ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಬಾ ಉಪವಾಸ ಸಿದ್ಧತೆ: ರಾಮಲೀಲಾ ಮೈದಾನದಲ್ಲಿ ಏನೇನಿದೆ? (Ramlila Maidan | Baba Ramdev | anti-corruption | Black Money | Indefinite Fast)
PTI
ಭಾರತದ ರಾಜಕಾರಣಿಗಳು, ಉದ್ಯಮಿಗಳು, ಅಧಿಕಾರಿಗಳು ಇಲ್ಲಿ ಅಕ್ರಮವಾಗಿ ಸಂಪಾದಿಸಿ, ತೆರಿಗೆ ವಂಚಿಸಿ ವಿದೇಶದಲ್ಲಿ ಕೂಡಿಟ್ಟಿರುವ ಕಾಳಧನವನ್ನು ವಾಪಸ್ ತರಬೇಕು ಎಂದು ಒತ್ತಾಯಿಸಿ ಬಾಬಾ ರಾಮದೇವ್ ಅವರು ಶನಿವಾರದಿಂದ ನಡೆಸಲು ಉದ್ದೇಶಿಸಿರುವ ಆಮರಣಾಂತ ಉಪವಾಸ ಸತ್ಯಾಗ್ರಹದ ತಾಣವಾಗಿರುವ ರಾಮಲೀಲಾ ಮೈದಾನವು ಸಕಲ ರೀತಿಯಲ್ಲಿಯೂ ಸತ್ಯಾಗ್ರಹಿಗಳಿಗೆ ಸೌಕರ್ಯಗಳನ್ನು ಒದಗಿಸುವಂತೆ ಸಜ್ಜಾಗಿದೆ.

ದೇಶಾದ್ಯಂತ ಲಕ್ಷಾಂತರ ಮಂದಿ ಜನರು ಬಾಬಾ ರಾಮದೇವ್ ಅವರ ಜತೆ ಸೇರಲಿರುವುದರಿಂದ ಎಲ್ಲ ರೀತಿಯ ಏರ್ಪಾಟುಗಳನ್ನೂ ಮಾಡಲಾಗಿದೆ. ಈ ಕಾರ್ಯಕ್ರಮ ಏರ್ಪಡಿಸಿರುವ ಭಾರತ್ ಸ್ವಾಭಿಮಾನ್ ಟ್ರಸ್ಟ್ ಹೇಳುವಂತೆ ಈ ಕೆಳಗಿನ ಸೌಲಭ್ಯಗಳಿವೆ.

* 2.5 ಲಕ್ಷ ಚದರ ಮೀಟರ್ ಮೈದಾನ
PTI

* 1300 ಶೌಚಾಲಯಗಳು
* ಕುಡಿಯುವ ನೀರು ಒದಗಿಸಲು ಪ್ರತ್ಯೇಕ ರಿವರ್ಸ್ ಆಸ್ಮಾಸಿಸ್ ಜಲಾಗಾರ
* 7800 ನೀರಿನ ನಳ್ಳಿಗಳು
* 1000 ಫ್ಯಾನುಗಳು
* 250 ಏರ್ ಕೂಲರ್‌ಗಳು
* ಸನ್ನದ್ಧರಾಗಿರುವ 60 ವೈದ್ಯರ ಒಂದು ತಂಡ
* ತುರ್ತು ನಿಗಾ ಘಟಕ (ಐಸಿಯು) ಹಾಗೂ 40 ಹಾಸಿಗೆಗಳಿರುವ ಒಂದು ವೈದ್ಯಕೀಯ ಕೇಂದ್ರ

ಉಪವಾಸ ಸತ್ಯಾಗ್ರಹ ನಡೆಯಲಿರುವ ಮೈದಾನದಾದ್ಯಂತ ಟೆಂಟುಗಳು, ಧ್ವಜಗಳು, ಪೋಸ್ಟರ್‌ಗಳು ರಾರಾಜಿಸುತ್ತಿದ್ದರೆ, ಬಾಬಾ ಉಪವಾಸಕ್ಕೆ ಬೆಂಬಲ ನೀಡುತ್ತಿರುವ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಸಾಮಾನ್ಯ ನಾಗರಿಕರು ಸ್ವಯಂಸೇವಕರಾಗಿ ಮತ್ತು ಸ್ವಯಂಪ್ರೇರಿತರಾಗಿ ಭಾಗವಹಿಸುತ್ತಿದ್ದಾರೆ. ಎಲ್ಲ ರಾಜ್ಯಗಳಿಂದ ಬಂದವರಿಗಾಗಿ ಪ್ರತ್ಯೇಕವಾಗಿ ಆಯಾ ರಾಜ್ಯಕ್ಕೆ ಅನುಗುಣವಾಗಿ ಅಲ್ಲಿ ನೋಂದಣಿ ವ್ಯವಸ್ಥೆ ಮಾಡಲಾಗಿದೆ.

ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ನಡೆಯುವ ಸತ್ಯಾಗ್ರಹ ಸಂದರ್ಭದಲ್ಲಿ ಸಂಧ್ಯಾ ಯಜ್ಞ, ಉಪದೇಶ ಪ್ರವಚನ, ಅಷ್ಟಾಂಗ ಯೋಗ, ಭಜನೆ ಮುಂತಾದವುಗಳನ್ನು ಏರ್ಪಡಿಸಲಾಗಿದೆ.

ಭಾರೀ ಭದ್ರತಾ ವ್ಯವಸ್ಥೆಯನ್ನೂ ಏರ್ಪಡಿಸಲಾಗಿದ್ದು, ಅಲ್ಲಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಬಾಂಬ್ ಪತ್ತೆ ದಳ ಸಕ್ರಿಯವಾಗಿದೆ.

ಗುರುವಾರ ಸಾಯಂಕಾಲವೇ ಸುಮಾರು 1 ಲಕ್ಷ ಮಂದಿ ಹೆಸರು ನೋಂದಾಯಿಸಿಕೊಂಡಿದ್ದು, ಶನಿವಾರ ಸತ್ಯಾಗ್ರಹಿಗಳ ಸಂಖ್ಯೆ 3 ಲಕ್ಷಕ್ಕೇರುವ ಸಾಧ್ಯತೆಗಳಿವೆ. ಹತ್ತು ದಿನಗಳ ಹಿಂದೆ ಘೋಷಣೆಯಾದ ಈ ಸತ್ಯಾಗ್ರಹಕ್ಕೆ ದೇಶಾದ್ಯಂತ ಸುಮಾರು 50 ಲಕ್ಷ ನಾಗರಿಕರ ಬೆಂಬಲ ದೊರೆತಿದೆ ಎಂದು ಅಂದಾಜಿಸಲಾಗಿದೆ.
ಇವನ್ನೂ ಓದಿ