ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್ ಎಲ್ಲ ಉಗ್ರ ಸಂಘಟನೆಗಳಿಗೆ ಅಂತ್ಯ ಹಾಡ್ಬೇಕು: ಸಿಂಗ್ (Osama bin Laden | Killed | Prime Minister | Manmohan Singh |Significant step)
ಪಾಕ್ ಎಲ್ಲ ಉಗ್ರ ಸಂಘಟನೆಗಳಿಗೆ ಅಂತ್ಯ ಹಾಡ್ಬೇಕು: ಸಿಂಗ್
ನವದೆಹಲಿ, ಮಂಗಳವಾರ, 3 ಮೇ 2011( 10:38 IST )
ಅಲ್‌ಖೈದಾ ಉಗ್ರ ಒಸಾಮಾ ಬಿನ್ ಲಾಡೆನ್ ಹತ್ಯೆ ಮಹತ್ವದ ಹೆಜ್ಜೆಯಾಗಿದೆ ಎಂದು ಬಣ್ಣಿಸಿರುವ ಪ್ರಧಾನಿ ಮನಮೋಹನ ಸಿಂಗ್, ಇನ್ನು ಮುಂದಾದರೂ ಉಗ್ರರ ನಿಗ್ರಹಕ್ಕಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಅಂತಾರಾಷ್ಟ್ರೀಯ ಸಮುದಾಯ ಹಾಗೂ ಪಾಕಿಸ್ತಾನವನ್ನು ಒತ್ತಾಯಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಲಾಡೆನ್‌ನನ್ನು ಅಬೋಟಾಬಾದ್‌ನಲ್ಲಿ ಹತ್ಯೆಯ ಕುರಿತು ಅವರು ಖಚಿತ ಪಡಿಸಿದ ನಂತರ ಈ ಕುರಿತು ಪ್ರತಿಕ್ರಿಯಿಸಿದ ಪ್ರಧಾನಿ ಮನಮೋಹನ ಸಿಂಗ್, ಲಾಡೆನ್ ಹತ್ಯೆಯಿಂದ ಅಲ್‌ಖೈದಾ ಹಾಗೂ ಇತರೆ ಭಯೋತ್ಪಾದಕ ಗುಂಪುಗಳಿಗೆ ನೀಡಿದ ದೊಡ್ಡ ಹೊಡೆತವಾಗಿದೆ ಎಂದು ಹೇಳಿದ್ದಾರೆ.
ಅಮಾಯಕರು, ಮಹಿಳೆಯರು ಮತ್ತು ಮಕ್ಕಳ ಮೇಲೆ ಭಯೋತ್ಪಾದಕರು ದಾಳಿ ನಡೆಸುವ ಮೂಲಕ ನಾಗರಿಕ ಸಮಾಜಕ್ಕೆ ಬೆದರಿಕೆಯೊಡ್ಡುವ ಭಯೋತ್ಪಾದಕ ಗುಂಪುಗಳ ಚಟುವಟಿಕೆಗಳಿಗೆ ಅಂತ್ಯ ಹಾಡಲು ಅಂತಾರಾಷ್ಟ್ರೀಯ ಸಮುದಾಯ ಹಾಗೂ ವಿಶೇಷವಾಗಿ ಪಾಕಿಸ್ತಾನ, ದೇಶದಲ್ಲಿರುವ ಎಲ್ಲಾ ಉಗ್ರರು ಹಾಗೂ ಸಂಘಟನೆಯನ್ನು ಬೇರು ಸಹಿತ ಕಿತ್ತೊಗೆಯಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದ್ದಾರೆ.