ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಪಾಲ: ಅವರಲ್ಲೇ ಒಮ್ಮತ ಇಲ್ಲ ಎಂದ ಚಿದಂಬರಂ (Lok Pal Bill Draft | PM | Chidambaram | Kapil Sibal | Civil Society)
PTI
ಲೋಕಪಾಲ ಕಾಯಿದೆಯ ವ್ಯಾಪ್ತಿಗೆ ಪ್ರಧಾನ ಮಂತ್ರಿ, ನ್ಯಾಯಾಂಗ ಮುಖ್ಯಸ್ಥರು ಹಾಗೂ ಸಂಸದರ ವರ್ತನೆಯನ್ನೂ ತರುವ ಕುರಿತಾಗಿ ಕರಡು ಮಸೂದೆ ಸಮಿತಿಯ ನಾಗರಿಕ ಸಮಾಜದ ಸದಸ್ಯರ ಮಧ್ಯೆಯೇ ಒಮ್ಮತವಿಲ್ಲ ಎಂದು ದೂರಿರುವ ಸಮಿತಿ ಸದಸ್ಯರೂ ಆಗಿರುವ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ, ಸರಕಾರವು ಲೋಕಪಾಲ ಮಸೂದೆಯನ್ನು ಉದ್ದೇಶಪೂರ್ವಕವಾಗಿ ವಿಳಂಬಿಸುತ್ತಿದೆ ಎಂಬ ನಾಗರಿಕ ಸಮಾಜದ ಸದಸ್ಯರ ಆರೋಪಗಳನ್ನು ತಳ್ಳಿ ಹಾಕಿದರು.

ಸೋಮವಾರದ ಸಮಿತಿ ಸಭೆಯು ರಚನಾತ್ಮಕವಾಗಿತ್ತು ಎಂದು ಮತ್ತೊಬ್ಬ ಸದಸ್ಯ, ಕೇಂದ್ರ ಸಚಿವ ಕಪಿಲ್ ಸಿಬಲ್ ಅವರೊಂದಿಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಚಿದಂಬರಂ, ಪ್ರಸ್ತಾಪಿತ ಮಸೂದೆ ಯಾವ ರೀತಿ ಇರಬೇಕೆಂಬ ಕುರಿತಾಗಿ ರಾಜ್ಯಗಳು ಹಾಗೂ ರಾಜಕೀಯ ಪಕ್ಷಗಳಿಗೆ ಕರಡು ಸಮಿತಿಯ ಅಧ್ಯಕ್ಷರಾಗಿರುವ ಪ್ರಣಬ್ ಮುಖರ್ಜಿ ಅವರು ಈಗಾಗಲೇ ಪತ್ರ ಬರೆದಿರುವುದಾಗಿ ತಿಳಿಸಿದರು.

ಸೋಮವಾರ ನಡೆದ ಕರಡು ಸಮಿತಿ ಸದಸ್ಯರ ಸಭೆಯು, ಅಸಮಾಧಾನದ ಹೊಗೆಯಲ್ಲೇ ಕೊನೆಗೊಂಡಿತ್ತು. ಸರಕಾರವು ಭ್ರಷ್ಟಾಚಾರದ ವಿರುದ್ಧದ ಈ ಕಾಯಿದೆ ಜಾರಿಗೊಳಿಸಲು ಗಂಭೀರವಾಗಿಲ್ಲ ಎಂದು ಸಾಮಾಜಿಕ ಹೋರಾಟಗಾರರು ಆಪಾದಿಸಿದ್ದರು. ಅರವಿಂದ ಕೇಜ್ರಿವಾಲ್ ಅವರಂತೂ, ಸರಕಾರದ 'ಪ್ರಧಾನಿ, ಸಂಸದರು ಹಾಗೂ ನ್ಯಾಯಾಂಗವನ್ನು ಕಾಯಿದೆಯ ವ್ಯಾಪ್ತಿಯಿಂದ ಹೊರಗಿಡುವ' ಹೊಸ ಪ್ರಸ್ತಾಪಕ್ಕೆ ಪ್ರಧಾನಿಯೇ ಬೆಂಬಲಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದರು.

ಸೋಮವಾರದ ಸಭೆಯಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಆದರೆ ನಾಗರಿಕ ಸಮಿತಿ ಸದಸ್ಯರ ಮಧ್ಯೆಯೇ ಒಮ್ಮತವಿರಲಿಲ್ಲ ಎಂದೂ ಚಿದಂಬರಂ ನುಡಿದರು.

ಕಪಿಲ್ ಸಿಬಲ್ ಮಾತನಾಡಿ, ಸರಕಾರದ ಉದ್ದೇಶಗಳನ್ನು ಮಾಧ್ಯಮಗಳು ಮತ್ತು ನಾಗರಿಕ ಸಮಿತಿ ಸದಸ್ಯರು ಪ್ರಶ್ನಿಸಬಾರದು. ಇದರಿಂದ ಕರಡು ಮಸೂದೆ ಮತ್ತಷ್ಟು ವಿಳಂಬವಾದೀತು ಎಂದರಲ್ಲದೆ, ಜೂನ್ 30ರೊಳಗೆ ಕರಡು ಮಸೂದೆ ಸಿದ್ಧವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇವನ್ನೂ ಓದಿ