ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಸ್ಸಾಂ: ಕಾಂಗ್ರೆಸ್ ಮರಳಿ ಅಧಿಕಾರಕ್ಕೆ, ವಿಜಯದ ಹ್ಯಾಟ್ರಿಕ್ (Assam Election Results 2011 | AGP | Congress | BJP | Assom)
ಗುವಾಹಟಿ: ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಹ್ಯಾಟ್ರಿಕ್ ವಿಜಯ ಸಾಧಿಸಿದ್ದು, ಮುಖ್ಯಮಂತ್ರಿ ತರುಣ್ ಗೊಗೊಯ್ ಪುನಃ ಸರಕಾರ ರಚಿಸಲಿದ್ದಾರೆ. ಪ್ರತಿಪಕ್ಷ ಅಸ್ಸಾಂ ಗಣಪರಿಷತ್‌ನ ಅಧ್ಯಕ್ಷರೇ ಸೋಲನ್ನಪ್ಪಿರುವುದು ಅದಕ್ಕೆ ದೊರೆತ ಮತ್ತೊಂದು ಆಘಾತ. 126 ಸ್ಥಾನಗಳ ವಿಧಾನಸಭೆಯಲ್ಲಿ 74 ಸ್ಥಾನಗಳನ್ನೂ ಬುಟ್ಟಿಗೆ ಹಾಕಿಕೊಂಡಿರುವ ಕಾಂಗ್ರೆಸ್ 3ನೇ ಬಾರಿಗೆ ಅಧಿಕಾರಕ್ಕೇರಿದೆ.

126 ಕ್ಷೇತ್ರಗಳ ಅಸ್ಸಾಂನಲ್ಲಿ ಕಾಂಗ್ರೆಸ್ 74, ಎಜಿಪಿ 11, ಬಿಜೆಪಿ 5 ಹಾಗೂ ಇತರರು 36 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ.

ವಿಶೇಷವೆಂದರೆ, ಎಜಿಪಿ ಮುಖ್ಯಸ್ಥ ಚಂದ್ರ ಮೋಹನ್ ಪಟೋವರಿ ಅವರು ಧರ್ಮಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಎದುರು 5353 ಮತಗಳ ಅಂತರದಿಂದ ಸೋತಿದ್ದಾರೆ.

ತಮ್ಮ ಸರಕಾರ ನಡೆಸಿದ ಆರ್ಥಿಕ ಅಭಿವೃದ್ಧಿ ಕಾರ್ಯಗಳೇ ಕಾಂಗ್ರೆಸ್ಸನ್ನು ಮರಳಿ ಅಧಿಕಾರಕ್ಕೇರಿಸಿದೆ ಎಂದು ಮುಖ್ಯಮಂತ್ರಿ ಗೊಗೊಯ್ ಪ್ರತಿಕ್ರಿಯಿಸಿದ್ದಾರಲ್ಲದೆ, ಉಲ್ಫಾ ಉಗ್ರಗಾಮಿಗಳೊಂದಿಗೆ ಶಾಂತಿ ಮಾತುಕತೆಗೆ ಪ್ರಯತ್ನಿಸಿರುವುದು ಕೂಡ ತಮ್ಮ ಪಕ್ಷಕ್ಕೆ ಓಟುಗಳನ್ನು ತಂದೊಡ್ಡಿವೆ ಎಂದು ಹೇಳಿದ್ದಾರೆ.

ಈ ಮಧ್ಯೆ, ಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಮತ್ತು ಎಜಿಪಿ ನಾಯಕ ಪ್ರಫುಲ್ಲ ಕುಮಾರ್ ಮೊಹಂತ ಕೂಡ ಒಂದೆಡೆ (ಸಮಗುರಿ ಕ್ಷೇತ್ರ) ಕಾಂಗ್ರೆಸ್ ಎದುರು ಸೋಲನ್ನಪ್ಪಿದ್ದರೆ, ಬರ್ಹಾಂಪುರ ಕ್ಷೇತ್ರದಲ್ಲಿ ಜಯ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

2006ರ ಚುನಾವಣೆಗಳಲ್ಲಿ ಕಾಂಗ್ರೆಸ್ ಮೈತ್ರಿಕೂಟವು 72 ಸ್ಥಾನಗಳಲ್ಲಿ ವಿಜಯ ಸಾಧಿಸಿದ್ದರೆ, ಪ್ರತಿಪಕ್ಷ ಎಜಿಪಿ 24, ಬಿಜೆಪಿ 10 ಹಾಗೂ ಎಐಯುಡಿಎಫ್ 10 ಸ್ಥಾನಗಳಲ್ಲಿ ವಿಜಯ ಸಾಧಿಸಿತ್ತು.
ಇವನ್ನೂ ಓದಿ