ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣ: ಚಿದಂಬರಂ ರಾಜೀನಾಮೆಗೆ ಬಿಜೆಪಿ ಒತ್ತಾಯ (2G Scam | Spectrum Scam | UPA | Chidambaram | Dayanidhi Maran)
2ಜಿ ಹಗರಣದಲ್ಲಿ ಮತ್ತೊಂದು ಹೆಸರು ನಿಧಾನವಾಗಿ ಮತ್ತು ಬಲವಾಗಿ ಕೇಳಿಬರತೊಡಗಿದೆ. ಅದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ. 2ಜಿ ಸ್ಪೆಕ್ಟ್ರಂ ಹಂಚಿಕೆ ಕುರಿತಾದ ಕೋಟ್ಯಂತರ ರೂಪಾಯಿ ಹಗರಣದಲ್ಲಿ ಚಿದಂಬರಂ ಹಾಗೂ ಜವಳಿ ಖಾತೆ ಸಚಿವ ದಯಾನಿಧಿ ಮಾರನ್ ಹೆಸರು ಕೇಳಿಬರುತ್ತಿದ್ದರೂ, ಅವರಿನ್ನೂ ಸಚಿವ ಹುದ್ದೆಯಲ್ಲಿ ಮುಂದುವರಿದಿರುವುದು 'ದುರದೃಷ್ಟಕರ' ಎಂದು ಬಿಜೆಪಿ ಬಣ್ಣಿಸಿದೆ.

ಭ್ರಷ್ಟಾಚಾರ ಮತ್ತು ಕಾಳಧನ ವಿಷಯಕ್ಕೆ ಸಂಬಂಧಿಸಿದಂತೆ ಯುಪಿಎ ಮೇಲೆ ವಾಕ್ಪ್ರಹಾರ ನಡೆಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರು, 2ಜಿ ಸ್ಪೆಕ್ಟ್ರಂ ಹಂಚಿಕೆಯ ನಿರ್ಧಾರವನ್ನು ಕೈಗೊಂಡಿರುವುದು ಚಿದಂಬರಂ ಅವರು ಕೇಂದ್ರದ ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಎಂದರು.

2ಜಿ ಹಗರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ ತಿಂಗಳಲ್ಲಿ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯು ಸಿದ್ಧಪಡಿಸಿರುವ ಕರಡು ವರದಿಯಲ್ಲಿ, ಚಿದಂಬರಂ ಸೇರಿದಂತೆ ವಿತ್ತ ಸಚಿವಾಲಯದ ಪಾತ್ರ ಇರುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಿತ್ತು ಎಂದ ಅವರು, ಅಂದು ಟೆಲಿಕಾಂ ಸಚಿವರಾಗಿದ್ದ ಮಾರನ್ ಅವರನ್ನು ತಮಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂಬುದನ್ನು ಏರ್‌ಸೆಲ್ ಕಂಪನಿಯ ಮಾಜಿ ಮಾಲೀಕರು ಸಿಬಿಐ ವಿಚಾರಣೆ ಸಂದರ್ಭ ಬಾಯಿಬಿಟ್ಟಿದ್ದಾರೆ. ಆದರೂ ಅವರು ಮಂತ್ರಿಗಿರಿಯಲ್ಲಿ ಮುಂದುವರಿಯುತ್ತಿದ್ದಾರೆ ಎಂದರು.
ಇವನ್ನೂ ಓದಿ