ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 25 ವರ್ಷವಾದ್ರೆ ಮಾತ್ರ ನೀವು 'ಕುಡಿಯಲು' ಅರ್ಹರು! (Maharashtra | Liquor | Age Limit for Consumption of Alcohol)
ನೀವು ಮುಂಬೈಯಲ್ಲಿರುವವರಾದರೆ, ಅದೂ ಹದಿ ಹರೆಯದ ತರುಣರಾದರೆ, ಕುಡಿತ ಎಂಬುದು ಇಲ್ಲಿನ್ನು ಅಪರಾಧ! 25 ವರ್ಷಕ್ಕಿಂತ ಕೆಳಗಿನ ಯಾರೇ ಆದರೂ ಮದ್ಯ ಸೇವಿಸುವುದು ಅಥವಾ ಖರೀದಿಸುವುದನ್ನು ಅಪರಾಧ ಎಂದು ಬುಧವಾರ ಘೋಷಿಸಿದೆ. ಇದುವರೆಗೆ ಇಲ್ಲಿ ನಿಮಗೆ ಕುಡಿಯಲು ಇರುವ ಅರ್ಹ ವಯಸ್ಸು ಎಂದರೆ 21 ವರ್ಷ ಆಗಿತ್ತು.

ರಾಜ್ಯದ ಸಂಪುಟವು ಬುಧವಾರ ಸಭೆ ಸೇರಿ ಈ ಕುರಿತು ನಿರ್ಧಾರ ತೆಗೆದುಕೊಂಡಿದ್ದು, ಆದರೆ ಬಿಯರ್ ಕುಡಿಯಲು ಅಥವಾ ಖರೀದಿಸಲು ಕನಿಷ್ಠ 21 ವರ್ಷ ಆಗಿದ್ದರೆ ಸಾಕೆಂಬ ನಿರ್ಣಯಕ್ಕೆ ಬದ್ಧವಾಗಿದೆ.

ಇದಲ್ಲದೆ, ಸಾರ್ವಜನಿಕ ಸಮಾರಂಭಗಳಲ್ಲಿ, ಆಚರಣೆಗಳಲ್ಲಿ ಮದ್ಯ ವಿತರಣೆಯನ್ನು ಕೂಡ ಮಹಾರಾಷ್ಟ್ರದ ಕಾಂಗ್ರೆಸ್ ಸರಕಾರ ನಿಷೇಧಿಸಿದೆ.

ಅರ್ಹ ವಯಸ್ಸಿನವರಲ್ಲದವರು ಮದ್ಯ ಸೇವಿಸಿದರೆ ದಂಡ ವಿಧಿಸಲಾಗುತ್ತದೆ. ಶಿಕ್ಷಣ ಕೇಂದ್ರಗಳು, ಸಾಮಾಜಿಕ ಸಂಸ್ಥೆಗಳು, ಸರಕಾರಿ ಕಚೇರಿಗಳು, ಧಾರ್ಮಿಕ ಸ್ಥಳಗಳು ಹಾಗೂ ಹೆದ್ದಾರಿಗಳ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮದ್ಯದ ಅಂಗಡಿಗಳನ್ನು ಕೂಡ ಇಡುವಂತಿಲ್ಲ.

ಇಷ್ಟು ಮಾತ್ರವೇ ಅಲ್ಲ, ಕುಡಿಯುವ ಬಗ್ಗೆ ಪಂಥಕ್ಕೆ ಬಿದ್ದು ಬಾಟಲಿಗಟ್ಟಲೆ ಏರಿಸುವಂತೆಯೂ ಇಲ್ಲ. ಒಬ್ಬ ವ್ಯಕ್ತಿ ಇಂತಿಷ್ಟು ಮಾತ್ರ ಬಾಟಲಿ ಖರೀದಿಸಬಹುದು ಎಂಬ ಮಿತಿಯನ್ನೂ ಹೇರಲಾಗಿದೆ. ಯಾವುದೇ ನಗರಪಾಲಿಕೆ ವಾರ್ಡ್‌ನ ಶೇ.25ರಷ್ಟು ನಿವಾಸಿಗಳು ಮದ್ಯದ ಅಂಗಡಿ ಅಥವಾ ಬಾರ್ ಮುಚ್ಚಿಸಬೇಕು ಎಂದು ಒತ್ತಾಯಿಸಿದರೆ, ಅವುಗಳನ್ನು ಮುಚ್ಚಬೇಕಾಗುತ್ತದೆ.

ಹೀಗಾದರೆ ಹೇಗೆ ಅಂತ ಕೇಳುತ್ತೀರಾ?
ಇವನ್ನೂ ಓದಿ