ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಾಧು ಸಂತರ ಮೇಲೆ ಲಾಠಿ ನಾಚಿಕೆಗೇಡು: ಮನೇಕಾ ಗಾಂಧಿ (Maneka Gandhi | Ramlila Maidan | Baba Ramdev | Congress)
PTI
ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವನ್ನು "ನಾಚಿಕೆಗೇಡಿನ" ಮತ್ತು "ಸುಳ್ಳಿನ ಸರದಾರರ" ಸರಕಾರ ಎಂದು ಬಣ್ಣಿಸಿರುವ ನೆಹರು-ಗಾಂಧಿ ಕುಟುಂಬದ ಮತ್ತೊಬ್ಬ ಸೊಸೆ ಮನೇಕಾ ಗಾಂಧಿ, ಸಾಧು ಸಂತರ ಮೇಲೆ ಲಾಠಿ ಪ್ರಯೋಗಿಸಿರುವುದು ಸರಕಾರವು ಯಾವ ರೀತಿಯ ಕೀಳು ಮಟ್ಟಕ್ಕೆ ಇಳಿಯಬಹುದಾಗಿದೆ ಎಂಬುದನ್ನು ಬಟಾಬಯಲಾಗಿಸಿದೆ ಎಂದು ಕೆಂಡ ಕಾರಿದ್ದಾರೆ.

ರಾಮಲೀಲಾ ಮೈದಾನದಲ್ಲಿ ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುತ್ತಿದ್ದ ಸತ್ಯಾಗ್ರಹಿಗಳನ್ನು ರಾತೋರಾತ್ರಿ ಹೊಡೆದೋಡಿಸಿದ ಘಟನೆಯನ್ನು ಸಮರ್ಥಿಸಿಕೊಂಡು ದೆಹಲಿ ಪೊಲೀಸರು ಸುಪ್ರೀಂ ಕೋರ್ಟಿನಲ್ಲಿ ಅಫಿದವಿತ್ ಸಲ್ಲಿಸಿರುವುದರ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದೆ ಮನೇಕಾ ಗಾಂಧಿ, ಕಾಂಗ್ರೆಸ್ ನಾಚಿಕೆಗೇಡಿನ ಮತ್ತು ಸುಳ್ಳು ಹೇಳುವ ಚಾಳಿಯುಳ್ಳ ಪಕ್ಷವಾಗಿಬಿಟ್ಟಿದೆ ಎಂದು ದೂರಿದರು.

ಬಾಬಾ ರಾಮದೇವ್ ಅವರು ಪೊಲೀಸರ ಅನುಮತಿ ಪಡೆದುಕೊಂಡೇ ಸತ್ಯಾಗ್ರಹ ಮಾಡುತ್ತಿದ್ದರು. ಸಾಧು ಸಂತರ ಮೇಲೆ ಲಾಠಿ ಪ್ರಯೋಗಿಸುವುದಕ್ಕಿಂತ ದೊಡ್ಡ ಶೇಮ್ ಬೇರೆ ಇರಲಾರದು ಎಂದು ಇಂದಿರಾ ಗಾಂಧಿಯ ಕಿರಿಯ ಸೊಸೆ ಮನೇಕಾ ಹೇಳಿದ್ದಾರೆ.

ದೇಶದ ಕೋಟ್ಯಂತರ ಮಂದಿ ಜನರು ದೆಹಲಿಯ ರಾಮಲೀಲಾ ಮೈದಾನದಲ್ಲಿ ಅಂದೇನು ನಡೆಯಿತು, ಲಾಠಿ ಚಾರ್ಜ್‌ನಲ್ಲಿ ಎಷ್ಟೆಲ್ಲಾ ಮಂದಿ ಗಾಯಗೊಂಡಿದ್ದಾರೆ ಎಂಬುದನ್ನು ಟಿವಿ ಚಾನೆಲ್‌ಗಳ ಮೂಲಕ ಕಣ್ಣಾರೆ ಕಂಡಿದ್ದಾರೆ. ಆದರೂ ಕಾಂಗ್ರೆಸ್ ಸುಳ್ಳು ಹೇಳತೊಡಗಿರುವುದು ಅದರ ಕೀಳು ಮಟ್ಟವನ್ನು ತೋರಿಸುತ್ತದೆ ಎಂದು ಮನೇಕಾ ನುಡಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ ಮನೇಕಾ, ಅವರು ಮಾತನಾಡುವ ಮೊದಲು ಯೋಚಿಸುವುದಿಲ್ಲ. ಆತ ಬೇರೆ 'ಯಾವುದೋ ವ್ಯಕ್ತಿಯ' ಧ್ವನಿಯಾಗಿರುವಂತೆ ತೋರುತ್ತಿದೆ ಮತ್ತು ಇದರ ಬಗ್ಗೆ ತನಿಖೆಯಾದರೆ ಎಲ್ಲವೂ ತಿಳಿಯಬಹುದು ಎಂದು ಮಾರ್ಮಿಕವಾಗಿ ನುಡಿದರು.
ಇವನ್ನೂ ಓದಿ