ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬ್ಲ್ಯಾಕ್ ಮನಿ-ಇನ್ನು ಬಾಬಾ ಜತೆ ಮಾತುಕತೆ ಖತಂ: ಕೇಂದ್ರ (Ram dev | Rama lila | Black money | Congress | Kapil sibal | Arrest)
ಕಪ್ಪು ಹಣ ವಾಪಸಾತಿಗೆ ಆಗ್ರಹಿಸಿ ರಾಮಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಯೋಗ ಗುರು ಬಾಬಾ ರಾಮದೇವ್ ಅವರ ಬಂಧನ, ಮಹಿಳೆಯರು-ಮಕ್ಕಳ ಮೇಲಿನ ಲಾಠಿಚಾರ್ಜ್, ಹೈಡ್ರಾಮಾಗಳ ನಂತರ ವಿದೇಶದಿಂದ ಕಪ್ಪು ಹಣ ವಾಪಸ್ ತರುವ ವಿಚಾರಕ್ಕೆ ಸಂಬಂಧಿಸಿದಂತೆ ಬಾಬಾ ಜತೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಕೇಂದ್ರ ಸರಕಾರ ಖಡಕ್ ಆಗಿ ಹೇಳಿಕೆ ನೀಡಿದೆ.

ಬಾಬಾ ಹೋರಾಟದ ಸಂದರ್ಭದಲ್ಲಿ ನಾವು ಎಲ್ಲಾ ರೀತಿಯಿಂದಲೂ ಮಾತುಕತೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದೇವು. ಆದರೆ ಬಾಬಾ ಕೊಟ್ಟ ಮಾತಿಗೆ ತಪ್ಪಿ ರಾಜಕೀಯ ನಡೆಸಲು ಹೊರಟಿದ್ದಾರೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಸುಭೋದ್ ಕಾಂತ್ ಸಹಾಯ್, ರಾಮದೇವ್ ಜತೆ ಚರ್ಚಿಸಲು ಯಾವುದೇ ವಿಷಯ ಉಳಿದಿಲ್ಲ. ಅವರಲ್ಲಿ ಯಾವ ವಿಷಯದ ಕುರಿತು ಮಾತನಾಡಲಿ ಎಂದು ಪ್ರಶ್ನಿಸಿದ್ದಾರೆ.

ಬಾಬಾ ರಾಮದೇವ್ ಬಂಧನಕ್ಕೆ ದೇಶವ್ಯಾಪಿ ಆಕ್ರೋಶ, ಪ್ರತಿಭಟನೆ ವ್ಯಕ್ತವಾಗುತ್ತಿರುವ ನಡುವೆಯೇ ಬಾಬಾ ಬಂಧನವನ್ನು ಸಮರ್ಥಿಸಿಕೊಂಡಿರುವ ಸಹಾಯ್, ಅವರಿಗೆ ರಾಮಲೀಲಾ ಮೈದಾನದಲ್ಲಿ ಯೋಗ ಶಿಬಿರ ನಡೆಸಲು ಅನುಮತಿ ಕೊಡಲಾಗಿತ್ತೇ ವಿನಃ ಉಪವಾಸ ಸತ್ಯಾಗ್ರಹ ನಡೆಸಲು ಅಲ್ಲ ಎಂದು ಸ್ಪಷ್ಟಪಡಿಸಿದರು.

ಏತನ್ಮಧ್ಯೆ ವಿದೇಶದಲ್ಲಿರುವ ಕಪ್ಪು ಹಣವನ್ನು ವಾಪಸ್ ತರಬೇಕಾಗಿರುವುದು ಸರಕಾರಕ್ಕೆ ಸಂಬಂಧಪಟ್ಟ ವಿಷಯವಾಗಿದೆ. ಅದಕ್ಕೆ ಸರಕಾರವೂ ಬದ್ದವಾಗಿರುತ್ತದೆ ಎಂದು ಸಹಾಯ್ ಹೇಳಿದ್ದಾರೆ.
ಇವನ್ನೂ ಓದಿ