ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇಂದ್ರವನ್ನು ಕ್ಷಮಿಸಿದ್ದೇನೆ-ಸತ್ಯಾಗ್ರಹ ನಿರಂತರ: ಬಾಬಾ (Baba Ramdev | corruption | fast | Anna Hazare | Haridwar | Manmohan Singh)
ಕೇಂದ್ರವನ್ನು ಕ್ಷಮಿಸಿದ್ದೇನೆ-ಸತ್ಯಾಗ್ರಹ ನಿರಂತರ: ಬಾಬಾ
ಹರಿದ್ವಾರ್, ಮಂಗಳವಾರ, 7 ಜೂನ್ 2011( 13:19 IST )
'ತನ್ನನ್ನು ವ್ಯವಸ್ಥಿತವಾಗಿ ಕೊಲ್ಲುವ ಸಂಚು ನಡೆಸಿರುವ ಕೇಂದ್ರ ಸರಕಾರವನ್ನು ಕ್ಷಮಿಸಿದ್ದೇನೆ. ಆದರೆ ಈ ದೇಶಕ್ಕೆ ಯಾರು ವಿಶ್ವಾಸದ್ರೋಹ ಎಸಗಿದ್ದಾರೋ ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ' ಎಂದು ಗುಡುಗಿರುವ ಯೋಗ ಗುರು ಬಾಬಾ ರಾಮದೇವ್, ಭ್ರಷ್ಟಾಚಾರದ ವಿರುದ್ಧ ತಾನೊಬ್ಬನೇ ಉಪವಾಸ ಸತ್ಯಾಗ್ರಹ ಮುಂದುವರಿಸುವುದಾಗಿ ಹೇಳಿದ ಅವರು ತನ್ನ ಬೆಂಬಲಿಗರು ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಹರಿದ್ವಾರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಬಾಬಾ,ಕಪ್ಪು ಹಣ ವಾಪಸಾತಿ ಮತ್ತು ಭ್ರಷ್ಟಾಚಾರದ ವಿರುದ್ಧ ಉಪವಾಸ ಸತ್ಯಾಗ್ರಹ ಮುಂದುವರಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ ತನ್ನ ಬೆಂಬಲಿಗರು ಉಪವಾಸ ಸತ್ಯಾಗ್ರಹ ಕೈಬಿಟ್ಟು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವಂತೆ ವಿನಂತಿ ಮಾಡಿಕೊಂಡರು.
ಅಣ್ಣಾ ಹಜಾರೆ ಸಾಮಾಜಿಕ ಕಾರ್ಯಕರ್ತ ಮತ್ತು ನಮ್ಮ ನಾಯಕರು ಅವರು. ಅಣ್ಣಾ ಈ ಮೊದಲು ನನ್ನ ಜೊತೆ ಇದ್ದರೂ, ಇನ್ನು ಮುಂದೆಯೂ ನನಗೆ ಸಾಥ್ ನೀಡುತ್ತಾರೆ. ಆದರೆ ಹೋರಾಟದ ಸ್ವರೂಪದ ಮಾತ್ರ ಬದಲಾಗಲಿದ್ದು, ನನ್ನ ಉಪವಾಸ ಸತ್ಯಾಗ್ರಹ ಮುಂದುವರಿಯಲಿದೆ. ಬೆಂಬಲಿಗರು ಮಾತ್ರ ಉಪವಾಸ ಕೈಬಿಟ್ಟು ಹೋರಾಟ ನಡೆಸಲಿ ಎಂದು ಸಲಹೆ ನೀಡಿದರು.
ಏತನ್ಮಧ್ಯೆ, ಜೂನ್ 4ರಂದು ರಾಮಲೀಲಾ ಮೈದಾನದಲ್ಲಿ ಪೊಲೀಸರು ನಡೆಸಿದ ದೌರ್ಜನ್ಯದ ಕುರಿತಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ಬಾಬಾ, ಪ್ರಧಾನಿ ಸಿಂಗ್ ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ, ಆದರೆ ರಾಜಕಾರಣಿಯಾಗಿ ಅವರೊಬ್ಬ ಪ್ರಾಮಾಣಿಕ ವ್ಯಕ್ತಿಯೇ ಎಂಬುದು ಪ್ರಶ್ನೆಯಾಗಿದೆ ಎಂದರು.
