ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಧಾನಿ ಒಳ್ಳೆಯ ವ್ಯಕ್ತಿ, ರಿಮೋಟ್ ಕಂಟ್ರೋಲ್‌ ಸಮಸ್ಯೆ: ಹಜಾರೆ (PM | Manmohan Singh | Good | Sonia Gandhi | Problems | Anna Hazare)
PTI
ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಒಳ್ಳೆಯ ವ್ಯಕ್ತಿ. ಆದರೆ, ರಿಮೋಟ್ ಕಂಟ್ರೋಲ್ (ಸೋನಿಯಾ ಗಾಂಧಿ)ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಹಿರಿಯ ಗಾಂಧಿವಾದಿ ಸಮಾಜ ಸುಧಾರಕ ಅಣ್ಣಾ ಹಜಾರೆ ಕಾಂಗ್ರೆಸ್ ಪಕ್ಷದ ವಿರುದ್ಧ ಕಟು ಟೀಕೆ ಮಾಡಿದ್ದಾರೆ.

ಪ್ರಧಾನಮಂತ್ರಿಗಳು ಕೆಟ್ಟ ವ್ಯಕ್ತಿಯಲ್ಲ.ಭ್ರಷ್ಟಾಚಾರ ತಡೆಗೆ ಅವರ ಸಹಮತವಿದೆ. ಆದರೆ, ರಿಮೋಟ್ ಕಂಟ್ರೋಲ್ ಮಾತ್ರ ಅಡ್ಡಿಯಾಗಿದೆ ಎಂದು ಸೋನಿಯಾ ಹೆಸರನ್ನು ಬಳಸದೆ ವ್ಯಂಗವಾಡಿದರು.

ಮುಂದುವರಿದು ಮಾತನಾಡಿದ ಅವರು, ಯಾವುದೇ ಸರಕಾರದಲ್ಲಿ ಜನತೆಯ ಶಕ್ತಿ ಬಲಿಷ್ಠ ಎನ್ನುವುದು ಸಾಬೀತಾಗಿದೆ. ಅಗಸ್ಟ್ 16ರೊಳಗೆ ಲೋಕಪಾಲ ಮಸೂದೆ ಮಂಡನೆಯಾಗದಿದ್ದಲ್ಲಿ ಮತ್ತೆ ಜಂತರ್ ಮಂತರ್‌ಗೆ ತೆರಳಿ ಅಮರಣ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದೇನೆ. ಕರ್ನಾಟಕದ ಜನತೆ ಕೂಡಾ ಜೈಲು ಭರೋ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕು ಎಂದು ಕರೆ ನೀಡಿದರು.

ಭ್ರಷ್ಟಾಚಾರ ವಿರೋಧಿ ಪ್ರಚಾರ ಆರಂಭವಾದಾಗಿನಿಂದ ಆರು ಜನ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ಸಚಿವರು ತಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಆದರೆ, ತಾವು ಕಳಂಕಿತರಲ್ಲ ಎಂದು ಹಜಾರೆ ನುಡಿದರು.
ಇವನ್ನೂ ಓದಿ