ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಬಾ ರಾಮದೇವ್‌ಗೆ ಹೆದ್ರಲ್ಲ, ಅವರು ಸನ್ಯಾಸಿಯಲ್ಲ: ದಿಗ್ವಿಜಯ್ (India corruption | Ramdev fast | Lokpal Bill | Digvijay Singh | UPA)
PTI
ಕಪ್ಪು ಹಣದ ವಿರುದ್ಧ ಸಮರ ಸಾರಿರುವ ಬಾಬಾ ರಾಮದೇವ್ ಅವರು ಸನ್ಯಾಸಿಯೇ ಅಲ್ಲ, ಅವರೊಬ್ಬ ಉದ್ಯಮಿ ಎಂದು ಟೀಕಿಸಿರುವ ಕಾಂಗ್ರೆಸ್ ಹಿರಿಯ ಮುಖಂಡ, ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಅವರ ಉಪವಾಸಕ್ಕೇನೂ ನಾವು ಹೆದರುವುದಿಲ್ಲ ಎಂದಿದ್ದಾರೆ.

"ಉಪವಾಸ ಸತ್ಯಾಗ್ರಹಗಳಿಂದ ಭ್ರಷ್ಟಾಚಾರ ನಿಯಂತ್ರಣ ಸಾಧ್ಯವಿಲ್ಲ. ಕಾನೂನಿನಿಂದ ಮಾತ್ರ ಇದು ಸಾಧ್ಯ" ಎಂದು ಉಪವಾಸ ಸತ್ಯಾಗ್ರದ ಪಿತಾಮಹ ಎಂದೇ ಲೋಕದೆಲ್ಲೆಡೆ ಪ್ರಸಿದ್ಧವಾಗಿರುವ ಮಹಾತ್ಮ ಗಾಂಧೀಜಿಯವರಿದ್ದ ಕಾಂಗ್ರೆಸ್ ಪಕ್ಷದ ಮುಖಂಡ ದಿಗ್ವಿಜಯ್ ಸಿಂಗ್ ವ್ಯಂಗ್ಯವಾಡಿದ್ದಾರೆ.

ನಾವೇನಾದರೂ ಬಾಬಾ ಅವರಿಗೆ ಹೆದರಿದ್ದಿದ್ದರೆ, ಪಕ್ಷವು ಅವರನ್ನೇ ಕಂಬಿಗಳ ಹಿಂದೆ ತಳ್ಳಿ ಬಿಡುತ್ತಿತ್ತು. ಬಾಬಾ ಈಗ ಉದ್ಯಮಿಯೇ ಆಗಿದ್ದು, ಬಾಬಾ ರಾಮದೇವ್ ಅವರು ಯೋಗ ಶಿಬಿರವೊಂದಕ್ಕೆ 50 ಸಾವಿರ ರೂಪಾಯಿ ಶುಲ್ಕ ವಿಧಿಸುತ್ತಾರೆ ಎಂದು ದಿಗ್ವಿಜಯ್ ಸಿಂಗ್ ಹೇಳಿರುವುದು, ಬಾಬಾ ಅವರ ಹೋರಾಟಕ್ಕೆ ಹೆದರದೇ ಇದ್ದರೆ, ಪಕ್ಷವೇಕೆ ನಾಲ್ಕು ಮಂದಿ ಸಚಿವರು, ಸಂಪುಟ ಕಾರ್ಯದರ್ಶಿಗಳನ್ನೆಲ್ಲಾ ವಿಮಾನ ನಿಲ್ದಾಣಕ್ಕೆ ಕಳುಹಿಸಿ ಸ್ವಾಗತಿಸಬೇಕಿತ್ತು ಎಂಬ ಪ್ರಶ್ನೆ ಹುಟ್ಟಲು ಕಾರಣವಾಗಿದೆ.

ಯುಪಿಎ-ಕಾಂಗ್ರೆಸ್ ನಡುವೆ ಸಂಘರ್ಷ
ಈ ನಡುವೆ, ಬಾಬಾ ರಾಮದೇವ್ ಅವರು ಉಜ್ಜೈನಿಯಿಂದ ದೆಹಲಿಗೆ ಬಂದಿಳಿದಾಗ ನಾಲ್ಕು ಮಂದಿ ಮಂತ್ರಿ ಮಹೋದಯರು ವಿಮಾನ ನಿಲ್ದಾಣಕ್ಕೇ ಹೋಗಿ, ಬಾಗಿ ಸ್ವಾಗತಿಸಿರುವುದು ಕಾಂಗ್ರೆಸ್ ಮತ್ತು ಯುಪಿಎ ಸರಕಾರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.

