ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಬಾ ಯೋಗ ಕಲಿಸ್ಲಿ, ರಾಜಕೀಯ ಬೇಡ: ಕಪಿಲ್ ಸಿಬಲ್ (Ram dev | Black money | Hunger strike | Arrest | Congress | Kapil sibal)
PTI
'ಬಾಬಾ ರಾಮದೇವ್ ಶನಿವಾರ ಸಂಜೆ ನಿರಶನ ನಿಲ್ಲಿಸುವುದಾಗಿ ಮಾತು ಕೊಟ್ಟಿದ್ದರು. ಆದರೆ ಅವರು ಸರಕಾರಕ್ಕೆ ಕೊಟ್ಟ ಆಶ್ವಾಸನೆಯಂತೆ ನಡೆದುಕೊಳ್ಳದೆ ಪ್ರಕರಣಕ್ಕೆ ರಾಜಕೀಯ ಬಣ್ಣ ನೀಡಿದ್ದರು. ಯೋಗ ಗುರು ಕೇವಲ ಯೋಗ ಕಲಿಸಬೇಕೇ ವಿನಃ, ರಾಜಕೀಯ ಆಸನ ಕಲಿಸುವುದು ಅವರ ಕೆಲಸವಲ್ಲ'...ಇದು ಕೇಂದ್ರ ಸಚಿವ ಕಪಿಲ್ ಸಿಬಲ್ ನುಡಿ.

ಭ್ರಷ್ಟಾಚಾರದ ವಿರುದ್ಧ ರಾಮಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಬಾಬಾ ರಾಮದೇವ್ ಅವರನ್ನು ರಾತ್ರೋರಾತ್ರಿ ಬಂಧಿಸಿ ಹರಿದ್ವಾರಕ್ಕೆ ಕರೆದೊಯ್ಯಿರುವ ಕ್ರಮವನ್ನು ಅವರು ಬಲವಾಗಿ ಸಮರ್ಥಿಸಿಕೊಂಡರು. ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಾಬಾ ಅವರಿಗೆ ಯೋಗ ಶಿಬಿರ ನಡೆಸಲು ಮಾತ್ರ ಅನುಮತಿ ನೀಡಲಾಗಿತ್ತೆ ಹೊರತು ಉಪವಾಸ ಸತ್ಯಾಗ್ರಹ ನಡೆಸಲು ಅಲ್ಲ ಎಂದರು.

ರಾಮದೇವ್ ಅವರು ಸರಕಾರದ ಜತೆ ಮಾತನಾಡುವಾಗ ಒಂದು ರೀತಿ ಮಾತನಾಡುತ್ತಾರೆ, ಸತ್ಯಾಗ್ರಹಿಗಳ ಮುಂದೆ ಮತ್ತೊಂದು ರೀತಿ ಮಾತನಾಡುತ್ತಾರೆ ಎಂದು ಕಿಡಿಕಾರಿದ ಅವರು, ಯೋಗದ ಹೆಸರಿನಲ್ಲಿ ಬಾಬಾ ರಾಜಕೀಯ ಆಸನ ಹಾಕಲು ಶುರು ಮಾಡಿದ್ದರು. ಅವರು ಕೇವಲ ಯೋಗ ಕಲಿಸಬೇಕೆ ವಿನಃ ರಾಜಕೀಯ ಬೋಧನೆ ಬೇಡ ಎಂದು ತಿರುಗೇಟು ನೀಡಿದರು.

ಸರಕಾರದ ಜತೆ ಮಾತುಕತೆ ನಡೆದ ಸಂದರ್ಭದಲ್ಲಿ ಶನಿವಾರ ಸಂಜೆ ಸತ್ಯಾಗ್ರಹ ನಿಲ್ಲಿಸುವುದಾಗಿ ಭರವಸೆ ಕೊಟ್ಟಿದ್ದರು. ಸರಕಾರ ಕೂಡ ಅವರ ಬೇಡಿಕೆ ಈಡೇರಿಕೆ ಬಗ್ಗೆ ಭರವಸೆ ನೀಡಿತ್ತು. ಆದರೆ ನಂತರ ಅವರು ಸತ್ಯಾಗ್ರಹ ನಿಲ್ಲಿಸೋದಿಲ್ಲ ಎಂದು ಹೇಳುವ ಮೂಲಕ ಜನರನ್ನು ಪ್ರಚೋದಿಸುವ ಕೆಲಸಕ್ಕೆ ಮುಂದಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಅವರನ್ನು ಬಂಧಿಸುವುದು ಅನಿವಾರ್ಯವಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಮದೇವ್ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳದೇ, ಇದೀಗ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕೇಂದ್ರ ಸರಕಾರ ಇದರಲ್ಲಿ ಯಾವುದೇ ದುರುದ್ದೇಶ ಹೊಂದಿಲ್ಲ. ಕೇಂದ್ರ ಸದುದ್ದೇಶವನ್ನೇ ಹೊಂದಿತ್ತು ಎಂದರು.

ಲಾಠಿ ಪ್ರಹಾರ ನಡೆಸಿಲ್ಲ:
ರಾಮಲೀಲಾ ಮೈದಾನದಲ್ಲಿ ಸತ್ಯಾಗ್ರಹ ನಡೆಸುತ್ತಿದ್ದ ಮಹಿಳೆಯರು, ಮಕ್ಕಳ ಮೇಲೆ ಲಾಠಿ ಪ್ರಹಾರ ನಡೆಸಿಲ್ಲ ಎಂದು ದೆಹಲಿ ಉಪ ಆಯುಕ್ತ ಧರ್ಮೇಂದ್ರ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಮಹಿಳೆಯರು, ಮಕ್ಕಳನ್ನು ಥಳಿಸಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ನಾವು ಆ ರೀತಿ ಅಮಾನವೀಯವಾಗಿ ನಡೆದುಕೊಂಡಿಲ್ಲ. ಬಾಬಾ ಅವರು ಗೌರವಯುತವಾಗಿ ನಡೆದುಕೊಳ್ಳದೆ, ಕಳ್ಳಾಟ ನಡೆಸಿದ್ದರು. ಆ ಕಾರಣಕ್ಕಾಗಿಯೇ ರಾಮದೇವ್ ಬಂಧನ ಅನಿವಾರ್ಯವಾಗಿತ್ತು ಎಂದು ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಾಬಾ ದೆಹಲಿ ಪ್ರವೇಶಕ್ಕೆ ನಿರ್ಬಂಧ:
ಬಾಬಾ ರಾಮದೇವ್ ಹಾಗೂ ಅವರ 39 ಮಂದಿ ಅನುಯಾಯಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಾಬಾ ರಾಮದೇವ್ ಅವರು ಇನ್ನೂ 15 ದಿನಗಳವರೆಗೆ ದೆಹಲಿಗೆ ಪ್ರವೇಶಿಸುವುದಕ್ಕೆ ನಿರ್ಬಂಧ ಹೇರಲಾಗಿದೆ.

ಮುಂದಿನ 15 ದಿನಗಳ ಕಾಲ ದೆಹಲಿಗೆ ಆಗಮಿಸುವುದಕ್ಕೆ ಬಾಬಾ ಅವರಿಗೆ ನಿರ್ಬಂಧ ಹೇರಲಾಗಿದೆ ಎಂದು ಸರಕಾರದ ಉನ್ನತ ಮೂಲಗಳು ತಿಳಿಸಿವೆ.
ಇವನ್ನೂ ಓದಿ