ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣ: ಇಂದು ಕನಿಮೋಳಿ ಜಾಮೀನು ಅರ್ಜಿ ವಿಚಾರಣೆ (CBI arrest | Bail | DMK | Sharad Kumar | A Raja | 2G scam | Kanimozhi)
2ಜಿ ಹಗರಣ: ಇಂದು ಕನಿಮೋಳಿ ಜಾಮೀನು ಅರ್ಜಿ ವಿಚಾರಣೆ
ನವದೆಹಲಿ, ಸೋಮವಾರ, 30 ಮೇ 2011( 09:41 IST )
PTI
ಬಹುಕೋಟಿ 2ಜಿ ಹಗರಣದಲ್ಲಿ ಸಹ-ಆರೋಪಿಯಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಪುತ್ರಿ ಹಾಗೂ ಡಿಎಂಕೆ ಪಕ್ಷದ ಸಂಸದೆ ಕನಿಮೋಳಿ ಜಾಮೀನು ಅರ್ಜಿ ಇಂದು ವಿಚಾರಣೆಗೆ ಬರಲಿದೆ.
ಕನಿಮೋಳಿ ಹಾಗೂ ಕಲೈಂಜ್ಞರ್ ಟೆವಿ ಚಾನೆಲ್ ವ್ಯವಸ್ಥಾಪಕ ನಿರ್ದೇಶಕ ಶರದ್ ಕುಮಾರ್ ಜಾಮೀನು ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿರುವುದನ್ನು ಪ್ರಶ್ನಿಸಿ, ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಅವರೊಂದಿಗೆ ಕನಿಮೋಳಿ ಕೂಡಾ ಸಹ-ಆರೋಪಿಯಾಗಿದ್ದಾರೆ ಎಂದು ಸಿಬಿಐ ಆರೋಪ ಪಟ್ಟಿಯಲ್ಲಿ ದಾಖಲಿಸಿದೆ.
ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ಕನಿಮೋಳಿ ಮತ್ತು ಶರದ್ ಕುಮಾರ್ ವಿರುದ್ಧ ಸಿಬಿಐ, ಸ್ವಾನ್ ಟೆಲಿಕಾಂ ಕಂಪೆನಿಯಿಂದ 200 ಕೋಟಿ ರೂಪಾಯಿ ಲಂಚ ಪಡೆದಿರುವ ಆರೋಪ ಮಾಡಿದೆ.
2ಜಿ ಹಗರಣದಲ್ಲಿ ಮತ್ತೊಬ್ಬ ಆರೋಪಿಯಾಗಿರುವ ಸಿನಿಯುಗ್ ಫಿಲ್ಮ್ ಕಂಪೆನಿಯ ಮುಖ್ಯಸ್ಥ ಕರೀಂ ಮೊರಾನಿ ಅವರ ಜಾಮೀನು ಅರ್ಜಿ ವಿಚಾರಣೆ ಕೂಡಾ ಇಂದು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.