ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣ ಆರಂಭವಾಗಿದ್ದೇ ಮಾರನ್‌ರಿಂದ: ಜೋಷಿ (2G Scam | PAC | Murli Manohar Joshi | Dayanidhi Maran, Spectrum Scam)
ಮಾಜಿ ಟೆಲಿಕಾಂ ಸಚಿವ, ಕೇಂದ್ರದ ಹಾಲಿ ಜವಳಿ ಸಚಿವ ದಯಾನಿಧಿ ಮಾರನ್ ಅವರು 2ಜಿ ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹಗರಣದ ಕುರಿತು ತನಿಖೆ ನಡೆಸುತ್ತಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಅಧ್ಯಕ್ಷ ಮುರಳಿ ಮನೋಹರ ಜೋಷಿ ಶುಕ್ರವಾರ ಹೇಳಿದ್ದಾರೆ.

ನಿಯಮಾವಳಿ ತಿದ್ದುಪಡಿ ಹಾಗೂ ಸ್ಪೆಕ್ಟ್ರಂ ಹಂಚಿಕೆಯ ಬೆಲೆ ನಿಗದಿ ಕುರಿತಾಗಿ ಮಾರನ್ ಅವರು ದೊಡ್ಡ ಮಟ್ಟದಲ್ಲಿಯೇ ಸಂವಹನ ಆರಂಭಿಸಿದ್ದರು. ಸ್ಪೆಕ್ಟ್ರಂ ವಿತರಣೆಯ ವಿಭಿನ್ನ ಅಂಶಗಳು, ದರ ನಿಗದಿ ಮುಂತಾದ ಅಧಿಕಾರಗಳನ್ನು ಸಚಿವರ ಸಮಿತಿಯಿಂದ ಮಾರನ್ ಅವರೇ ಕಿತ್ತುಕೊಂಡಿದ್ದರು ಎಂದು ಜೋಷಿ ಹೇಳಿದರು.

ಹಗರಣ ಆರಂಭವಾದ ಪ್ರಕ್ರಿಯೆಯನ್ನು ವಿವರಿಸುತ್ತಾ ಅವರು, ಹಲವಾರು ದಾಖಲೆಗಳನ್ನು ತಿದ್ದಲಾಯಿತು ಮತ್ತು ಅದು ಅಂಗೀಕೃತವೂ ಆಯಿತು. ಸಚಿವರ ಮಂಡಳಿಯ ಬಳಿ ಇರಬೇಕಾದ ಅಧಿಕಾರಗಳೆಲ್ಲವೂ ಟೆಲಿಕಾಂ ಇಲಾಖೆಗೆ ವರ್ಗಾವಣೆಯಾಯಿತು. ಹೀಗೆ, ಎಲ್ಲವೂ ಆರಂಭವಾಯಿತು ಎಂದು ವಿವರಿಸಿದರು.

ಸ್ಪೆಕ್ಟ್ರಂ ಬೆಲೆ ನಿಗದಿಯನ್ನು ವಿತ್ತ ಸಚಿವಾಲಯದೊಂದಿಗೆ ಮಾತುಕತೆ ನಡೆಸಿದ ಬಳಿಕವಷ್ಟೇ ನಿರ್ಣಯಿಸಬೇಕು ಎಂದು 2003ರಲ್ಲಿ ಸಂಪುಟ ನಿರ್ಣಯ ಕೈಗೊಂಡಿತ್ತು. (ಟೆಲಿಕಾಂ ಸಚಿವರಾಗಿದ್ದ) ಮಾರನ್ ಅದನ್ನೇಕೆ ಬದಲಾಯಿಸಿದರು? ಎಂದು ಜೋಷಿ ಪ್ರಶ್ನಿಸಿದರು.

ನನ್ನ ಪ್ರಕಾರ, ಆ ಕ್ಷಣದಲ್ಲೇ ಏನನ್ನಾದರೂ ಯೋಚಿಸಿದ್ದಿದ್ದರೆ, ಬಹುಶಃ ಈಗಿನ ಗಂಭೀರ ಪರಿಸ್ಥಿತಿ ಬರುತ್ತಿರಲಿಲ್ಲ. ಏನಾದರೂ, ಇದು ಈ ರೀತಿ ಯಾಕಾಗುತ್ತಿದೆ ಎಂಬುದು ಪ್ರಧಾನಮಂತ್ರಿ ಮತ್ತಿತರ ಗಮನಕ್ಕಾದರೂ ಬರುತ್ತಿತ್ತು ಎಂದು ಜೋಷಿ ವಿವರಿಸಿದರು.
ಇವನ್ನೂ ಓದಿ