ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭ್ರಷ್ಟಾಚಾರ: ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ ಆರಂಭ (Ramlila Ground | Baba Ramdev | Corruption | Blackmoney | Indefinite fast)
PTI
ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಪ್ಪುಹಣ ದೇಶಕ್ಕೆ ಮರಳಿ ತರುವಂತೆ ಒತ್ತಾಯಿಸಿ ಯೋಗಗುರು ಬಾಬಾ ರಾಮದೇವ್, ಇಂದು ಬೆಳಿಗ್ಗೆಯಿಂದ ಅನಿರ್ಧಿಷ್ಠಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಬಾಬಾ ತುಮ್ ಆಗೇ ಬಡೋ ಹಮ್ ತುಮ್ಹಾರೆ ಸಾಥ್ ಹೈ ಎನ್ನುವ ಮುಗಿಲು ಮುಟ್ಟುವ ಘೋಷಣೆಗಳೊಂದಿಗೆ ಲಕ್ಷಾಂತರ ಭಕ್ತರೊಂದಿಗೆ ರಾಮಲೀಲಾ ಮೈದಾನದಲ್ಲಿ ಅಮರಣ ಉಪವಾಸ ಪ್ರತಿಭಟನೆಗೆ ಚಾಲನೆ ನೀಡಿದರು.

ಪ್ರತಿಭಟನೆಯಲ್ಲಿ ಲಕ್ಷಾಂತರ ಭಕ್ತರೊಂದಿಗೆ ಸ್ವಾಮಿ ಸಾಧ್ವಿ ರಿತಾಂಬರಿ ಸೇರಿದಂತೆ ಸಿಖ್ ಜೈನ್ ಮತ್ತು ಮುಸ್ಲಿಂ ಧರ್ಮದ ಮುಖಂಡರು ಪಾಲ್ಗೊಂಡಿದ್ದಾರೆ.

ಉಪವಾಸ ಸತ್ಯಾಗ್ರಹ ಆರಂಭಕ್ಕೆ ಮುನ್ನ ಯೋಗ ಮತ್ತು ಭಜನೆಯಲ್ಲಿ ಪಾಲ್ಗೊಂಡ ರಾಮದೇವ್, ಭ್ರಷ್ಟಾಚಾರದಿಂದ ದೇಶವನ್ನು ಉಳಿಸಿ ಬಡವರಿಗೆ ಉತ್ತಮ ಜೀವನ ಕಲ್ಪಿಸಬೇಕು ಎನ್ನುವುದು ನಮ್ಮ ಗುರಿಯಾಗಿದೆ ಎಂದರು.

ಅಸಾಧ್ಯವಾದುದ್ದು ಯಾವುದೂ ಇಲ್ಲ. ಎಲ್ಲವೂ ಸಾಧ್ಯ. ನಮ್ಮ ಪ್ರತಿಭಟನೆಯನ್ನು ಕೈ ಬಿಡುವಂತೆ ಒತ್ತಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ದೇಶದಲ್ಲಿ ಭ್ರಷ್ಟಾಚಾರವೆಸಗಿದ ವಿದೇಶಿ ಬ್ಯಾಂಕ್‌ಗಳಲ್ಲಿ ಕೊಳೆಯುತ್ತಿದೆ. ಕಪ್ಪು ಹಣವನ್ನು ಮರಳಿ ದೇಶಕ್ಕೆ ತರಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸಚಿವರಾದ ಕಪಿಲ್ ಸಿಬಲ್ ಮತ್ತು ಸುಬೋಧಕಾಂತ್ ಸಹಾಯ್, ನಿನ್ನೆ ಸಂಜೆ ಉಪವಾಸ ಸತ್ಯಾಗ್ರಹವನ್ನು ಕೈ ಬಿಡುವಂತೆ ಯೋಗಗುರು ರಾಮದೇವ್ ಅವರ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಸಚಿವರ ಮಾತಿಗೆ ಜಗ್ಗದ ರಾಮದೇವ್ ಉಪವಾಸ ಸತ್ಯಾಗ್ರಹವನ್ನು ಆರಂಭಿಸುವುದಾಗಿ ಹೇಳಿದ್ದರು.
ಇವನ್ನೂ ಓದಿ