ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಒಸಾಮಾ ಬಿನ್ ಲಾಡೆನ್ ಸತ್ತಿದ್ದು ಹೇಗೆ?: ಕಸಬ್ ಕುತೂಹಲ (Pakistan | al-Qaida | Osama Bin Laden | Ajmal Amir Kasab | Mumbai attack)
ಒಸಾಮಾ ಬಿನ್ ಲಾಡೆನ್ ಸತ್ತಿದ್ದು ಹೇಗೆ?: ಕಸಬ್ ಕುತೂಹಲ
ಮುಂಬೈ, ಶನಿವಾರ, 7 ಮೇ 2011( 09:54 IST )
PR
ಜಗತ್ತಿನ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಯಾವ ರೀತಿ ಸತ್ತ ಎಂಬ ಬಗ್ಗೆ ಮುಂಬೈ ದಾಳಿಯಲ್ಲಿ ಸೆರೆಸಿಕ್ಕಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಉಗ್ರ ಮೊಹಮ್ಮದ್ ಅಜ್ಮಲ್ ಅಮಿರ್ ಕಸಬ್‌ಗೆ ಭಾರಿ ಕುತೂಹಲದಿಂದ ಪ್ರಶ್ನಿಸಿದ್ದ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ ಖಾಯಿದಾ ವರಿಷ್ಠ ಒಸಾಮಾ ಬಿನ್ ಲಾಡೆನ್ ಅಮೆರಿಕ ವಿಶೇಷ ಸೇನಾಪಡೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವ ಸುದ್ದಿ ಬಿತ್ತರವಾಗುತ್ತಿದ್ದಂತೆ ಮುಂಬೈನ ಅರ್ಥರ್ ಜೈಲಿನಲ್ಲಿರುವ ಉಗ್ರ ಕಸಬ್ ಜೈಲು ಅಧಿಕಾರಿಗಳಲ್ಲಿ ಲಾಡೆನ್ ಹೇಗೆ ಸತ್ತ ಎಂದು ಕೇಳುತ್ತಿದ್ದನಂತೆ.
ಮೇ 1ರಂದು ಲಾಡೆನ್ ಹತ್ಯೆಯಾಗುತ್ತಿದ್ದಂತೆಯೇ ಕಸಬ್ ಭದ್ರತೆಗೆ ನಿಯೋಜಿತವಾಗಿರುವ ಭದ್ರತಾ ಸಿಬ್ಬಂದಿ ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದರು. ಈ ಮಾತನ್ನು ಕೇಳಿಸಿಕೊಂಡು ಕಸಬ್ ಕೂಡ, ಲಾಡೆನ್ ಹೇಗೆ ಸತ್ತ ತಿಳಿಸಿ ಎಂದು ಭದ್ರತಾ ಸಿಬ್ಬಂದಿಗೆ ಪ್ರಶ್ನಿಸಲಾರಂಭಿಸಿದ್ದ.
ಜಿಹಾದ್ ಹೋರಾಟದಿಂದಾಗಿಯೇ ಆತನ ಪ್ರಾಣ ಹೋಗಿದೆ (ಜಿಹಾದ್ ಮೆ ಉಸ್ಕಿ ಜಾನ್ ಗಯಿ) ಎಂದು ಕಸಬ್‌ಗೆ ಅಧಿಕಾರಿಗಳು ಮಾಹಿತಿ ನೀಡಿದ್ದರಂತೆ. ಆದರೂ ಸಾಕಷ್ಟು ಕುತೂಹಲ ತಳೆದಿದ್ದ ಕಸಬ್ ಲಾಡೆನ್‌ನನ್ನು ಯಾರು ಕೊಂದರು? ಎಲ್ಲಿ ಕೊಂದರು? ಎಂಬ ಬಗ್ಗೆ ಪ್ರಶ್ನಿಸಿದ್ದನಂತೆ.
'ಆದರೆ ನಾವು ಆತನಿಗೆ ಹೆಚ್ಚಿನ ವಿವರಣೆ ನೀಡಿಲ್ಲ, ಅಮೆರಿಕದ ವಿಶೇಷ ಸೇನಾಪಡೆ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಲಾಡೆನ್‌ನನ್ನು ಹತ್ಯೆಗೈದಿರುವುದಾಗಿ ತಿಳಿಸಿದೆವು ಅಷ್ಟೇ' ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
9/11ರ ದಾಳಿ ನಡೆದು ಸುಮಾರು 10 ವರ್ಷಗಳ ನಂತರ ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದ ಒಸಾಮಾ ಬಿನ್ ಲಾಡೆನ್‌ನನ್ನ(54) ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಮೆರಿಕದ ವಿಶೇಷ ಸೇನಾಪಡೆ ಹತ್ಯೆಗೈದಿದ್ದವು.
ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಸೆರೆಸಿಕ್ಕಿದ್ದ ಏಕೈಕ ಉಗ್ರ ಪಾಕಿಸ್ತಾನ ಮೂಲದ ಮೊಹಮ್ಮದ್ ಅಮಿರ್ ಅಜ್ಮಲ್ ಕಸಬ್ ಮರಣದಂಡನೆ ಶಿಕ್ಷೆಯನ್ನು 2011 ಫೆಬ್ರುವರಿ 2ರಂದು ವಿಚಾರಣಾಧೀನ ಕೋರ್ಟ್ ಕೂಡ ಎತ್ತಿಹಿಡಿದಿತ್ತು.
ಇದೀಗ ಕಸಬ್ ಅರ್ಥೂರ್ ರೋಡ್ ಜೈಲಿನ ಬಾಂಬ್ ಪ್ರೂಪ್ ಮೊಟ್ಟೆಯಾಕಾರದ ಕೋಣೆಯಲ್ಲಿ ಬಿಗಿ ಭದ್ರತೆ ನಡುವೆ ಕಾಲ ಕಳೆಯುತ್ತಿದ್ದಾನೆ. ಏತನ್ಮಧ್ಯೆ ಕಸಬ್ ತನ್ನ ಜೈಲರ್ ಮೂಲಕ ಸುಪ್ರೀಂಕೋರ್ಟ್‌ಗೆ ಪ್ರಸ್ತಾಪವೊಂದನ್ನು ಕಳುಹಿಸಿದ್ದು, ತಾನು ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಮನವಿ ಮಾಡಿಕೊಂಡಿದ್ದ.