ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ.ಬಂಗಾಳ ವಿಧಾನ ಪರಿಷತ್ ರಚನೆಗೆ ಮಮತಾ ಸಿದ್ಧತೆ (Trinamool Congress | Mamata Banerjee | West Bengal | Legislative Council)
ಪ.ಬಂಗಾಳ ವಿಧಾನ ಪರಿಷತ್ ರಚನೆಗೆ ಮಮತಾ ಸಿದ್ಧತೆ
ಕೊಲ್ಕತ್ತಾ, ಶನಿವಾರ, 18 ಜೂನ್ 2011( 12:35 IST )
PR
PR
ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಜಯಲಲಿತಾ ಅವರು ವಿಧಾನ ಪರಿಷತ್ ರಚನೆಗೆ ವಿರೋಧವೊಡ್ಡಿ ಕಾನೂನನ್ನೇ ತಂದಿದ್ದರೆ, ಪಶ್ಚಿಮ ಬಂಗಾಳದ ಮಹಿಳಾ ಮುಖ್ಯಮಂತ್ರಿಯದ್ದು ತದ್ವಿರುದ್ಧ ಕೆಲಸ. ರಾಜ್ಯದಲ್ಲಿ ವಿಧಾನ ಪರಿಷತ್‌ಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಇದೇ ತಿಂಗಳ 28 ರಂದು ತೃಣಮೂಲ ಕಾಂಗ್ರೆಸ್ ಪಕ್ಷವು ನಿರ್ಣಯವೊಂದನ್ನು ಮಂಡಿಸಲಿದೆ.
ಸ್ಪೀಕರ್ ಬಿಮನ್ ಬಂದೋಪಾಧ್ಯಾಯ ನೇತೃತ್ವದಲ್ಲಿ ನಡೆದ ಸದನದ ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟ ಜಯಭೇರಿ ಭಾರಿಸುವುದರೊಂದಿಗೆ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದಾಗಲೇ ವಿಧಾನ ಪರಿಷತ್ ಪುನಃಸ್ಥಾಪಿಸುವುದಾಗಿ ಬ್ಯಾನರ್ಜಿ ಘೋಷಿಸಿದ್ದರು.
ನಂದಿ ಗ್ರಾಮ ಮತ್ತು ಸಿಂಗೂರು ಚಳುವಳಿ ದಿನಗಳಿಂದಲೂ ಹಿಂದಿನ ಎಡಪಂಥೀಯ ಸರಕಾರದ ವಿರುದ್ಧದ ತನ್ನ ಹೋರಾಟವನ್ನು ಬೆಂಬಲಿಸಿದ್ದ ನಾಗರಿಕ ಸಮಾಜದ ಸದಸ್ಯರನ್ನು ವಿಧಾನ ಪರಿಷತ್‌ಗೆ ಸೇರ್ಪಡಿಸುವ ಕುರಿತು ಮಮತಾ ಚಿಂತನೆ ನಡೆಸುತ್ತಿದ್ದಾರೆ ಎಂದು ಪಕ್ಷದ ಆಪ್ತವಲಯ ತಿಳಿಸಿದೆ.
ಪಶ್ಚಿಮ ಬಂಗಾಳದಲ್ಲಿ 1969ರ ಮಾರ್ಚ್ 21ರಂದು ವಿಧಾನ ಪರಿಷತ್ತನ್ನು ರದ್ದುಗೊಳಿಸಲಾಗಿತ್ತು. ಬಳಿಕ ಪಶ್ಚಿಮ ಬಂಗಾಳ ವಿಧಾನ ಪರಿಷತ್ (ರದ್ದು) ಕಾಯ್ದೆ 1969ನ್ನು ಅದೇ ವರ್ಷದ ಆಗಸ್ಟ್ 1ರಿಂದ ಅನ್ವಯವಾಗುವಂತೆ ಸಂಸತ್ತು ಕೂಡ ಅಂಗೀಕರಿಸಿತ್ತು.