ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್ ಸರ್ಕಾರಗಳಿಂದ್ಲೇ ಹೆಡ್ಲಿಗಳು ಹೆಚ್ಚಿದ್ದು: ಠಾಕ್ರೆ (Bal Thakckeray David Headley Testimony 26/11 attack | Lashkar-e-Toiba)
PTI
ಶಿವಸೇನಾ ಮುಖ್ಯಸ್ಥ ಬಾಳ ಠಾಕ್ರೆ ಅವರನ್ನು ಹತ್ಯೆ ಮಾಡಲು ಪಾಕಿಸ್ತಾನದ ಉಗ್ರಗಾಮಿ ಸಂಘಟನೆ ಲಷ್ಕರ್ ಇ ತೊಯ್ಬಾ ಮತ್ತು ಐಎಸ್ಐ ಪ್ರಯತ್ನ ನಡೆಸಿತ್ತು ಎಂದು 26/11 ದಾಳಿಯ ಪ್ರಮುಖ ಆರೋಪಿಗಳಲ್ಲೊಬ್ಬನಾಗಿರುವ, ಈಗ ಅಮೆರಿಕದಲ್ಲಿ ಸಿಕ್ಕಿಬಿದ್ದು ವಿಚಾರಣೆ ಎದುರಿಸುತ್ತಿರುವ ಡೇವಿಡ್ ಕೊಲಮನ್ ಹೆಡ್ಲೀ ಹೇಳಿರುವುದನ್ನು ಶಿವಸೇನೆ ದೃಢಪಡಿಸಿದೆ. ಇದೇ ವೇಳೆ, ಕಾಂಗ್ರೆಸ್ ಸರಕಾರಗಳಿಂದಾಗಿಯೇ ಈ ರೀತಿಯ ಅದೆಷ್ಟೋ ಹೆಡ್ಲಿಗಳಿಗೆ ಪ್ರೋತ್ಸಾಹ ಸಿಕ್ಕಿದ್ದು ಎಂದು ಠಾಕ್ರೆ ಪ್ರತಿಕ್ರಿಯಿಸಿದ್ದಾರೆ.

26/11 ದಾಳಿಗೆ ಮೊದಲು ಶಿವಸೇನೆ ಕಚೇರಿಗೆ ಭೇಟಿ ನೀಡಿದ್ದಾಗಿ ಮುಂಬೈ ದಾಳಿಯ ಮತ್ತೊಬ್ಬ ಆರೋಪಿ, ತಹವುರ್ ರಾಣಾ ವಿಚಾರಣೆ ಸಂದರ್ಭದಲ್ಲಿ ಸಾಕ್ಷ್ಯ ನೀಡುತ್ತಿದ್ದ ಹೆಡ್ಲಿ ಮಂಗಳವಾರ ಹೇಳಿದ್ದ. ಇದನ್ನು ದೃಢಪಡಿಸಿರುವ ಶಿವಸೇನೆ, ಪಕ್ಷದ ಕಾರ್ಯಕರ್ತ ರಾಜಾರಾಮ ರೆಗೆ ಎಂಬಾತನನ್ನು ಹೆಡ್ಲಿ ಸಂಪರ್ಕಿಸಿದ್ದ ಎಂದು ಹೇಳಿದೆ. ರಾಜಾರಾಮ ರೆಗೆ ಕೂಡ ರಾಷ್ಟ್ರೀಯ ತನಿಖಾ ಮಂಡಳಿಗೆ ತಾನು ಈ ವಿಷಯ ತಿಳಿಸಿರುವುದಾಗಿ ಹೇಳಿದ್ದಾನೆ.

ಹೆಡ್ಲಿಯು ತನಗೆ ಶಿವಸೇನಾ ಭವನವನ್ನು ತೋರಿಸುವಂತೆ ಕೇಳಿದ್ದ. ಇದೇನೂ ಪ್ರವಾಸಿ ತಾಣವಲ್ಲ ಎನ್ನುತ್ತಾ ಆತನನ್ನು ಸಾಗಹಾಕಿದೆ ಎಂದು ರಾಜಾರಾಮ್ ಹೇಳಿದ್ದು, ಇಷ್ಟು ಮಾತ್ರವೇ ತಮ್ಮಿಬ್ಬರ ನಡುವೆ ಮಾತುಕತೆ ನಡೆದಿದ್ದು ಎಂದಿದ್ದಾರೆ.

ಇಂಥಾ ಎಷ್ಟೋ ಹೆಡ್ಲಿಗಳನ್ನು ಕಂಡಿದ್ದೇನೆ: ಠಾಕ್ರೆ
ತನ್ನ ಹತ್ಯೆಗೆ ಹೆಡ್ಲಿ ಸಂಚು ರೂಪಿಸಿರುವುದನ್ನು ಬಯಲಾಗಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಬಾಳ ಠಾಕ್ರೆ, 'ನಾನೇನೂ ಹೆಡ್ಲಿಗೆ ಹೆದರುವುದಿಲ್ಲ. ಇಂತಹಾ ಅದೆಷ್ಟೋ ಹೆಡ್ಲಿಗಳನ್ನು ಕಂಡಿದ್ದೇನೆ' ಎಂದಿದ್ದಾರೆ.

ಇಂತಹಾ ಹೆಡ್ಲಿಗಳಿಗೆ ಪ್ರೋತ್ಸಾಹ ದೊರೆಯುತ್ತಿದ್ದುದೇ ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರಗಳಿಂದ ಎಂದು ಠಾಕ್ರೆ ಟೀಕಿಸಿದ್ದಾರಲ್ಲದೆ, ತನ್ನ ರಕ್ಷಣೆಗೆ ಕೆಲವೇ ಕೆಲವು ಶಿವಸೈನಿಕರು ಸಾಕು ಎಂದಿದ್ದಾರೆ. ನಾನು ಕೈಗೊಳ್ಳುವ ಯಾವುದೇ ನಿಲುವುಗಳು ದೇಶದ ಹಿತಾಸಕ್ತಿಗಾಗಿ. ಇದು ಮುಂದುವರಿಯುತ್ತದೆ ಎಂದು ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
ಇವನ್ನೂ ಓದಿ