ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ ಸರ್ಕಾರಕ್ಕೆ ಶಹಬ್ಬಾಸ್ ಎಂದ ಕಾಂಗ್ರೆಸ್ ಸಿಎಂ (Gujarat | Narendra Modi | Prithviraj Chavan | Congress | Irrigation)
ಪ್ರತಿಯೊಂದಕ್ಕೂ ಕಾಂಗ್ರೆಸಿಗರಿಂದ ನಿಂದಿಸಿಕೊಳ್ಳುತ್ತಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಕಾಂಗ್ರೆಸ್‌ನಿಂದಲೇ ಅನಿರೀಕ್ಷಿತವಾಗಿ ಹೊಗಳಿಕೆ ಕೇಳಿಬಂದಿದೆ. ಮೋದಿ ಕೆಲಸವನ್ನು ಹೊಗಳಿದ್ದು ಬೇರಾರೂ ಅಲ್ಲ, ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್. ಗುಜರಾತ್‌ನ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಶ್ಲಾಘಿಸಿರುವ ಚವಾಣ್ ಈಗ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ತುತ್ತಾಗಿರುವುದಂತೂ ನಿಜ.

ತಮ್ಮ ರಾಜಕೀಯ ವಿರೋಧಿಯನ್ನು ಕಾಂಗ್ರೆಸ್ ಮುಖ್ಯಮಂತ್ರಿಯೊಬ್ಬರು ಹೊಗಳಿರುವುದು ಪಕ್ಷಕ್ಕೆ ತೀರಾ ಇರಿಸುಮುರಿಸಿಗೆ ಕಾರಣವಾಗಿತೆ. ಅಹಮದ್‌ನಗರದಲ್ಲಿ ಭಾನುವಾರ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಚವಾಣ್, ಕೃಷಿ ಅಭಿವೃದ್ಧಿಯಲ್ಲಿ ಮಹಾರಾಷ್ಟ್ರಕ್ಕಿಂತ ಗುಜರಾತ್ ತುಂಬಾ ಮುಂದೆ ಇದೆ. ಗುಜರಾತ್‌ನ ಕೃಷಿ ಅಭಿವೃದ್ಧಿಯು ಶೇ.11 ಇದ್ದರೆ, ಮಹಾರಾಷ್ಟ್ರದ್ದು ಕೇವಲ ಶೇ.4.5 ಮಾತ್ರ ಎಂದು ಅಂಕಿ ಅಂಶಗಳನ್ನು ಮುಂದಿಟ್ಟಿದ್ದರು.

ಕಳೆದ ಒಂದು ದಶಕದಲ್ಲಿ ಗುಜರಾತ್ ಶೇ.10ಕ್ಕಿಂತ ಹೆಚ್ಚಿನ ಪ್ರಮಾಣದ ಅಭಿವೃದ್ಧಿಯನ್ನು ಸ್ಥಿರವಾಗಿ ಕಾಯ್ದುಕೊಂಡು ಬಂದಿದೆ ಎಂದು ಶ್ಲಾಘಿಸಿದ ಚವಾಣ್, ಕೃಷಿಗೆ ಸಂಬಂಧಿಸಿ ಗುಜರಾತಿನಲ್ಲಿ ಕಿರು ನೀರಾವರಿ ಯೋಜನೆಗಳ ನಾವೀನ್ಯತೆಯನ್ನು ಬಾಯ್ತುಂಬಾ ಹೊಗಳಿದರಲ್ಲದೆ, ಮಹಾರಾಷ್ಟ್ರವು ಕೂಡ ಗುಜರಾತ್‌ನಷ್ಟೇ ಮುಂದೆ ಬರುವುದೇ ಎಂಬ ಪ್ರಶ್ನೆಯನ್ನೂ ಮುಂದಿಟ್ಟರು.

ಇಲ್ಲ, ಇಲ್ಲ, ಮೋದಿಯನ್ನು ಹೊಗಳಿದ್ದಲ್ಲ...
ಈಗ ಕಾಂಗ್ರೆಸ್ ಒಳಗಿನವರಿಂದ ಒತ್ತಡಕ್ಕೆ ಸಿಲುಕಿರುವ ಚವಾಣ್ ಅವರು, ಮಂಗಳವಾರ ಸ್ಪಷ್ಟನೆ ನೀಡಿ, ತಾನೇನೂ ಮೋದಿಯನ್ನು ಹೊಗಳಿಲ್ಲ. ಹೆಚ್ಚು ಪ್ರಗತಿ ದರ ಇರುವ ಬೇರೆ ರಾಜ್ಯಗಳ ಹೆಸರನ್ನಷ್ಟೇ ಉಲ್ಲೇಖಿಸಿದ್ದೇನೆ. ವ್ಯಕ್ತಿಯನ್ನು ಹೊಗಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಇವನ್ನೂ ಓದಿ