ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್‌ನಲ್ಲಿರುವ ಭಾರತದ ಮೋಸ್ಟ್ ವಾಂಟೆಡ್ ಉಗ್ರರು (India release | 50 'most wanted | Pakistan | Dawood Ibrahim)
ಕುಖ್ಯಾತ ಪಾತಕಿ ದಾವೂದ್ ಇಬ್ರಾಹಿಂ, ಲಷ್ಕರ್ ಸಂಸ್ಥಾಪಕ ಹಫೀಜ್ ಸಯೀದ್, ಕುಖ್ಯಾತ ಭಯೋತ್ಪಾದಕ ಝಕಿ ಉರ್ ರಹಮಾನ್ ಜೊತೆಗೆ ಪಾಕಿಸ್ತಾನದ ಸೇನಾ ಪಡೆಯ ಐವರು ಅಧಿಕಾರಿಗಳೂ ಸೇರಿದಂತೆ ಪಾಕಿಸ್ತಾನದಲ್ಲಿರುವ 50 ಮಂದಿ ಮೋಸ್ಟ್‌ ವಾಂಟೆಡ್‌ ಕುಖ್ಯಾತರ ಪಟ್ಟಿಯನ್ನು ಬುಧವಾರ ಭಾರತ ಬಿಡುಗಡೆ ಮಾಡುವ ಮೂಲಕ ಪಾಕಿಸ್ತಾನದ ಮೇಲಿನ ಒತ್ತಡವನ್ನು ಹೆಚ್ಚಿಸಿದೆ.

ಮುಂಬೈ ದಾಳಿ ಹಾಗೂ ದೇಶಾದ್ಯಂತ ನಡೆದ ವಿವಿಧ ಸ್ಫೋಟ ಪ್ರಕರಣಗಳಲ್ಲಿ ಕೈವಾಡ ಹೊಂದಿರುವ ಹಫೀಜ್ ಸಯೀದ್‌‌ನ ಹೆಸರು ಪಟ್ಟಿಯ ಅಗ್ರಸ್ಥಾನದಲ್ಲಿದ್ದು, ಮುಂಬೈ ಸ್ಫೋಟದ ಆರೋಪಿಗಳಾದ ಮೆಮನ್ ಸಹೋದರರು, ದಾವೂದ್ ಸಹೋದರ ಅನೀಸ್ ಇಬ್ರಾಹಿಂ, ದಾವೂದ್ ಬಲಗೈ ಬಂಟ ಛೋಟಾ ಶಕೀಲ್ ಮುಂತಾದವರ ಹೆಸರುಗಳು ಪಟ್ಟಿಯಲ್ಲಿವೆ.

2001 ರಲ್ಲಿ ಸಂಸತ್‌ ಭವನದ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಪ್ರಮುಖ ಆರೋಪಿ, ಕಂದಹಾರ್ ವಿಮಾನ ಅಪಹರಣ ಪ್ರಕರಣದಲ್ಲಿ ಒತ್ತೆಯಾಳುಗಳಿಗೆ ಪ್ರತಿಯಾಗಿ ಬಿಡುಗಡೆಗೊಂಡಿದ್ದ ಜೈಷ್‌ ಎ ಮಹಮದ್‌ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್ ಕೂಡಾ ಈ ಪಟ್ಟಿಯಲ್ಲಿದ್ದಾನೆ.

