಬಂಧಿಸಿದಂತೆ ಪಿಎಸಿ ವರದಿಯನ್ನು ಜೋಷಿ ಶನಿವಾರ ಸ್ಪೀಕರ್ ಮೀರಾ ಕುಮಾರ್ ಅವರಿಗೆ ಸಲ್ಲಿಸಿದ್ದರು. ಇದನ್ನು ಸಂಸತ್‌ನಲ್ಲಿ ಮಂಡಿಸಬೇಕೆ? ಬೇಡವೇ ಎಂಬುದು ಚರ್ಚೆಯಾಗಬೇಕು. ಆದರೆ ಬಹುಮತ ಕಳೆದುಕೊಂಡಿರುವ ಸಮಿತಿ ವರದಿಯನ್ನು ಒಪ್ಪುವುದಾದರೂ ಹೇಗೆ ಎಂದು ಸಿಬಾಲ್ ಪ್ರಶ್ನಿಸಿದ್ದಾರೆ. ಆದರೆ ಇದೀಗ ವರದಿ ಸ್ಪೀಕರ್ ಕೈಗೆ ಸೇರಿರುವುದರಿಂದ ಅವರ ನಿರ್ಧಾರವೇ ಅಂತಿಮವಾಗಲಿದೆ ಎಂದು ಸ್ಪಷ್ಟಪಡಿಸಿದರು.
ಏಪ್ರಿಲ್ 28ರಂದು ನಡೆದ ಪಿಎಸಿ ಸಮಿತಿ ಸಭೆಯೇ ಒಂದು ದೊಡ್ಡ ನಾಟಕ. 11ಜನ ಸದಸ್ಯರಲ್ಲಿ ಕಾಂಗ್ರೆಸ್, ಡಿಎಂಕೆ, ಬಿಎಸ್ಪಿ, ಎಸ್‌ಪಿ ಸದಸ್ಯರು ಜೋಷಿ ವರದಿಯನ್ನು ತಿರಸ್ಕರಿಸಿದ್ದಾರೆ. ಈಗಾಗಲೇ ಅವರೇ ನಿರ್ಧರಿಸಿರುವಂತೆ ಸಮಿತಿಗೆ ನೂತನ ಸದಸ್ಯರನ್ನು ನೇಮಕ ಮಾಡಿಕೊಂಡಿದ್ದಾರೆ. ವರದಿಯನ್ನು ಸಂಸತ್‌ಗೆ ನೀಡಬಾರದೆಂದು ಸಮಿತಿಯ ಸದಸ್ಯರೇ ಹೇಳಿರುವಾಗ ನಾವು ಇದನ್ನು ಒಪ್ಪಬೇಕೋ ಅಥವಾ ಬಿಡಬೇಕೋ ಎಂಬುದರ ಬಗ್ಗೆ ಶೀಘ್ರದಲ್ಲೇ ನಿರ್ಧರಿಸಬೇಕು ಎಂದರು.