ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಮದೇವ್ ಬೆಂಬಲಿಸಿದ್ದೇವೆ, ಏನೀಗ?: ಆರೆಸ್ಸೆಸ್ ಪ್ರಶ್ನೆ (Baba Ramdev | RSS | Mohan Bhagawat | Black Money)
ಮೌನವಾಗಿ ಪ್ರತಿಭಟಿಸಿ ಮಲಗಿ ನಿದ್ರಿಸಿದವರನ್ನು ಅರ್ಧರಾತ್ರಿಯಲ್ಲಿ ಬಡಿದೆಬ್ಬಿಸಿ ಹೊರಹಾಕಿ, ಪ್ರತಿಭಟನೆಯನ್ನೇ ಬಗ್ಗುಬಡಿದ ಕೇಂದ್ರ ಸರಕಾರದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್), ಯೋಗ ಗುರು ಬಾಬಾ ರಾಮದೇವ್ ಅವರು ಭ್ರಷ್ಟಾಚಾರ ವಿರುದ್ಧ ನಡೆಸುತ್ತಿದ್ದ ಹೋರಾಟಕ್ಕೆ ಬೆಂಬಲಿಸಿದ್ದೇವೆ, ಏನೀಗ ಎಂದು ಪ್ರಶ್ನಿಸಿದೆ.

"ಬಾಬಾ ರಾಮದೇವ್ ಹೋರಾಟ ಆರಂಭಿಸಿರುವುದಕ್ಕೆ ಆರೆಸ್ಸೆಸ್ ಕಾರಣವಲ್ಲ. ಆದರೆ, ವಿದೇಶದಲ್ಲಿ ರಾಶಿ ಹಾಕಿರುವ ಕಾಳಧನವನ್ನು ಭಾರತಕ್ಕೆ ವಾಪಸ್ ತಂದು, ಅದನ್ನು ಜನ ಕಲ್ಯಾಣಕ್ಕೆ ಉಪಯೋಗಿಸಬೇಕೆಂಬ ಬಾಬಾ ರಾಮದೇವ್ ಅವರ ಹೋರಾಟಕ್ಕೆ ನಮ್ಮ ಬೆಂಬಲವಿದೆ" ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

ಈ ಹಿಂದೆ ಪುತ್ತೂರಿನಲ್ಲಿ ನಡೆಸಲಾದ ಆರೆಸ್ಸೆಸ್ ಸಮಾವೇಶದಲ್ಲೇ ಬಾಬಾ ರಾಮದೇವ್ ಅವರ ಹೋರಾಟವನ್ನು ಬೆಂಬಲಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು ಎಂದು ನೆನಪಿಸಿದ ಅವರು, ಭ್ರಷ್ಟಾಚಾರ ಮತ್ತು ಕಾಳ ಧನದ ವಿರುದ್ಧ ನಡೆಯುತ್ತಿರುವ ಜನಾಂದೋಲನವನ್ನು ನೋಡಿಯೂ ಸುಮ್ಮನೆ ಕೂರುವುದು ಆರೆಸ್ಸೆಸ್‌ಗೆ ಸಾಧ್ಯವಿಲ್ಲ. ಇದು ದೇಶಕ್ಕಾಗಿ ನಡೆಯುವ ಹೋರಾಟ. ಹೀಗಾಗಿ ಇದರಲ್ಲಿ ಭಾಗವಹಿಸಲು ಕಾರ್ಯಕರ್ತರಿಗೆ ಕರೆ ನೀಡಲಾಗಿದೆ ಎಂದು ಭಾಗವತ್ ನುಡಿದರು.

ಸರಕಾರವು ರಾಮದೇವ್ ಜತೆಗೆ ದಿಢೀರ್ ಆಗಿ ಮಾತುಕತೆ ನಿಲ್ಲಿಸಿ, ಅವರ ಬೆಂಬಲಿಗರ ಮೇಲೆ ದೌರ್ಜನ್ಯ ಎಸಗಿದ್ದೇಕೆ ಎಂದು ಪ್ರಶ್ನಿಸಿದ ಅವರು, ಬಾಬಾ ರಾಮದೇವ್ ಆಗಲೀ, ಅಣ್ಣಾ ಹಜಾರೆಯವರಾಗಲೀ ಎತ್ತಿರುವ ವಿಷಯಕ್ಕೆ ಇಡೀ ದೇಶದ ಜನತೆ ಬೆಂಬಲಿಸಿದ್ದಾರೆ ಮತ್ತು ಯಾರ ವಿರೋಧವೂ ಇರಲಿಲ್ಲ. ಹೀಗಿರುವಾಗ, ಮಾತುಕತೆ ಮುಂದುವರಿಸುವಲ್ಲಿ ಏನು ಅಡ್ಡಿಯಿತ್ತು ಎಂದು ಕೇಳಿದರು.
ಇವನ್ನೂ ಓದಿ