2ಜಿ ಹಗರಣ ಕುರಿತಂತೆ ಸಿಬಿಐ ಚಾರ್ಜ್‌ಶೀಟ್ ಅನ್ವಯ ಜಾರಿ ನಿರ್ದೇಶನಾಲಯ ಡಿಎಂಕೆ ಸಂಸದೆ ಕನಿಮೋಳಿ ಹಾಗೂ ಇತರೆ ನಾಲ್ಕು ಮಂದಿಗೆ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.
ಡಿಎಂಕೆ ಸಂಸದೆ ಕನ್ನಿಮೋಳಿ, ಡಿಎಂಕೆ ಮಾಲೀಕತ್ವದ ಕಲೈಂಜರ್ ಟಿವಿ ಮ್ಯಾನೇಜಿಂಗ್ ಡೈರೆಕ್ಟರ್ ಶರದ್ ಕುಮಾರ್, ಸ್ವಾನ್ ಟೆಲಿಕಾಂ ಸಂಸ್ಥೆಯ ಶಾಹಿದ್ ಉಸ್ಮಾನ್ ಬಾಲ್ವಾ ಅವರ ಸಹೋದರ ಆಸಿಫ್ ಬಾಲ್ವಾ, ಕುಸೆಗಾನ್ ಫ್ರೂಟ್ಸ್ ಅಂಡ್ ವೆಜಿಟೆಬಲ್ಸ್ ಸಂಸ್ಥೆಯ ನಿರ್ದೇಶಕ ರಾಜೀವ್ ಅಗರ್‌ವಾಲ್ ಹಾಗೂ ಸಿನಿಯುಗ್ ಪ್ರೈವೇಟ್ ಲಿಮಿಟೆಡ್‌ನ ಕರೀಂ ಮುರಾನಿ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನೋಟಿಸ್ ಪಡೆದವರೆಲ್ಲರೂ ತಮ್ಮ ಆದಾಯ ಮತ್ತು ಆಸ್ತಿಯ ಕುರಿತು ದಾಖಲೆ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯ ಸೂಚಿಸಿದೆ.
2ಜಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ದೂರ ಸಂಪರ್ಕ ಖಾತೆ ಮಾಜಿ ಸಚಿವ ಎ.ರಾಜಾ ಹಾಗೂ ದೂರವಾಣಿ ಇಲಾಖೆ ಕಾರ್ಯದರ್ಶಿ ಸಿದ್ಧಾರ್ಥ ಬೆರ್ಹು ಸೇರಿದಂತೆ ಇತರೆ 8 ಮಂದಿ ವಿರುದ್ಧ ಏಪ್ರಿಲ್ 2ರಂದು ಆರೋಪ ಪಟ್ಟಿ ಸಲ್ಲಿಸಿತ್ತು. ಈ ಕುರಿತು ವಿಚಾರಣೆ ನಡೆಸುತ್ತಿರುವ ಸಿಬಿಐ 2ಜಿ ತರಂಗಾಂತರ ಅಸಮರ್ಪಕ ಹಂಚಿಕೆಯಿಂದಾಗಿ 30.984 ಕೋಟಿ ರೂ.ನಷ್ಟವಾಗಿದೆ ಎಂದು ಆಪಾದಿಸಿತ್ತು.
ಈ ಪ್ರಕರಣದಲ್ಲಿ ರಿಲೆಯನ್ಸ್ ಟೆಲಿಕಾಂ, ಯೂನಿಟೆಕ್ ವೈರ್‌ಲೆಸ್ ಹಾಗೂ ಸ್ವಾನ್ ಟೆಲಿಕಾಂ ವಿರುದ್ಧವೂ ಸೆಹಲಿ ಹೈಕೋರ್ಟ್‌ನಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.
2ಜಿ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಸಂಸ್ಥೆ ಏಪ್ರಿಲ್ 25ರಂದು ಸಲ್ಲಿಸಿದ್ದ ಎರಡನೇ ಆರೋಪ ಪಟ್ಟಿಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರ ಪುತ್ರಿ ಕನೊಮೋಳಿ, ಆಸಿಫ್, ಕುಮಾರ್, ರಾಜೀವ್ ಅವರು ಪ್ರಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂದು ಆಪಾದಿಸಿತ್ತು.