ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಬಾ ರಾಷ್ಟ್ರವನ್ನೇ ವಂಚಿಸಿದ್ದಾರೆ, ಬಂಧನ ಸರಿ: ಸಿಂಗ್ (Digvijay Singh | hunger strike | Ramdev | Congress | Delhi police)
PTI
ರಾಮಲೀಲಾ ಮೈದಾನದಲ್ಲಿ ಯೋಗ ಗುರು ಬಾಬಾ ರಾಮದೇವ್ ಅವರ ಉಪವಾಸ ಸತ್ಯಾಗ್ರಹಕ್ಕೆ ಅಡ್ಡಿಪಡಿಸಿ ಪೊಲೀಸರು ಭಾನುವಾರ ನಸುಕಿನ ವೇಳೆಯೇ ಬಂಧಿಸಿರುವ ಕ್ರಮವನ್ನು ಕಾಂಗ್ರೆಸ್ ಮುಖಂಡ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಬಲವಾಗಿ ಸಮರ್ಥಿಸಿಕೊಂಡಿದ್ದು, ಬಾಬಾ ರಾಷ್ಟ್ರವನ್ನೇ ವಂಚಿಸಿದ್ದಾರೆ. ಅಲ್ಲದೇ ದೆಹಲಿ ಪೊಲೀಸರು ಕಾನೂನಿನಂತೆ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಬಾಬಾ ರಾಮದೇವ್ ಅವರು 199ರಿಂದ ನಡೆಸುತ್ತಿದ್ದ ಚಟುವಟಿಕೆ ಬಗ್ಗೆ ತನಿಖೆ ನಡೆಸುವಂತೆಯೂ ಆಗ್ರಹಿಸಿರುವ ದಿಗ್ವಿಜಯ್ ಸಿಂಗ್, ಬಾಬಾ ರಾಮದೇವ್ ಯೋಗಶಿಬಿರಕ್ಕೆ ಮಾತ್ರ ಅನುಮತಿ ಪಡೆದಿದ್ದರೇ ವಿನಃ ಉಪವಾಸ ಸತ್ಯಾಗ್ರಹಕ್ಕೆ ಅಲ್ಲ ಎಂದು ಹೇಳುವ ಮೂಲಕ ಬಂಧನದ ಕ್ರಮವನ್ನ ಸಮರ್ಥಿಸಿಕೊಂಡಿದ್ದಾರೆ.

ಬಾಬಾಗೆ ಕರ್ನಾಟಕ, ಉತ್ತರಾಖಂಡ ರಾಜ್ಯಗಳಲ್ಲಿನ ಭ್ರಷ್ಟಾಚಾರ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿರುವ ಸಿಂಗ್, ರಾಮದೇವ್ ಆ ರಾಜ್ಯಗಳಲ್ಲಿ ಮೊದಲು ಹೋರಾಟ ನಡೆಸಲಿ ಎಂದು ಸಲಹೆ ನೀಡಿದ್ದಾರೆ. ಅಲ್ಲದೇ ಬಾಬಾ ಬಂಧನದ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡವಿಲ್ಲ ಎಂಬುದಾಗಿಯೂ ಸಮಜಾಯಿಷಿ ನೀಡಿದ್ದಾರೆ. ಇದರಲ್ಲಿ ಕಾಂಗ್ರೆಸ್‌ನ ಕುಮ್ಮಕ್ಕಿನ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಬಾಬಾ ಅವರು ಬೆಂಬಲಿಗರನ್ನು ಪ್ರಚೋದಿಸುವ ಕೆಲಸದಲ್ಲಿ ನಿರತರಾಗಿದ್ದರು ಎಂದು ಆರೋಪಿಸಿರುವ ಅವರು, ನವದೆಹಲಿಯಲ್ಲಿ ಯಾವುದೇ ಕಾರಣಕ್ಕೂ ಅಶಾಂತಿ ವಾತಾವರಣ ಉಂಟಾಗಲು ನಾವು ಅವಕಾಶ ಕೊಡಲ್ಲ. ಯೋಗಶಿಬಿರದ ಹೆಸರಲ್ಲಿ ಅನುಮತಿ ಪಡೆದ ಮೇಲೆ ಯೋಗ ಶಿಬಿರ ನಡೆಸದೆ ಜನರನ್ನು ಪ್ರಚೋದಿಸುವ ಕಾರ್ಯದಲ್ಲಿ ಬಾಬಾ ನಿರತರಾಗಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಸರಕಾರ ಹಲವು ಬಾರಿ ಬಾಬಾ ಮನವೊಲಿಸಲು ಪ್ರಯತ್ನಿ ನಡೆಸಿತ್ತು. ಆದರೆ ಬಾಬಾ ತನ್ನ ಹಠಕ್ಕೆ ಬಿದ್ದಿದ್ದಾರೆ. ಇವರಿಗೆ ದೇಶದ ಬಗ್ಗೆ ಕಾಳಜಿ ಇಲ್ಲ, ವೈಯಕ್ತಿಕ ಸ್ವಾರ್ಥಕ್ಕಾಗಿ ಬೆಂಬಲಿಗರನ್ನು ಬಳಸಿಕೊಂಡು ಸರಕಾರವನ್ನು ಮತ್ತು ಜನರನ್ನು ವಂಚಿಸುವ ಕೆಲಸಕ್ಕೆ ಮುಂದಾಗಿರುವುದಾಗಿ ದೂರಿದರು.

ಈ ದೇಶದಲ್ಲಿ ಕಾನೂನು, ಕಟ್ಟಳೆ ಇದೆ. ಹಾಗಾಗಿ ರಾಮದೇವ್ ಅವರ ಸೂಚನೆಯಂತೆ ರಾಜಧಾನಿಯಲ್ಲಿ ಹಿಂಸಾಚಾರ ನಡೆಯುವುದನ್ನು ನಾವು ಮೂಕಪ್ರೇಕ್ಷಕರಂತೆ ಕೈಕಟ್ಟಿ ನೋಡಲು ಸಾಧ್ಯವಿಲ್ಲ. ಅವರು ರಾಮಲೀಲಾ ಮೈದಾನದಲ್ಲಿ ಜನರನ್ನು ಪ್ರಚೋದಿಸುವ ಕೆಲಸದಲ್ಲಿ ನಿರತರಾಗಿರುವುದಾಗಿ ಸಿಂಗ್ ವಾಗ್ದಾಳಿ ನಡೆಸಿದರು.
ಇವನ್ನೂ ಓದಿ