ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿ ಜತೆ ವೈಎಸ್‌ಆರ್ ಕಾಂಗ್ರೆಸ್ ವಿಲೀನ: ಚಿರಂಜೀವಿ (Chiranjeevi | predicts | YSR Congress-BJP Merger | Kadapa)
ಬಿಜೆಪಿ ಜತೆ ವೈಎಸ್‌ಆರ್ ಕಾಂಗ್ರೆಸ್ ವಿಲೀನ: ಚಿರಂಜೀವಿ
ಕಡಪ, ಸೋಮವಾರ, 2 ಮೇ 2011( 15:15 IST )
ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ವೈ.ಎಸ್.ಜಗನ್ಮೋಹನ ರೆಡ್ಡಿ ಬಿಜೆಪಿ ಜತೆ ಸಖ್ಯ ಹೊಂದಿದ್ದಾರೆ ಎಂದು ಪ್ರಜಾರಾಜ್ಯಂ ಪಕ್ಷದ ಮುಖಂಡ ಚಿರಂಜೀವಿ ಆಪಾದಿಸಿದರು.
ಕಡಪ, ಚೆನ್ನೂರು, ಖಾಜಿಪೇಟೆ ಮೊದಲಾದ ಕಡೆ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಿದ ಚಿರಂಜೀವಿ, ಮುಸ್ಲಿಮರಿಗೆ ಶೇ.10ರಷ್ಟು ಮೀಸಲಾತಿ ನೀಡಿದರೆ ತಾವು ಬಿಜೆಪಿಯೊಂದಿಗೆ ಕೈಜೋಡಿಸಲು ಸಿದ್ಧ ಎಂದು ಜಗನ್ ಹೇಳಿದ್ದರು. ಈ ಹೇಳಿಕೆ ಗಮನಿಸಿದರೆ ಇಂದಲ್ಲ ನಾಳೆ ಅವರು ಬಿಜೆಪಿ ಸೇರುವ ಉದ್ದೇಶ ಹೊಂದಿರುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಇನ್ನು ಕೆಲವೇ ದಿನಗಳಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಬಿಜೆಪಿಯೊಂದಿಗೆ ವಿಲೀನವಾಗಲಿದೆ. ಜಗನ್ ಮುಸ್ಲಿಂ ಮತದಾರರನ್ನು ವಂಚಿಸುತ್ತಿದ್ದಾರೆ ಎಂದು ಚಿರಂಜೀವಿ ಹೇಳಿದರು. ಸೋನಿಯಾ ಗಾಂಧಿ ಅವರನ್ನು ಟೀಕಿಸುವ ಮೂಲಕ ಜಗನ್ ಮಹಿಳಾ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ಅವರು ಸರಕಾರ ಅಸ್ಥಿರಗೊಳಿಸುವ ಹುನ್ನಾರ ನಡೆಸಿದ್ದಾರೆ ಎಂದು ಅವರು ಆಪಾದಿಸಿದರು.
ಉಪ ಚುನಾವಣೆ ಸ್ವಾಭಿಮಾನ ಮತ್ತು ಅಹಂಕಾರದ ನಡುವಿನ ಸ್ಪರ್ಧೆಯಾಗಿದೆ ಎಂದು ಜಗನ್ ನೀಡಿರುವ ಹೇಳಿರುವುದಲ್ಲಿ ಯಾವುದೇ ಹುರುಳಿಲ್ಲ ಎಂದು ಚಿರಂಜೀವಿ ಹೇಳಿದರು.