ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭೋಪಾಲ ಸಂತ್ರಸ್ತರಿಗೆ ಹೆಚ್ಚೇ ಪರಿಹಾರ ಕೊಟ್ಟಿದ್ದೇವೆ: ಮೊಯ್ಲಿ (Bhopal Gas Tragedy | Veerappa Moily | Supreme Court | Curative Petition | CBI)
ಭೋಪಾಲ ಅನಿಲ ದುರಂತಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಪ್ರಬಲ ಕೇಸು ದಾಖಲಿಸಿ ಶಿಕ್ಷೆಗೆ ಗುರಿಪಡಿಸುವ ಕುರಿತಾಗಿ ಸಿಬಿಐ ಸಲ್ಲಿಸಿದ ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಪ್ರತಿಕ್ರಿಯಿಸಿದ್ದು : "ನಾವು ಅನಿಲ ದುರಂತ ಸಂತ್ರಸ್ತರಿಗೆ ಸಾಕಷ್ಟು ಪರಿಹಾರ ನೀಡಿದ್ದೇವೆ, ಕೋರ್ಟ್ ತೀರ್ಪಿಗೆ ಬದ್ಧರಾಗಿರುತ್ತೇವೆ"!

'ನಾವು ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ಮರುಪರಿಶೀಲನಾ ಅರ್ಜಿಯನ್ನು ನಮ್ಮ ಸಚಿವರ ಗುಂಪು ಸಲ್ಲಿಸಬೇಕಿತ್ತು, ಸಲ್ಲಿಸಿದೆ. ಅದನ್ನು ಸುಪ್ರೀಂ ಕೋರ್ಟ್ ಈಗ ತಿರಸ್ಕರಿಸಿದೆ. ಈ ನಿರ್ಧಾರ ಸರಿಯೋ ತಪ್ಪೋ ಹೇಳುವುದು ಸರಿಯಾಗಲಾರದು' ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮೊಯ್ಲಿ ಹೇಳಿದರು.

ಸಂತ್ರಸ್ತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗಿದೆಯೇ, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಿದೆಯೇ ಎಂದು ಪತ್ರಕರ್ತರು ಮತ್ತೆ ಮತ್ತೆ ಕೇಳಿದಾಗ ಕೋಪಗೊಂಡಂತೆ ಕಂಡುಬಂದ ಮೊಯ್ಲಿ, 'ನೋಡಿ, ನಾವು ಹೆಚ್ಚೇ ಪರಿಹಾರ ನೀಡಿದ್ದೇವೆ, ಭಾರತ ಸರಕಾರವು ಹೆಚ್ಚು ಹೆಚ್ಚು ಹಣ ಬಿಡುಗಡೆ ಮಾಡಿದ್ದೇವೆ. ನಾವು ಅವರ ಸಹಾಯಕ್ಕೆ ಬಂದಿದ್ದೇವೆ. ಇದಕ್ಕೆಲ್ಲಾ ದಾಖಲೆ ಇವೆ' ಎಂದರು.

ಕಳೆದ ವರ್ಷದ ಆಗಸ್ಟ್ 31ರಂದು ಭೋಪಾಲ ದುರಂತದ ಕೇಸನ್ನು ಪುನಃ ತೆರೆದಿದ್ದ ಸುಪ್ರೀಂ ಕೋರ್ಟು, ಆರೋಪಿಗಳಿಗೆ ಗರಿಷ್ಠ 10 ವರ್ಷಗಳ ಶಿಕ್ಷೆ ವಿಧಿಸಬಹುದಾದ ಸಾಮೂಹಿಕ ನರಮೇಧ ಆರೋಪ ಹೊರಿಸಲು ಅವಕಾಶ ನೀಡಬೇಕೆಂಬ ಸಿಬಿಐ ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿತ್ತು. 1996ರ ತೀರ್ಪಿನಲ್ಲಿ ಆರೋಪಿಗಳ ವಿರುದ್ಧ ಕನಿಷ್ಠ ಆರೋಪವನ್ನು ಹೊರಿಸಲಾಗಿದ್ದು, ಅವರಿಗೆ ಕನಿಷ್ಠ ಶಿಕ್ಷೆಯನ್ನೂ ವಿಧಿಸಲಾಗಿತ್ತು.
ಇವನ್ನೂ ಓದಿ