ವಿದೇಶದಲ್ಲಿರುವ ಕಪ್ಪು ಹಣದ ವಾಪಸಾತಿಗೆ ಒತ್ತಾಯಿಸಿ ಬಾಬಾ ರಾಮದೇವ್ ಅವರು ಶನಿವಾರದಿಂದ ನಡೆಸಲಿರುವ ಆಮರಣಾಂತ ಉಪವಾಸ ಸತ್ಯಾಗ್ರಹವು ಕೇಂದ್ರ ಸರಕಾರದಲ್ಲಿ ತೀವ್ರ ಕಳವಳ ಸೃಷ್ಟಿಸಿತ್ತು. ಈ ಬಗ್ಗೆ ಗುರುವಾರ ಸರಕಾರದ ಉನ್ನತ ಮಟ್ಟದ ಸಭೆ ನಡೆಯುತ್ತಿದೆ. ಬಾಬಾ ಮನವೊಲಿಕೆ ನಿಟ್ಟಿನಲ್ಲಿ ನಾಲ್ಕು ಮಂದಿ ಹಿರಿಯ ಸಚಿವರಾದ ಪ್ರಣಬ್ ಮುಖರ್ಜಿ, ಕಪಿಲ್ ಸಿಬಲ್, ಪ್ರಬೋಧ್ ಕಾಂತ್ ಸಹಾಯ್ ಮತ್ತು ಪಿ.ಕೆ.ಬನ್ಸಾಲ್ ಜತೆಗೆ ಸಂಪುಟ ಕಾರ್ಯದರ್ಶಿಗಳನ್ನೆಲ್ಲರನ್ನೂ ವಿಮಾನ ನಿಲ್ದಾಣಕ್ಕೆ ಕಳುಹಿಸಿರುವುದು ಯುಪಿಎಯಲ್ಲಿ ಅಸಮಾಧಾನ ಏಳಲು ಕಾರಣವಾಗಿದೆ.

ಬಾಬಾ ಅವರಿಗೆ ಇಷ್ಟು ಭರ್ಜರಿಯಾಗಿ ಸ್ವಾಗತ ಕೋರಿರುವುದರ ಬಗ್ಗೆ ಟೀಕೆಗಳು ಕೇಳಿಬರತೊಡಗಿದಂತೆ, ಈ ವಿಷಯದಿಂದ ದೂರ ಸರಿಯಲು ಕಾಂಗ್ರೆಸ್ ಪ್ರಯತ್ನಿಸಿತು. ಮಂತ್ರಿಗಳೇ ವಿಮಾನ ನಿಲ್ದಾಣಕ್ಕೆ ಹೋಗುತ್ತಾರೆಂಬ ಸಂಗತಿ ನಮಗೆ ಗೊತ್ತೇ ಇರಲಿಲ್ಲ ಎಂದಿವೆ ಕಾಂಗ್ರೆಸ್ ಮೂಲಗಳು.

ಆರೆಸ್ಸೆಸ್ ಕೂಡ ಬೆಂಬಲ...
ಕಾಂಗ್ರೆಸ್‌ನ ಚಿಂತೆಗೆ ಕಾರಣವಾಗಿರುವ ಸಂಗತಿಯೆಂದರೆ ಬಾಬಾ ರಾಮದೇವ್ ಹೋರಾಟಕ್ಕೆ ಆರೆಸ್ಸೆಸ್ ಕೂಡ ಬೆಂಬಲ ಘೋಷಿಸಿರುವುದು. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಆರೆಸ್ಸೆಸ್ ಕಾರ್ಯಕರ್ತರೆಲ್ಲರೂ ಬಾಬಾ ರಾಮದೇವ್ ಜೊತೆಗೆ ಸೇರುತ್ತಾರೆ ಎಂದು ಆರೆಸ್ಸೆಸ್ ವಕ್ತಾರ ರಾಮಮಾಧವ್ ಘೋಷಿಸಿದ್ದಾರೆ.

ಈ ಕಾರಣಕ್ಕೆ ಇಂದು ತುರ್ತು ಸಭೆ ಸೇರಿರುವ ಉನ್ನತ ಮಟ್ಟದ ನಾಯಕರು, ಈ ವಿಷಯದ ಕುರಿತು ಜಾಗರೂಕ ಹೆಜ್ಜೆಯಿಡುವ ಕುರಿತು ಚಿಂತಿಸಲಿದ್ದಾರೆ.
ಇವನ್ನೂ ಓದಿ