ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮತದಾರನಿಗೆ ಶಾಕ್: ಪೆಟ್ರೋಲ್ ಬೆಲೆ 5 ರೂ ಏರಿಕೆ (Petrol Price hike | UPA | Aam Admi | Inflation | Business)
ಐದು ರಾಜ್ಯಗಳ ಚುನಾವಣಾ ಫಲಿತಾಂಶಗಳು ಹೊರಬಿದ್ದ ತಕ್ಷಣವೇ ದೇಶದ ಮತದಾರರಿಗೆ ಶಿಕ್ಷೆ ದೊರೆತಂತಾಗಿದೆ. ಈಗಾಗಲೇ ಏರುತ್ತಿರುವ ಬೆಲೆಗಳಿಂದ ತತ್ತರಿಸಿರುವ ಜನರಿಗೆ ಮತ್ತೊಂದು ಶಾಕ್ ನೀಡಲಾಗಿದ್ದು, 9 ತಿಂಗಳಲ್ಲಿ 9ನೇ ಬಾರಿಗೆ ಪೆಟ್ರೋಲ್ ಬೆಲೆಯನ್ನು ಏರಿಸಲಾಗಿದ್ದು, ಶನಿವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಲೀಟರಿಗೆ 5 ರೂಪಾಯಿ ಏರಿಸಲಾಗಿದೆ.

ಜನವರಿಯಿಂದೀಚೆಗೆ ಚುನಾವಣೆಗಳ ಹಿನ್ನೆಲೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಆತಂಕದಿಂದಲೋ ಎಂಬಂತೆ ತಡೆ ಹಿಡಿಯಲಾಗಿದ್ದ ದರ ಏರಿಕೆ ಪ್ರಕ್ರಿಯೆಯನ್ನು ಈಗ ಅತ್ಯಧಿಕ ಎನಿಸಬಹುದಾದಷ್ಟು ದರ ಏರಿಕೆ ಘೋಷಿಸಿವೆ ತೈಲ ಕಂಪನಿಗಳು. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರವು ಎರಡೂವರೆ ವರ್ಷಗಳಲ್ಲೇ ಅತ್ಯಧಿಕ ಮಟ್ಟಕ್ಕೆ ಏರಿರುವುದೇ ಈ ಬೆಲೆ ಏರಿಕೆ ಕಾರಣ ಎಂದು ತೈಲ ಕಂಪನಿಗಳು ಹೇಳಿವೆ.

ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಂಪನಿಗಳು ಲೀಟರಿಗೆ 4.99 ರೂ.ನಿಂದ 5.01 ರೂ.ವರೆಗೆ ಏರಿಕೆ ಘೋಷಿಸಿವೆ. ಇದರ ಪರಿಣಾಮವಾಗಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರಿಗೆ 5 ರೂ., ಮುಂಬೈಯಲ್ಲಿ 5.25 ರೂ., ಚೆನ್ನೈಯಲ್ಲಿ 5.29 ರೂ. ಹಾಗೂ ಕೋಲ್ಕತಾದಲ್ಲಿ 5.21 ರೂ. ಏರಿಕೆಯಾಗಲಿದೆ.

ಈಗಾಗಲೇ ಏರುತ್ತಿರುವ ಹಣದುಬ್ಬರಕ್ಕೆ ಪೆಟ್ರೋಲ್ ಬೆಲೆಯೇ ಮೂಲ ಹೇತುವಾಗಿದ್ದು, ಹಣದುಬ್ಬರ ಮತ್ತಷ್ಟು ಏರಿಕೆಯಾಗಲಿದೆ. ಬ್ಯಾಂಕಿನ ಸಾಲದ ಬಡ್ಡಿ ದರಗಳೂ ಇದರ ಜೊತೆಗೇ ಏರಿಕೆಯಾಗಲಿವೆ.

ಇಷ್ಟು ಮಾತ್ರವೇ ಅಲ್ಲ, ಪೆಟ್ರೋಲ್ ದರದಲ್ಲಿ ಶೀಘ್ರದಲ್ಲೇ ಮತ್ತೊಂದು ಸುತ್ತಿನ ಏರಿಕೆಯೂ ಆಗಲಿದೆ ಎಂದು ಪಿಟಿಐ ವರದಿ ಮಾಡಿದೆ. ಆಮ್ ಆದ್ಮಿಯನ್ನು ದೇವರೇ ಕಾಪಾಡಬೇಕು.
ಇವನ್ನೂ ಓದಿ