ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎಂಜಿನಿಯರ್ ಹತ್ಯೆ; ಬಿಎಸ್ಪಿ ಶಾಸಕನಿಗೆ ಜೀವಾವಧಿ ಶಿಕ್ಷೆ (Pwd Engineer | Murder Case | BSP MLA | Shekhar Tiwari | Convicted)
2008ರಲ್ಲಿ ನಡೆದ ಪಿಡಬ್ಲ್ಯೂಡಿ ಎಂಜಿನಿಯರ್‌ ಮನೋಜ್‌ ಕುಮಾರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಬಿಎಸ್‌ಪಿ ಶಾಸಕ ಶೇಖರ್‌ ತಿವಾರಿ ದೋಷಿ ಎಂದು ತೀರ್ಪು ನೀಡಿ, ಜೀವಾವಧಿ ಶಿಕ್ಷೆ ವಿಧಿಸಿದೆ.

ಪ್ರಕರಣದಲ್ಲಿ ತಿವಾರಿ ಹಾಗೂ ಇತರೆ ಒಂಬತ್ತು ಮಂದಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರಲ್ಲಿ ತಿವಾರಿ ಅವರ ಪತ್ನಿ ವಿಭಾ ಅವರಿಗೆ ಎರಡೂವರೆ ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದಲ್ಲಿ ತಿವಾರಿ ಹಾಗೂ ಇತರೆ ಒಂಬತ್ತು ಮಂದಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರಲ್ಲಿ ತಿವಾರಿ ಅವರ ಪತ್ನಿ ವಿಭಾ ಅವರಿಗೆ ಎರಡೂವರೆ ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ.

ಔರಯ್ಯಾ ಕ್ಷೇತ್ರದ ಬಿಎಸ್‌ಪಿ ಶಾಸಕ ಶೇಖರ್‌ ತಿವಾರಿ ಪಿಡಬ್ಲ್ಯೂಡಿ ಎಕ್ಸಿಕಿಟ್ಯೂವ್‌ ಎಂಜಿನಿಯರ್‌ ತಮ್ಮ ಬೆಂಬಲಿಗರಿಗೆ ಗುತ್ತಿಗೆ ನೀಡಲಿಲ್ಲ ಎಂಬ ಕಾರಣಕ್ಕೆ ಎಂಜಿನಿಯರ್‌ ಮನೋಜ್‌ ಕುಮಾರ್‌ ಅವರನ್ನು 2008 ರ ಡಿ.24 ರಂದು ಕೊಲೆ ಮಾಡಿದ್ದರು ಎಂದು ಆಪಾದಿಸಲಾಗಿತ್ತು.
ಇವನ್ನೂ ಓದಿ