ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಧಿಕಾರಕ್ಕೆ ಬಂದ ನಂತ್ರ ಹಣ ಮಾಡೋದೇ ಗುರಿ: ಮಾರನ್ (Wiki Leaks | Cables | Dayanidhi Maran | DMK | Karunanidhi)
ತಮಿಳುನಾಡು ವಿಧಾನಸಭೆ ಚುನಾವಣೆಗಳಲ್ಲಿ ಮತದಾರರು ನೀಡಿದ ದಯನೀಯ ದಂಡನೆಯಿಂದ ಇನ್ನೂ ಚೇತರಿಸಿಕೊಳ್ಳದ ಡಿಎಂಕೆಗೆ ಸೋಮವಾರದ ವರದಿ ಮತ್ತೊಂದು ಆಘಾತ ನೀಡಿದೆ. ಅದರ ಹಿರಿಯ ಮುಖಂಡರೊಬ್ಬರು ಡಿಎಂಕೆ ಅಧಿಕಾರ ಕಳೆದುಕೊಳ್ಳುತ್ತದೆ ಎಂದು 2008ರಲ್ಲೇ ಅಂದಾಜಿಸಿ ಭವಿಷ್ಯ ನುಡಿದಿದ್ದರಲ್ಲದೆ, ಅಧಿಕಾರಕ್ಕೆ ಬಂದ ಬಳಿಕ ಹಣ ಮಾಡುವುದೇ ಗುರಿಯಾಗುತ್ತದೆ ಎಂದೂ ಹೇಳಿದ್ದರು.

ವಿಕಿಲೀಕ್ಸ್ ಬಹಿರಂಗಪಡಿಸಿರುವ ಅಂಶಗಳು 'ದಿ ಹಿಂದು' ಪತ್ರಿಕೆಯಲ್ಲಿ ವರದಿಯಾಗಿದ್ದು, ಅದರ ಪ್ರಕಾರ, ಮಾಜಿ ಮುಖ್ಯಮಂತ್ರಿ, ಡಿಎಂಕೆಯ ಮುಖ್ಯಸ್ಥ ಕರುಣಾನಿಧಿಯವರ ಸೋದರ ಸಂಬಂಧಿ, ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರು 2008ರ ಫೆಬ್ರವರಿ ತಿಂಗಳಲ್ಲಿ ಅಮೆರಿಕ ರಾಯಭಾರಿಯೊಂದಿಗೆ ಮಾತನಾಡುತ್ತಿದ್ದಾಗ ಡಿಎಂಕೆಯ ಪತನದ ಆರಂಭವನ್ನು ಪ್ರಸ್ತಾಪಿಸಿದ್ದಾರೆ.

ಭ್ರಷ್ಟಾಚಾರವು ಪಕ್ಷದ ಪ್ರತಿಷ್ಠೆಗೆ ಹಾನಿ ತರುತ್ತದೆ ಎಂಬುದನ್ನು ಒಪ್ಪಿಕೊಂಡಿರುವ ಅವರು, ತಪ್ಪು ತಿದ್ದಿಕೊಳ್ಳದೇ ಹೋದರೆ ಡಿಎಂಕೆಯು ಅರ್ಧಕ್ಕರ್ಧ ಸ್ಥಾನಗಳನ್ನು ಕಳೆದುಕೊಳ್ಳುತ್ತದೆ ಎಂದು ಅಮೆರಿಕ ರಾಯಭಾರಿ ಡೇವಿಡ್ ಟಿ.ಹಾಪರ್ ಜತೆಗೆ ಮಾತುಕತೆ ಸಂದರ್ಭದಲ್ಲಿ ತಿಳಿಸಿದ್ದಾರೆ. ಜನರು ಅಧಿಕಾರ ಪಡೆದಾಗ, ಅವರು ಏಕಾಗ್ರತೆ ಕಳೆದುಕೊಳ್ಳುತ್ತಾರೆ ಮತ್ತು ಹಣ ಮಾಡುವುದರ ಮೇಲೆಯೇ ಗಮನ ಕೇಂದ್ರೀಕರಿಸುತ್ತಾರೆ ಎಂದು ಅವರು ಈ ಸಂದರ್ಭದಲ್ಲಿ ಹೇಳುತ್ತಾ, ಡಿಎಂಕೆಯೂ ಭ್ರಷ್ಟಾಚಾರದಿಂದ ಹೊರತಲ್ಲ ಎಂಬರ್ಥದ ಮಾತು ಹೇಳಿದ್ದರು.

ಪತ್ರಿಕಾ ಸಮೀಕ್ಷೆಯೊಂದಕ್ಕೆ ಸಂಬಂಧಿಸಿ ಕರುಣಾನಿಧಿ ಜತೆಗೆ ಸಂಬಂಧ ಕೆಡಿಸಿಕೊಂಡಿದ್ದ ಮಾರನ್ ಅವರು 2007ರ ಮೇ ತಿಂಗಳಲ್ಲಿ ಕೇಂದ್ರ ಐಟಿ ಮತ್ತು ಟೆಲಿಕಾಂ ಸಚಿವ ಸ್ಥಾನವನ್ನು ಕಳೆದುಕೊಳ್ಳಬೇಕಾಗಿಬಂದಿತ್ತು.

ಉಚಿತ ಕೊಡುಗೆ ನೀಡುವ ಪಕ್ಷದ ತಂತ್ರಗಳನ್ನೂ ಮಾರನ್ ಟೀಕಿಸಿದ್ದಾರೆ. ಟಿವಿ ಕೊಟ್ಟ ಬಳಿಕ ಜನರು 'ನಮಗಾಗಿ ಈಗೇನು ಮಾಡುತ್ತಿದ್ದೀರಿ' ಅಂತ ಕೇಳುತ್ತಾರೆ, ಟಿವಿಯನ್ನು ಮರೆಯುತ್ತಾರೆ ಎಂದು ಮಾರನ್ ಅವರು ಮಾತುಕತೆ ಸಂದರ್ಭದಲ್ಲಿ ಹೇಳಿದ್ದರು.
ಇವನ್ನೂ ಓದಿ