ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜನರಿಗೆ ನಮ್ಮ ಮೇಲೆ ಸಂಶಯ ದೃಷ್ಟಿ: ದೇವೇಗೌಡರ ಆತಂಕ (PM | Must Brought | Under Lokpal |Gowda)
ಪ್ರಧಾನಿ ಹುದ್ದೆಯನ್ನು ಲೋಕಪಾಲ ಮಸೂದೆ ವ್ಯಾಪ್ತಿಗೆ ಒಳಪಡಿಸಲು ಒತ್ತಾಯಿಸಿರುವ ನಾಗರಿಕ ಸಮಿತಿ ಆಗ್ರಹಕ್ಕೆ ದನಿಗೂಡಿಸಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಇಂದು ಪ್ರತಿಯೊಬ್ಬ ರಾಜಕಾರಣಿಯೂ ಭ್ರಷ್ಟ ಎಂಬಂತಹಾ ವಾತಾವರಣ ಸೃಷ್ಟಿಯಾಗಿದೆ, ಜನರು ಸಂಶಯ ದೃಷ್ಟಿಯಿಂದಲೇ ನಮ್ಮನ್ನು ನೋಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

'ದೇಶದಲ್ಲಿ ರಾಜಕಾರಣಿಗಳನ್ನು ಜನರು ಸಂಶಯದಿಂದಲೇ ನೋಡುತ್ತಿದ್ದಾರೆ. ಪ್ರಧಾನಿಯಿರಲಿ ಅಥವಾ ಉಪ ಪ್ರಧಾನಿಯೇ ಇರಲಿ, ಎಲ್ಲರನ್ನೂ ಈ ಲೋಕಪಾಲ ಮಸೂದೆ ವ್ಯಾಪ್ತಿಗೆ ಬರಬೇಕು' ಎಂದು ಗೌಡರು ಸುದ್ದಿಗಾರರಿಗೆ ತಿಳಿಸಿದ್ದಾರೆ.

'ಸಾರ್ವಜನಿಕರ ವಿಶ್ವಾಸವನ್ನು ಮರಳಿ ಗಳಿಸಬೇಕಿದ್ದರೆ, ಪ್ರಧಾನಿಯೋ, ಗೃಹಸಚಿವರೋ ಅಥವಾ ಮಾಜಿ ಸಚಿವರೋ ಎಂಬುದು ಮಹತ್ವವಾಗುವುದಿಲ್ಲ. ಎಲ್ಲ ರಾಜಕೀಯ ಮುಖಂಡರು, ಮಾಜಿ ಸಚಿವರು, ಮುಖ್ಯಮಂತ್ರಿಗಳು ಸೇರಿದಂತೆ ಅವರಿವರೆನ್ನದೆ ಎಲ್ಲರನ್ನೂ ಈ ಮಸೂದೆ ವ್ಯಾಪ್ತಿಗೆ ಒಳಪಡಿಸಬೇಕು' ಎಂದು ಅವರು ಹೇಳಿದ್ದಾರೆ.

ಎಲ್ಲ ಒಳಿತು ಕೆಡುಕುಗಳನ್ನೂ ಗಮನಕ್ಕೆ ತಂದುಕೊಂಡ ಬಳಿಕವಷ್ಟೇ ಇದನ್ನು ಜಾರಿಗೊಳಿಸಬೇಕೇ ಹೊರತು ಇದು ಅವಸರ ಪಡುವ ವಿಷಯವಲ್ಲ ಎಂದು ಗೌಡರು ಹೇಳಿದ್ದಾರೆ.

ಎಲ್ಲ ಒಳಿತು ಕೆಡುಕುಗಳನ್ನೂ ಗಮನಕ್ಕೆ ತಂದುಕೊಂಡ ಬಳಿಕವಷ್ಟೇ ಇದನ್ನು ಜಾರಿಗೊಳಿಸಬೇಕೇ ಹೊರತು ಇದು ಅವಸರ ಪಡುವ ವಿಷಯವಲ್ಲ ಎಂದು ಗೌಡರು ಹೇಳಿದ್ದಾರೆ.

'ಈ ಕಾಯಿದೆಯಲ್ಲಿ ಯಾವುದೇ ನ್ಯೂನತೆಗಳಿರಬಾರದು. ಇದು ಮಾದರಿಯಾಗಿರಬೇಕು. ಅವಸರದಲ್ಲಿ ಈ ಕಾಯಿದೆಯನ್ನು ಮಾಡಬಾರದು. ಅಗತ್ಯವಿರುವ ಇತರೆ ಕಾನೂನುಗಳಿಗೂ ತಿದ್ದುಪಡಿ ತರಬೇಕು. ಪ್ರಜಾ ಪ್ರತಿನಿಧಿ ಕಾಯಿದೆಗೂ ತಿದ್ದುಪಡಿ ತರಬೇಕು' ಎಂದು ಗೌಡರು ಹೇಳಿದ್ದಾರೆ.

ಭ್ರಷ್ಟಾಚಾರ ಪ್ರಕರಣಗಳು ಪ್ರಸ್ತುತ ಯುಪಿಎ ಅಧಿಕಾರಾವಧಿಯಲ್ಲಿ ಪ್ರಮುಖವಾಗಿ ಸುದ್ದಿ ಮಾಡುತ್ತಿದ್ದು, ಎಚ್ಚರಿಕೆಯುಳ್ಳ ಮಾಧ್ಯಮಗಳು ಈ ವಿಷಯವನ್ನು ಪ್ರಮುಖವಾಗಿ ಬಿಂಬಿಸುತ್ತಿವೆ ಎಂದ ಅವರು, 'ಈಗ ಪ್ರತಿಯೊಬ್ಬ ರಾಜಕಾರಣಿಯೂ ಭ್ರಷ್ಟ ಎಂಬ ವಾತಾವರಣ ಸೃಷ್ಟಿಯಾಗಿದೆ. ಯಾರೊಬ್ಬರೂ ರಾಜಕಾರಣಿಗಳನ್ನು ನಂಬುತ್ತಿಲ್ಲ' ಎಂದು ಹೇಳಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಿತಿ ನಡೆಸುತ್ತಿರುವ ಹೋರಾಟಕ್ಕೆ ಪ್ರಶಂಸೆ ವ್ಯಕ್ತಪಡಿಸಿರುವ ಗೌಡರು, ಹಜಾರೆ, ಶಾಂತಿ ಭೂಷಣ್‌, ಪ್ರಶಾಂತ್‌ ಭೂಷಣ್‌ ಹಾಗೂ ಸಂತೋಷ್‌ ಹೆಗ್ಡೆ ಅವರನ್ನು ತಾವು ಅಭಿನಂದಿಸುವುದಾಗಿ ಹೇಳಿದ್ದಾರೆ.
ಇವನ್ನೂ ಓದಿ