ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯಡಿಯೂರಪ್ಪ ಆಡಳಿತ ವೈಖರಿ ಚೆನ್ನಾಗಿಲ್ಲ: ಆಡ್ವಾಣಿ ಅಸಮಾಧಾನ (LK Advani | BJP | Karnataka | Yeddyurappa | NDA | performance)
PTI
ಪ್ರತಿಬಾರಿ ಕಂಟಕದ ಸುಳಿಯಲ್ಲಿ ಸಿಲುಕಿಕೊಂಡು ಜೀವದಾನ ಪಡೆದ ನಂತರ ತನಗೆ ಹೈಕಮಾಂಡ್ ಬೆಂಬಲವಿದೆ ಎಂದೇ ಹೇಳುತ್ತಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಡಳಿತ ವೈಖರಿ ಬಗ್ಗೆ ಸ್ವತಃ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಮಂಗಳಾರತಿ ಮಾಡಿದ್ದು, ಬಿಜೆಪಿ ಆಡಳಿತವಿರುವ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಆಡಳಿತ ತೃಪ್ತಿ ತಂದಿಲ್ಲ. ಅದರಲ್ಲೂ ಯಡಿಯೂರಪ್ಪ ಅವರ ಆಡಳಿತ ವೈಖರಿ ಸರಿಯಾಗಿಲ್ಲ ಎಂದು ಬಹಿರಂಗವಾಗಿಯೇ ಆರೋಪಿಸಿದ್ದಾರೆ.

ಕರ್ನಾಟಕ ಸರಕಾರ ಕುರಿತಂತೆ ಚೆನ್ನೈನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎನ್‌ಡಿಎ ಆಡಳಿತವಿರುವ ರಾಜ್ಯಗಳು ಉತ್ತಮವಾಗಿ ಆಡಳಿತ ನಡೆಸುತ್ತಿವೆ. ಅವರ ಆಡಳಿತ ವೈಖರಿಯೂ ಚೆನ್ನಾಗಿದೆ. ಆದರೆ ಕರ್ನಾಟಕದ ವಿಷಯಕ್ಕೆ ಬಂದರೆ ತುಂಬಾ ಬೇಸರವಾಗುತ್ತದೆ. ಕರ್ನಾಟಕದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ನನಗೆ ತೃಪ್ತಿಯೂ ಇಲ್ಲ, ಸಂತಸವೂ ಇಲ್ಲ ಎಂದು ಹೇಳಿದ್ದಾರೆ.

ಕರ್ನಾಟಕ ಹೊರತುಪಡಿಸಿ, ಬಿಜೆಪಿ ಅಥವಾ ಎನ್‌ಡಿಎ ಆಡಳಿತವಿರುವ ರಾಜ್ಯಗಳಿಗೆ ಬೇರೆ ರಾಜ್ಯಗಳಿಂದ ಯಾರಾದರೂ ವ್ಯಕ್ತಿಗಳು ಭೇಟಿ ನೀಡಿದರೆ, ಮತ್ತೊಂದು ಕಡೆ ಹೋಗಿ ಅಲ್ಲಿನ ಸಾಧನೆ ಬಗ್ಗೆ ಉದಾಹರಣೆ ನೀಡುತ್ತಾರೆ. ಈ ವಿಷಯಕ್ಕೆ ಈ ಸರಕಾರಗಳ ಬಗ್ಗೆ ನಮ್ಮ ಖುಷಿಯಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರಕಾರದ ಬಗ್ಗೆ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೇಳಿಕೊಂಡಿದ್ದು ಇದೇ ಮೊದಲ ಬಾರಿಯಾದರೂ, ಪರೋಕ್ಷವಾಗಿ ಅನೇಕ ಸಂದರ್ಭಗಳಲ್ಲಿ ತಮ್ಮ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದರು.

ಇತ್ತೀಚೆಗೆ ಬೆಂಗಳೂರಿಗೆ ಆಡ್ವಾಣಿ ಆಗಮಿಸಿದ ಸಂದರ್ಭದಲ್ಲಿಯೂ, ಚುನಾವಣೆಯಲ್ಲಿ ಗೆಲ್ಲುವುದು, ಸರಕಾರ ರಚಿಸುವುದು ಮುಖ್ಯವಲ್ಲ. ಯಾವ ರೀತಿ ಆಡಳಿತ ನಡೆಸುತ್ತೇವೆ ಎಂಬುದು ಮುಖ್ಯ. ಇದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಪಕ್ಷದ ನಾಯಕರಿಗೆ ಕಿವಿಮಾತು ಹೇಳುವ ಮೂಲಕ ಆಡಳಿತದಲ್ಲಿ ಸುಧಾರಣೆ ತನ್ನಿ ಎಂಬುದನ್ನು ತಿಳಿಹೇಳಿದ್ದರು.
ಇವನ್ನೂ ಓದಿ