ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಪವಾಸ ಮಾಡ್ಬೇಡಿ, ನಿಮಗೆ ವಯಸ್ಸಾಯ್ತು: ಅಣ್ಣಾಗೆ ದಿಗ್ವಿಜಯ್ (Fast | Anna Hazare | Digvijay Singh | Congress)
PTI
ಪದೇಪದೇ ಉಪವಾಸ ಮಾಡಲು ಹೋಗಬೇಡಿ, ನಿಮಗೆ ವಯಸ್ಸಾಗಿದೆ. ಉಪವಾಸ ಮಾಡಲೇಬೇಕೂಂತ ಏನಾದರೂ ಇದ್ದರೆ, ಯುವಕರಾದ ಅರವಿಂದ ಕೇಜ್ರಿವಾಲ್ ಅವರ ಮಾಡಲಿ ಎಂದು ಬುಧವಾರ 74ನೇ ಜನ್ಮದಿನ ಆಚರಿಸಿಕೊಂಡ ನಾಗರಿಕ ಸಮಿತಿ ಹೋರಾಟಗಾರ ಅಣ್ಣಾ ಹಜಾರೆ ಅವರಿಗೆ ಸಲಹೆ ನೀಡಿದ್ದು ಬೇರಾರೂ ಅಲ್ಲ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್.

ಲೋಕಪಾಲ ಮಸೂದೆ ಕುರಿತಾಗಿ ನಾಗರಿಕ ಸಮಿತಿ ಸದಸ್ಯರು ಹಾಗೂ ಸರಕಾರದ ಪ್ರತಿನಿಧಿಗಳ ನಡುವಿನ ವಾಗ್ಯುದ್ಧ ಮುಂದುವರಿದಿರುವಂತೆಯೇ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ದಿಗ್ವಿಜಯ್ ಸಿಂಗ್, ಇಷ್ಟಾಗಿಯೂ ತಮ್ಮ ಫೇವರಿಟ್ ಕೆಲಸಕ್ಕೆ ಮುಂದಾಗಿ, ಯೋಗ ಗುರು ಬಾಬಾ ರಾಮದೇವ್ ಅವರು 'ಹೇಡಿ, ಠಕ್ಕ' ಎಂದು ಮತ್ತೆ ಮತ್ತೆ ದೂಷಿಸಿದರು.

ಬಾಬಾ ರಾಮದೇವ್ ನಡೆಸುತ್ತಿರುವ ಯೋಗ ತರಬೇತಿ ಶಿಬಿರಗಳು ಸರಿಯೇ ತಪ್ಪೇ ಎಂಬ ಕುರಿತು ಪತ್ತೆ ಹಚ್ಚುವಂತೆ ತಜ್ಞರಿಗೆ ಸೂಚಿಸುವುದಾಗಿ ಹೇಳಿದರು.

ಯೋಗದ ಬಗ್ಗೆ ನನಗೆ ಗೊತ್ತಿರುವಂತೆ, ಅದು ಸಾವಿರಾರು ಜನರು ಸೇರಿದ ಶಿಬಿರದಲ್ಲಿ ಹೇಳಿಕೊಡುವಂಥದ್ದಲ್ಲ. ಅದನ್ನು ಗುರು ಮತ್ತು ಶಿಷ್ಯನ ಮಧ್ಯೆ ನೇರ ತರಬೇತಿ ಮೂಲಕ ಕಲಿಸಿಕೊಡಬೇಕಾಗುತ್ತದೆ ಎಂದ ಹಿರಿಯ ಕಾಂಗ್ರೆಸ್ ಮುಖಂಡ, ದೆಹಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಬಾಬಾ ರಾಮದೇವ್ ಅವರು ಕುರ್ತಾ-ಪೈಜಾಮ ಧರಿಸಿ ಓಡಿದ್ದರು. ಪಾಕಿಸ್ತಾನದಲ್ಲಿ ಜನರಲ್ ಮುಷರಫ್ ಆಡಳಿತದಲ್ಲಿಯೂ ಪೊಲೀಸರಿಗೆ ಬೆದರಿ ಮೌಲಾನಾ ಒಬ್ಬರು ಬುರ್ಖಾ ಧರಿಸಿ ಪಲಾಯನ ಮಾಡಿದ್ದರು ಎಂದು ಹೋಲಿಕೆ ನೀಡಿದರು.
ಇವನ್ನೂ ಓದಿ