ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅವಿವಾಹಿತ ಮಹಿಳೆಯರಿಗೆ ಆಸ್ತಿಯಲ್ಲಿ ಸಮಪಾಲು: ಸುಪ್ರೀಂ (Hindu Succession Act | Womens Right | Unmarried Women | Supreme Court)
ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಸಮಪಾಲು ದೊರೆಯಬೇಕೇ ಎಂಬುದು ಚರ್ಚೆಗೆ ಗ್ರಾಸವಾಗಿರುವಂತೆಯೇ, ಹಿಂದೂ ಉತ್ತರಾಧಿಕಾರ ಕಾಯ್ದೆಯ ಅನುಸಾರ, ಅವಿವಾಹಿತ ಹಿಂದೂ ಮಹಿಳೆಯರಿಗೂ ಪೂರ್ವಜರ ಆಸ್ತಿಯಲ್ಲಿ ಉಳಿದ ಪುರುಷ ಸದಸ್ಯರಂತೆಯೇ ಸಮಪಾಲು ಇರುತ್ತದೆ ಎಂದು ಸುಪ್ರೀಂ ಕೋರ್ಟು ಹೇಳಿದೆ.

ಈ ಮೊದಲು, ಹಿಂದೂ ಅವಿಭಕ್ತ ಕುಟುಂಬದ ಗಂಡು ಮಕ್ಕಳಿಗೆ ಮಾತ್ರವೇ ಆಸ್ತಿಯ ಸಮ ಪಾಲು ದೊರೆಯುತ್ತಿತ್ತು. ಆದರೆ, ನಿರಂತರ ತಿದ್ದುಪಡಿಗಳ ಬಳಿಕ ಅವಿವಾಹಿತ ಹೆಣ್ಣು ಮಕ್ಕಳಿಗೂ ಈ ಪಾಲು ದೊರೆಯುವುದಕ್ಕೆ ಹಲವಾರು ರಾಜ್ಯಗಳು ಸಹಮತ ವ್ಯಕ್ತಪಡಿಸಿದ್ದವು.

ಆಸ್ತಿ ಪಾಲು ಮಾಡುವ ಡಿಕ್ರಿ (ತೀರ್ಮಾನ) ಆಗಿದ್ದರೂ ಕೂಡ, ಆಯಾ ರಾಜ್ಯಗಳ ಶಾಸಕಾಂಗಗಳು ತಿದ್ದುಪಡಿ ಮಾಡಿದ ಸಮಯದಲ್ಲಿ ಆಕೆ ಅವಿವಾಹಿತಳಾಗಿದ್ದಿದ್ದರೆ, ತನ್ನ ಸಮ ಪಾಲಿಗಾಗಿ ಆಕೆ ಒತ್ತಾಯಿಸಬಹುದಾಗಿದೆ ಎಂದು ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಹಾಗೂ ಕೆ.ಎಸ್.ರಾಧಾಕೃಷ್ಣನ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.

ಲಿಂಗ ಆಧಾರಿತ ತಾರತಮ್ಯ ನಿವಾರಣೆಯ ನಿಟ್ಟಿನಲ್ಲಿ ಸಾಂವಿಧಾನಿಕ ಜವಾಬ್ದಾರಿಯ ಅಂಗವಾಗಿ ಮಹಿಳೆಗೂ ಸಮಪಾಲು ನೀಡುವ ಹಕ್ಕನ್ನು ವಿಸ್ತರಿಸಲಾಗಿದೆ ಎಂದು ಸುಪ್ರೀಂ ಕೋರ್ಟು ಹೇಳಿದೆ.

ಸಂವಿಧಾನ ರಚಿಸಿದವರು ಮಹಾನ್ ದೂರದೃಷ್ಟಿಯುಳ್ಳವರು. ಅವರು ನ್ಯಾಯ ಮತ್ತು ಸಮಾನತೆಯನ್ನು ಮೇಲ್ಮಟ್ಟದಲ್ಲಿ ಇರಿಸಿದ್ದಷ್ಟೇ ಅಲ್ಲದೆ, ಜಾತಿ, ಬಣ್ಣ, ಧರ್ಮ ಅಥವಾ ಲಿಂಗ ಆಧಾರದಲ್ಲಿ ಜನರು ತಾರತಮ್ಯಕ್ಕೆ ಒಳಗಾಗಬಾರದು ಎಂಬ ಕಾರಣಕ್ಕೆ ಹಲವಾರು ವಿಧಿಗಳನ್ನೂ ಸೇರಿಸಿದ್ದರು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಇವನ್ನೂ ಓದಿ