ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾನು ಪ್ರಧಾನಿಯಾಗಿದ್ರೆ ಲಾಠಿ ಚಾರ್ಜ್ ಮಾಡಿಸುತ್ತಿರಲಿಲ್ಲ: ಅಯ್ಯರ್ (Mani Shankar Aiyar | Anna Hazare | Baba Ramdev | UPA)
ನಾನು ಪ್ರಧಾನಿಯಾಗಿದ್ರೆ ಲಾಠಿ ಚಾರ್ಜ್ ಮಾಡಿಸುತ್ತಿರಲಿಲ್ಲ: ಅಯ್ಯರ್
ಶ್ರೀನಗರ, ಭಾನುವಾರ, 12 ಜೂನ್ 2011( 09:33 IST )
PTI
ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮತ್ತು ಯೋಗ ಗುರು ಬಾಬಾ ರಾಮದೇವ್ ಅವರು ಇತ್ತೀಚೆಗೆ ಕೈಗೊಂಡಿದ್ದ ನಿರಶನವನ್ನು 'ಜಂತರ್ ಮಂತರ್ ಮತ್ತು ರಾಮಲೀಲಾ ಮೈದಾನದಲ್ಲಿ ಸರ್ಕಸ್' ಎಂದಿರುವ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್, ನಾನೇನಾದರೂ ಪ್ರಧಾನಿಯಾಗಿದ್ದಿದ್ದರೆ, ಬಾಬಾರನ್ನು ಭೇಟಿ ಮಾಡಲು ನಾಲ್ವರು ಮಂತ್ರಿಗಳನ್ನೂ ಕಳುಹಿಸುತ್ತಿರಲಿಲ್ಲ, ನಿದ್ರಿಸುತ್ತಿದ್ದ ಜನರನ್ನು ಹೊಡೆದೋಡಿಸಲು ಪೊಲೀಸರನ್ನೂ ಕಳುಹಿಸುತ್ತಿರಲಿಲ್ಲ ಎಂದಿದ್ದಾರೆ.
ನಾನಾಗಿದ್ದರೆ ಬಾಬಾ ರಾಮ್ ದೇವ್ ಅವರನ್ನೂ ಕಡೆಗಣಿಸುತ್ತಿದ್ದೆ, ಅಣ್ಣಾ ಹಜಾರೆ ಅವರನ್ನೂ ಕಡೆಗಣಿಸುತ್ತಿದ್ದೆ. ನೀವು ನಿಮ್ಮ ಪ್ರದರ್ಶನ ಮತ್ತು ಸರ್ಕಸ್‌ಗಳನ್ನು ರಾಮಲೀಲಾ ಮೈದಾನ ಮತ್ತು ಜಂತರ್ ಮಂತರ್‌ನಲ್ಲಿ ಮುಂದುವರೆಸಿ ಎಂದು ಹೇಳುತ್ತಿದ್ದೆ ಎಂದು ಅಯ್ಯರ್ ವ್ಯಂಗ್ಯವಾಡಿದ್ದಾರೆ.
ಆದರೆ ಒಂದು ವಿಷಯ, ನಿಮಗೇನಾದರೂ ಭಾರತೀಯ ಸಂಸತ್ತಿನೊಂದಿಗೆ ಮಾತನಾಡಬೇಕೆಂದಿದ್ದರೆ ಸಂಬಂಧಿಸಿದ ಸ್ಥಾಯಿ ಸಮಿತಿಯ ಮುಂದೆ ನಿಮ್ಮ ಅಹವಾಲನ್ನು ಮಂಡಿಸಿ ಎಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳಿಗೆ ಅಯ್ಯರ್ ಪ್ರತಿಕ್ರಿಯಿಸಿದರು.
ನಾನೇನಾದರೂ ಪ್ರಧಾನಿಯಾಗಿದ್ದಿದ್ದರೆ, ಬಾಬಾರನ್ನು ಭೇಟಿ ಮಾಡಲು ನಾಲ್ವರು ಮಂತ್ರಿಗಳನ್ನೂ ಕಳುಹಿಸುತ್ತಿರಲಿಲ್ಲ, ಅಲ್ಲದೆ ನಿದ್ರಿಸುತ್ತಿದ್ದ ಜನರನ್ನು ಹೊಡೆದೋಡಿಸಲು ಪೊಲೀಸರನ್ನೂ ಕಳುಹಿಸುತ್ತಿರಲಿಲ್ಲ ಎಂದರು.
ನನ್ನ ಪ್ರಕಾರ, ಇತ್ತೀಚಿನ ಘಟನೆಗಳಿಗೆ ಹೇಗೆ ಪ್ರತಿಕ್ರಿಯಿಸಬೇಕಿತ್ತೋ ಆ ರೀತಿಯಲ್ಲಿ ನಾವು ಪ್ರತಿಕ್ರಿಯಿಸಿಲ್ಲ ಎಂದಿದ್ದಾರೆ ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್.
ಅಲ್ಲದೆ, ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಾಜವು, ಲೋಕಪಾಲ ಮಸೂದೆಯ ಕರಡು ರೂಪಿಸುವ ಸರಕಾರೀ ಸಮಿತಿಯ ಭಾಗವಾಗುವುದನ್ನೂ ಅಯ್ಯರ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ನಿರ್ಧಾರವನ್ನು ಸಂಸತ್ತು ತೆಗೆದುಕೊಳ್ಳಬೇಕೇ ಹೊರತು, ಅರ್ಧ ಡಜನ್ ಸಚಿವರು ಮತ್ತು ತಥಾಕಥಿತ 'ಅಣ್ಣಾ ಹಜಾರೆ ತಂಡ'ದಿಂದಲ್ಲ ಎಂದಿರುವ ಅಯ್ಯರ್, ಅಣ್ಣಾ ಹಜಾರೆ ತಂಡದ ಸ್ಥಾನಮಾನ ಏನು ಎಂದು ಪ್ರಶ್ನಿಸಿದ್ದಾರೆ.