ಟೈಮ್ಸ್ ನೌ ವರದಿ ಮಾಡಿರುವಂತೆ, ಭಾರತವು ಬಿಡುಗಡೆಗೊಳಿಸಿರುವ ಮೋಸ್ಟ್‌ ವಾಂಟೆಡ್‌ ಪಾತಕಿಗಳ ಪಟ್ಟಿ ಈ ರೀತಿ ಇದೆ.
ಹಫೀಜ್ ಮಹಮದ್‌ ಸಯೀದ್‌
ಸಾಜಿದ್‌ ಮಜೀದ್‌
ಸಯೀದ್‌ ಹಶೀಂ ಉರ್ ಅಬ್ದುರ್ ರೆಹಮಾನ್‌ ಪಾಶಾ
ಮೇಜರ್‌ ಇಕ್ಬಾಲ್‌
ಇಲ್ಯಾಸ್‌ ಕಾಶ್ಮೀರಿ
ರಷೀದ್‌ ಅಬ್ದುಲ್ಲಾ
ಮೇಜರ್‌ ಸಮೀರ್‌ ಅಲಿ
ದಾವೂದ್ ಇಬ್ರಾಹಿಂ
ಮೆಮನ್‌ ಇಬ್ರಾಹಿಂ
ಛೋಟಾ ಶಕೀಲ್‌
ಮೆಮನ್‌ ಅಬ್ದುಲ್‌ ರಜಾಕ್‌
ಅನೀಸ್‌ ಇಬ್ರಾಹಿಂ
ಅನ್ವರ್‌ ಅಹಮದ್‌ ಹಾಜಿ ಜಮಾಲ್‌
ಮಹಮದ್‌ ದೋಸಾ
ಜಾವೇದ್‌ ಚಿಕ್ನಾ
ಸಲೀಮ್‌ ಅಬ್ದುಲ್‌ ಗಾಝಿ
ರಿಯಾಜ್‌ ಖಾತ್ರಿ
ಮುನಾಫ್‌ ಹಲಾರಿ
ಮಹಮದ್ ಸಲೀಂ ಮುಜಾಹಿದ್‌
ಖಾನ್‌ ಬಷೀರ್‌ ಅಹಮದ್‌
ಯಾಕುಬ್‌ ಯೆದಾ ಖಾನ್‌
ಮೊಹಮದ್‌ ಮೆಮೊನ್‌
ಇರ್ಫಾನ್‌ ಚೌಗುಲೆ
ಫಿರೋಜ್‌ ರಷೀದ್‌ ಖಾನ್‌
ಅಲಿ ಮೂಸಾ
ಸಗೀರ್ ಅಲಿ ಶೇಖ್‌
ಅಫ್ತಾಬ್‌ ಬಟ್ಕಿ
ಮೌಲಾನಾ ಮಹಮದ್‌ ಮಸೂದ್‌ ಅಜರ್
ಸಲಾವುದ್ದೀನ್‌
ಆಝಾಂ ಚೀಮಾ
ಸಯೀದ್‌ ಝಬಿವುದ್ದೀನ್‌ ಜಬಿ
ಇಬ್ರಾಹಿಂ ಅತಾರ್
ಅಜರ್ ಯೂಸುಫ್‌
ಝಹೂರ್ ಇಬ್ರಾಹಿಂ ಮಿಸ್ತ್ರಿ
ಅಖ್ತರ್ ಸಯೀದ್‌
ಮೊಹಮದ್‌ ಶಕೀರ್
ರವೂಫ್‌ ಅಬ್ದುಲ್‌
ಅಮಾನುಲ್ಲಾ ಖಾನ್‌
ಸುಫಿಯಾನ್‌ ಮುಫ್ತಿ
ನಚಾನ್‌ ಅಕ್ಮಲ್‌
ಪಠಾಣ್ ಯಾಕೂಬ್‌ ಖಾನ್‌
ಕ್ಯಾಮ್‌ ಬಷೀರ್
ಲಖ್‌ಬೀರ್‌ ಸಿಂಗ್‌ ರೋಡೆ
ಪರಮಜಿತ್‌ ಸಿಂಗ್‌ ಪಮ್ಮ
ರಣಜಿತ್‌ಸಿಂಗ್‌
ವಾಧ್ವಾ ಸಿಂಗ್‌
ಅಬು ಹಮ್ಜಾ
ಝಕೀ ಉರ್‌ ರೆಹಮಾನ್‌ ಲಖ್ವಿ
ಅಮೀರ್ ರಾಜಾ ಖಾನ್‌
ಇವನ್ನೂ ಓದಿ