ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜ್ಯಪಾಲರ ಶಿಫಾರಸು ಕೇಂದ್ರ ಒಪ್ಪುವ ಸಾಧ್ಯತೆ ಕಡಿಮೆ (Karnataka Crisis 2011 | BJP Government | Hansraj Bharadwaj | UPA)
ಭಾರೀ ರಾಜಕೀಯ ದೊಂಬರಾಟದ ಬಳಿಕ, ಕರ್ನಾಟಕದ ಬಿಜೆಪಿ ಸರಕಾರವನ್ನು ವಜಾಗೊಳಿಸಿ, ವಿಧಾನಸಭೆಯನ್ನು ಅಮಾನತಿನಲ್ಲಿಡಬೇಕು ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಸಲ್ಲಿಸಿದ ಶಿಫಾರಸನ್ನು ಕೇಂದ್ರ ಸರಕಾರವು ಒಪ್ಪುವ ಸಾಧ್ಯತೆಗಳು ಕಡಿಮೆ.

ಉನ್ನತ ಮೂಲಗಳ ಪ್ರಕಾರ, ಅನರ್ಹಗೊಂಡ ಶಾಸಕರು ಕೂಡ ಈಗ ಸುಪ್ರೀಂ ಕೋರ್ಟ್ ಮೂಲಕ ಅರ್ಹರಾಗಿ ಮರಳಿ, ಯಡಿಯೂರಪ್ಪ ಸರಕಾರಕ್ಕೇ ಬೆಂಬಲ ಘೋಷಿಸಿರುವುದರಿಂದ, ಸರಕಾರವು ಭರ್ಜರಿ ಎನ್ನಬಹುದಾದ ಬಹುಮತ ಹೊಂದಿರುವುದರಿಂದಾಗಿ, ಇಂತಹಾ ಸರಕಾರವನ್ನು ವಜಾಗೊಳಿಸುವುದು ಸಮರ್ಥನೀಯವಲ್ಲ ಎಂಬುದು ಕೇಂದ್ರೀಯ ನಾಯಕರ ಅಭಿಪ್ರಾಯ. ರಾತೋರಾತ್ರಿ ಭಾರದ್ವಾಜ್ ರವಾನಿಸಿದ ವರದಿಯ ಕುರಿತು ಸೋಮವಾರ ಬೆಳಿಗ್ಗೆ ಕಾಂಗ್ರೆಸ್ ಮುಖಂಡರಾದ ಪ್ರಧಾನಿ ಮನಮೋಹನ್ ಸಿಂಗ್, ಗೃಹ ಸಚಿವ ಚಿದಂಬರಂ, ವಿದೇಶ ಸಚಿವ ಎಸ್.ಎಂ.ಕೃಷ್ಣ ಮತ್ತು ಕಾನೂನು ಸಚಿವ ವೀರಪ್ಪ ಮೊಯ್ಲಿ ಮುಂತಾದವರು ಸೇರಿಕೊಂಡು ಚರ್ಚೆ ನಡೆಸಿದ್ದರು.

ಈ ಸಭೆಯಲ್ಲಿ ಕೂಡ ರಾಜ್ಯಪಾಲರ ಶಿಫಾರಸು ಒಪ್ಪಿಕೊಳ್ಳುವುದರ ಕುರಿತು ಸಹಮತ ಏರ್ಪಡಲಿಲ್ಲ. ಸಭೆಯಲ್ಲಿದ್ದ ಸಚಿವರಾದ ಎ.ಕೆ.ಆಂಟನಿ, ಚಿದಂಬರಂ, ಕಪಿಲ್ ಸಿಬಲ್ ಮುಂತಾದವರು ರಾಷ್ಟ್ರಪತಿ ಆಡಳಿತ ಹೇರುವುದಕ್ಕೆ ವಿರೋಧಿಸಿದ್ದು, ಈ ರೀತಿ ಮಾಡಿದರೆ ಗಂಭೀರವಾದ ಕಾನೂನು ತೊಡಕು ಉಂಟಾದೀತು ಎಂದು ಎಚ್ಚರಿಸಿದ್ದರು ಎಂದಿವೆ ಮೂಲಗಳು. ಆದರೆ ಸಭೆಯಲ್ಲಿದ್ದ ಗುಲಾಂ ನಬೀ ಆಜಾದ್ ಮತ್ತು ಕಾನೂನು ಸಚಿವ ವೀರಪ್ಪ ಮೊಯ್ಲಿ ಅವರು ರಾಜ್ಯಪಾಲರ ಶಿಫಾರಸನ್ನು ಬೆಂಬಲಿಸಿದರು. ಹೀಗಾಗಿ ಸಭೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.

ಭಾರದ್ವಾಜ್ ಅವರು ಭಾನುವಾರ ರಾತೋರಾತ್ರಿ ದೆಹಲಿ ಗದ್ದುಗೆಗೆ ರವಾನಿಸಿದ "ವಿಶೇಷ ವರದಿ"ಯಲ್ಲಿ ನಿಖರವಾಗಿ ಏನಿತ್ತು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಆದರೂ, ಅವರು ವಿಧಾನಸಭೆಯನ್ನು ಅಮಾನತಿನಲ್ಲಿಡುವ ಶಿಫಾರಸು ಮಾಡಿದ್ದಾರೆ ಎನ್ನಲಾಗುತ್ತಿದ್ದು, ಯಾವ ಆಧಾರದಲ್ಲಿ ಈ ಶಿಫಾರಸು ಮಾಡಿದ್ದಾರೆ ಎಂಬುದರ ಕುರಿತು ಗೃಹ ಸಚಿವಾಲಯವು ಕೂಲಂಕಷವಾಗಿ ಪರಿಶೀಲನೆ ನಡೆಸಲಿದೆ ಎಂದು ಮೂಲಗಳು ಹೇಳಿವೆ.

ಈ ಮೊದಲು, ಕಳೆದ ವಕ್ಷದ ಅಕ್ಟೋಬರ್ 11 ಹಾಗೂ 14ರಂದು ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಕೋರಿದ್ದರು. ಎರವನೇ ಬಾರಿ ವಿಶ್ವಾಸಮತಕ್ಕೆ ಅವಕಾಶ ಕೊಟ್ಟಿದ್ದು ಕಾಂಗ್ರೆಸ್ ಹೈಕಮಾಂಡ್‌ನ ಕೆಂಗಣ್ಣಿಗೂ ಗುರಿಯಾಗಿತ್ತು. ಇದು ಜನರಲ್ಲಿಯೂ ಕಾಂಗ್ರೆಸ್ ತಂತ್ರ ಎಂಬ ಭಾವನೆ ಮೂಡಿಸಿರುವುದರಿಂದ, ಮತ್ತು ಮುಂದಿನ ಚುನಾವಣೆಗಳಲ್ಲಿಯೂ ಕಾಂಗ್ರೆಸ್‌ಗೆ ತೀರಾ ಹಿನ್ನಡೆಯಾಗಿತ್ತು.
ಇವನ್ನೂ ಓದಿ