ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಆದರ್ಶ' ಭೂಮಿ ಯೋಧರಿಗೆ ಮೀಸಲಾಗಿದ್ದಲ್ಲ ಎಂದ ಕಾಂಗ್ರೆಸ್ (Adarsha Scam | Housing Society | Maharashtra | Kargil War Hero)
ಆದರ್ಶ ಹೌಸಿಂಗ್ ಸೊಸೈಟಿ ಹಗರಣವೀಗ ಮತ್ತೊಂದು ಮಗ್ಗುಲು ಹೊರಳಿಸಿದೆ. ಈ ಕಟ್ಟಡವಿರುವ ವಿವಾದಿತ ಜಮೀನು ಕಾರ್ಗಿಲ್ ಯುದ್ಧದ ಹೀರೋಗಳಿಗಾಗಿ ಮೀಸಲಾಗಿಟ್ಟಿರಲೇ ಇಲ್ಲ ಎಂದು ಕಾಂಗ್ರೆಸ್ ಈಗ ನ್ಯಾಯಾಂಗ ವಿಚಾರಣೆಯ ಸಂದರ್ಭದಲ್ಲಿ ಹೇಳಿಕೆ ನೀಡಿದೆ.

ಈ ಜಮೀನಿನಲ್ಲಿರುವ ಆದರ್ಶ ವಸತಿ ಗೃಹ ಕಟ್ಟಡವು ಮಹಾರಾಷ್ಟ್ರ ಸರಕಾರಕ್ಕೆ ಸೇರಿದ್ದಾಗಿದೆ ಎಂದು ಮುಂಬೈಯ ಆದರ್ಶ ಹೌಸಿಂಗ್ ಸೊಸೈಟಿ ಹಗರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಂಗ ಸಮಿತಿಯೆದುರು ಕೇಂದ್ರ ವಿದ್ಯುತ್ ಖಾತೆ ಸಚಿವ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಹೇಳಿಕೆ ನೀಡಿದ್ದಾರೆ.

ಆದರ್ಶ ಕಟ್ಟಡವಿರುವ ಜಮೀನು ಮಹಾರಾಷ್ಟ್ರ ಸರಕಾರದ್ದು. ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ಸರಕಾರವು ಆದರ್ಶ ಸೊಸೈಟಿಗೆ ಜಮೀನು ನೀಡಲಾಗಿತ್ತು ಎಂದು ದ್ವಿಸದಸ್ಯ ವಿಚಾರಣಾ ಆಯೋಗದೆದುರು ದಾಖಲಿಸಿರುವ ಅಫಿದವಿತ್‌ನಲ್ಲಿ ಶಿಂಧೆ ಹೇಳಿದ್ದಾರೆ.

ಜುಲೈ 1999ರ ಸರಕಾರದ ನಿರ್ಣಯದ ಅನುಸಾರ ಜಮೀನನ್ನು ನೀಡಲಾಗಿದೆ ಎಂಬುದು ದಾಖಲೆಗಳಲ್ಲಿ ಸ್ಪಷ್ಟವಾಗಿ ಇದೆ ಮತ್ತು ಕಾರ್ಗಿಲ್ ಯುದ್ಧದ ಹೀರೋಗಳಿಗೆ ಯಾವುದೇ ಮೀಸಲಾತಿ ನೀಡಲಾಗಿಲ್ಲ ಎಂದು ಅಫಿದವಿತ್‌ನಲ್ಲಿ ತಿಳಿಸಲಾಗಿದೆ.

ಮೇ 2003ರಿಂದ ನವೆಂಬರ್ 2004ರವರೆಗೆ ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಜಮೀನು ನೀಡಿಕೆ ಬಗ್ಗೆ ಯಾವುದೇ ದೂರುಗಳು ನನ್ನ ಗಮನಕ್ಕೆ ಬಂದಿಲ್ಲ. ಸೊಸೈಟಿಯಿಂದ ಯಾವುದೇ 'ಉಡುಗೊರೆ'ಗಳನ್ನೂ ನಾನು ಪಡೆದಿಲ್ಲ ಎಂದು ಶಿಂಧೆ ಸ್ಪಷ್ಟಪಡಿಸಿದ್ದಾರೆ.

ಆದರ್ಶ ಹಗರಣದಿಂದಾಗಿ ರಾಜೀನಾಮೆ ನೀಡಬೇಕಾಗಿ ಬಂದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಕೂಡ ಅಫಿದವಿತ್ ಸಲ್ಲಿಸಲಿದ್ದು, ಅವರಿಗೆ ಜೂನ್ 13ರ ಕಾಲಾವಕಾಶ ನೀಡಲಾಗಿದೆ.
ಇವನ್ನೂ ಓದಿ