ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯುಪಿ: ರೈತ ದಂಗೆ-ಹಿಂಸಾಚಾರಕ್ಕೆ ಪೊಲೀಸರಿಬ್ಬರು ಬಲಿ (Greater Noida | Farmers' stir | violent | CM Mayawati | cops killed)
ಉತ್ತರ ಪ್ರದೇಶ ಸರಕಾರ ಅಭಿವೃದ್ಧಿ ಹೆಸರಿನಲ್ಲಿ ಭೂಮಿ ವಶಪಡಿಸಿಕೊಳ್ಳುವುದನ್ನು ವಿರೋಧಿಸಿ ಗ್ರೇಟರ್ ನೋಯ್ಡಾದ ರೈತರು ಶನಿವಾರ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಇಬ್ಬರು ಪೊಲೀಸ್ ಕಾನ್ಸ್‌ಸ್ಟೇಬಲ್ ಬಲಿಯಾಗಿದ್ದಾರೆ.

ಹೆಚ್ಚಿನ ಪೊಲೀಸ್ ಪಡೆ ಬಂದ ನಂತರ ಗ್ರಾಮವನ್ನು ಪ್ರವೇಶಿಸುವುದು ಎಂಬ ಲೆಕ್ಕಚಾರದಲ್ಲಿ ಪೊಲೀಸರು ಗ್ರಾಮದ ಹೊರಗೆ ಕಾಯುತ್ತಿದ್ದರು. ನಂತರ ತೀವ್ರ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರನ್ನು ಪ್ರತಿಭಟನೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯೋಜಿಸಿದ್ದರು ಎಂದು ಪ್ರಾಥಮಿಕ ವರದಿಯೊಂದು ತಿಳಿಸಿದೆ.

ಏತನ್ಮಧ್ಯೆ ಪೊಲೀಸ್ ಪಡೆ ಮತ್ತು ಗ್ರಾಮಸ್ಥರ ನಡುವೆ ಸಾಕಷ್ಟು ಬಾರಿ ಜಟಾಪಟಿ ನಡೆದಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಅಷ್ಟೇ ಅಲ್ಲ ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು ಕಂಡಲ್ಲಿ ಗುಂಡಿಕ್ಕಲು ಆದೇಶವನ್ನೂ ಕೊಟ್ಟಿದ್ದರು.

ಗೌತಮ್ ಬುದ್ಧ ನಗರದ ಜಿಲ್ಲಾಧಿಕಾರಿ ದೀಪಕ್ ಅಗರವಾಲ್ ಅವರು ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರ ಜತೆ ಸಂಧಾನದ ಮಾತುಕತೆ ನಡೆಸಲು ಪ್ರಯತ್ನ ನಡೆಸಿದ್ದರು. ಈ ಸಂದರ್ಭದಲ್ಲಿ ಅವರ ಕಾಲಿಗೂ ಗುಂಡೇಟು ತಗುಲಿ ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.

ಭಾಟ್ಟಾ ಪಾರಾಸುಲ್ ಗ್ರಾಮದಲ್ಲಿನ ಪ್ರತಿಭಟನಾ ನಿರತ ರೈತರು ಉತ್ತರ ಪ್ರದೇಶ ರೋಡ್‌ವೇಸ್ ಬಸ್‌ವೊಂದನ್ನು ತಡೆಗಟ್ಟಿ ನಿಲ್ಲಿಸಿ ಪ್ರಯಾಣಿಕರನ್ನು ಒತ್ತೆಯಾಳನ್ನಾಗಿ ಇಟ್ಟುಕೊಂಡಿದ್ದರು. ಅಲ್ಲಿಗೆ ಆಗಮಿಸಿದ್ದ ಪೊಲೀಸರು ಬಸ್ ಚಾಲಕ ಹಾಗೂ ಇಬ್ಬರು ಸಹಾಯಕರನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಉಳಿದ ಪ್ರಯಾಣಿಕರನ್ನು ಬಿಡಲು ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಈ ಸಂದರ್ಭದಲ್ಲಿ ಆಕ್ರೋಶಕ್ಕೆ ಒಳಗಾದ ರೈತರು ಪೊಲೀಸರತ್ತ ಕಲ್ಲು ತೂರಾಟ ನಡೆಸಲು ಆರಂಭಿಸಿದ್ದರು. ಆಗ ಪೊಲೀಸರು ಅಶ್ರವಾಯು ದಾಳಿ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇವನ್ನೂ ಓದಿ