ರಾಮಲೀಲಾದಲ್ಲಿ ಮಧ್ಯರಾತ್ರಿ ಪೊಲೀಸರು ನಡೆಸಿದ ಕಾರ್ಯಾಚರಣೆಯನ್ನು ಪ್ರಧಾನಿ ಬಲವಾಗಿ ಸಮರ್ಥಿಸಿಕೊಂಡಿದ್ದರು. ಅಲ್ಲದೇ ಪ್ರಾಮಾಣಿಕವಾಗಿ ಹೇಳಬೇಕಿದ್ದರೆ, ಬೇರೆ ದಾರಿಯೇ ನಮಗೆ ಇರಲಿಲ್ಲ. ಅಂತೆಯೇ ಯುಪಿಎ ಸರಕಾರ ಭ್ರಷ್ಟಾಚಾರದ ವಿರುದ್ಧ ಗಂಭೀರವಾಗಿ ಹೋರಾಡುತ್ತಿದೆ. ಆದರೆ ಭ್ರಷ್ಟಾಚಾರ ನಿಲ್ಲಿಸಲು ನಮ್ಮ ಬಳಿಯೇನೂ ಮಂತ್ರದಂಡವಿಲ್ಲ ಎಂದು ಹೇಳಿದ್ದರು.
ಜೂನ್ 4ರಂದು ಮಧ್ಯರಾತ್ರಿ ದಾಳಿ ನಡೆಸಿದ ದೆಹಲಿ ಪೊಲೀಸರು ರಾಮಲೀಲಾ ಮೈದಾನದಲ್ಲಿ ಅಳವಡಿಸಿದ್ದ ಸಿಸಿಟಿವಿಯನ್ನು ಸಂಪೂರ್ಣವಾಗಿ ಧ್ವಂಗೊಳಿಸಿದ್ದರು. ಅಲ್ಲದೇ ಅದನ್ನು ಬಲವಂತವಾಗಿ ತೆಗೆದುಕೊಂಡು ಹೋಗಿ,ಎಡಿಟ್ ಮಾಡಿ ಜನರಲ್ಲಿ ತಪ್ಪು ಗ್ರಹಿಕೆ ಮೂಡುವಂತೆ ಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಉಪವಾಸ ಸತ್ಯಾಗ್ರಹ ನಿರಂತರ-ಬಾಬಾ ಸ್ಪಷ್ಟನೆ ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿರುವ ಬಾಬಾ ರಾಮದೇವ್, ಭ್ರಷ್ಟಾಚಾರ ಮತ್ತು ಕಪ್ಪು ಹಣ ವಾಪಸಾತಿಗೆ ಆಗ್ರಹಿಸಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ದೇಶಾದ್ಯಂತ ನಿರಂತರವಾಗಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಜೂನ್ 4ರಂದು ಆರಂಭವಾದ ಸತ್ಯಾಗ್ರಹ ನಿಂತಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸದಾ ಸಿದ್ದ. ಅಣ್ಣಾ ಹಜಾರೆ ಅವರ ನಿರಶನಕ್ಕೂ ನಮ್ಮ ಬೆಂಬಲವಿದೆ. ಆದರೆ ಕೇಂದ್ರ ಸರಕಾರ ಪ್ರತಿಭಟನೆಯನ್ನೇ ಹತ್ತಿಕ್ಕಲು ಮುಂದಾಗಿದೆ ಎಂದು ಬಾಬಾ ಆರೋಪಿಸಿದರು.
ಇಂದು ಬೆಳಿಗ್ಗೆ ಹರಿದ್ವಾರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಬಾಬಾ ಅವರು, ದೇಶಾದ್ಯಂತ ಬೆಂಬಲಿಗರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದ್ದರು. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ತಾನೊಬ್ಬನೇ ಉಪವಾಸ ಸತ್ಯಾಗ್ರಹ ಮುಂದುವರಿಸುವುದಾಗಿ ಹೇಳಿದ್ದರು.
ಸರಕಾರದೊಂದಿಗೆ ಮುಕ್ತ ಚರ್ಚೆಗೆ ಸಿದ್ದ: ಕಪ್ಪು ಹಣ ವಾಪಸಾತಿ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸರಕಾರ ಮುಂದಾದರೆ ತಾನು ಮುಕ್ತ ಮಾತುಕತೆಗೆ ಸಿದ್ದ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.