ಪ್ರಧಾನಿ ಮನಮೋಹನ ಸಿಂಗ್ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಕೊಲೆ ಮಾಡುವುದಾಗಿ ಅನಾಮಧೇಯ ಬೆದರಿಕೆ ಕರೆಯೊಂದು ಬಂದಿದ್ದು, ಈ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳು ದೂರವಾಣಿ ಕರೆ ಎಲ್ಲಿಂದ ಬಂದಿದೆ ಎಂಬ ಬಗ್ಗೆ ಪತ್ತೆ ಹಚ್ಚಲು ತೀವ್ರ ಶೋಧ ನಡೆಸುತ್ತಿವೆ.
ದೆಹಲಿ ಪೊಲೀಸ್ ಕಂಟ್ರೋಲ್ ರೂಂಗೆ ಅನಾಮಧೇಯ ವ್ಯಕ್ತಿಯೊಬ್ಬ ಮೊಬೈಲ್ನಿಂದ ಕರೆ ಮಾಡಿ ಪ್ರಧಾನಿ ಮನಮೋಹನ ಸಿಂಗ್ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.
ದೂರವಾಣಿ ಕರೆ ಕುರಿತು ತನಿಖೆ ನಡೆಸಿದ ಸಂದರ್ಭದಲ್ಲಿ ಗಾಜಿಯಾಬಾದ್ನಿಂದ ಫೋನ್ ಮಾಡಲಾಗಿತ್ತು ಎಂಬುದು ಪತ್ತೆಯಾಗಿದೆ.
ಮೊಬೈಲ್ ಸಿಮ್ ಪಡೆಯುವ ಸಂದರ್ಭದಲ್ಲಿ ಸುಳ್ಳು ವಿಳಾಸ ನೀಡಿರುವುದು ಪತ್ತೆಯಾಗಿದೆ. ಗಾಜಿಯಾಬಾದ್ನ ಸಂಜಯ್ನಗರದ ರಾಮ್ ಅವತಾರ್ ಅವರ ಹೆಸರು ನೀಡಲಾಗಿತ್ತು. ಈ ವಿಳಾಸ ಸುಳ್ಳು ಎಂದು ತಿಳಿದು ಬಂದಿದೆ ಎಂದು ಈ ಕುರಿತು ತನಿಖೆ ನಡೆದುತ್ತಿರುವ ಗಾಜಿಯಾಬಾದ್ ಜಿಲ್ಲಾ ರಕ್ಷಣಾಧಿಕಾರಿ ರಘುಬೀರ್ಲಾಲ್ ತಿಳಿಸಿದ್ದಾರೆ.