ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಪಾಲ: ಎರಡು ಕರಡು, 6 ಪ್ರಮುಖ ಭಿನ್ನಾಭಿಪ್ರಾಯ (Lokpal Bill | Team Anna | Government | Joint Draft Committee)

ಸರ್ಕಾರ ಮತ್ತು ನಾಗರಿಕ ಸಮಿತಿ ಭಿನ್ನಾಭಿಪ್ರಾಯವಿರುವ 6 ಅಂಶಗಳು

ವಿಷಯಗಳುಟೀಂ ಅಣ್ಣಾ ಹಜಾರೆಸರ್ಕಾರದ ಅಭಿಮತ
1. ಪ್ರಧಾನಿಪ್ರಧಾನಿ ಹುದ್ದೆ ಲೋಕಪಾಲದಡಿ ಬರಬೇಕುಪ್ರಧಾನಿ ಪದತ್ಯಾಗದ ನಂತರವಷ್ಟೇ ಲೋಕಪಾಲ ವ್ಯಾಪ್ತಿಗೆ
2. ನ್ಯಾಯಾಂಗನ್ಯಾಯಾಂಗವು ಲೋಕಪಾಲದಡಿ ಬರಬೇಕುಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಲೋಕಪಾಲದಿಂದ ಹೊರಗಿಡಬೇಕು
3. ಸಂಸದರುಹಾಲಿ ಸಂಸದರು ಲೋಕಪಾಲ ವ್ಯಾಪ್ತಿಗೆಎಂಪಿಗಳು ಸ್ಥಾನ ತ್ಯಾಗ ಮಾಡಿದ ನಂತರವಷ್ಟೇ ಲೋಕಪಾಲ ವ್ಯಾಪ್ತಿಗೆ
4. ಲೋಕಪಾಲರ ಆಯ್ಕೆಸರಕಾರದವರೇ ಹೆಚ್ಚಿರುವ ಸಮಿತಿಯು ಲೋಕಪಾಲರನ್ನು ನೇಮಿಸಬಾರದುರಾಜಕೀಯ ಪಕ್ಷಗಳ ಮುಖಂಡರೊಳಗೊಂಡ ಸಮಿತಿಯೇ ನೇಮಿಸಬೇಕು
5. ಲೋಕಪಾಲರ ವಜಾ ಲೋಕಪಾಲರನ್ನು ವಜಾಗೊಳಿಸಲು ಯಾವುದೇ ನಾಗರಿಕರೂ ಸುಪ್ರೀಂ ಕೋರ್ಟ್ ಮೊರೆ ಹೋಗಬಹುದುಲೋಕಪಾಲರ ವಜಾಕ್ಕೆ ಸರಕಾರವು ಮಾತ್ರ ಸುಪ್ರೀಂ ಕೋರ್ಟಿಗೆ ಶಿಫಾರಸು ಮಾಡಬಹುದು
6. ಲೋಕಪಾಲರ ಕಾರ್ಯನಿರ್ವಹಣೆಎಫ್ಐಆರ್ ದಾಖಲಿಸುವ ಮೊದಲು ಆರೋಪಿಗಳನ್ನು ಕೇಳಬೇಕಿಲ್ಲಎಫ್ಐಆರ್ ಮುನ್ನ ಆರೋಪಿಗಳ ವಾದವನ್ನೂ ಕೇಳಬೇಕು

ಭ್ರಷ್ಟಾಚಾರ ನಿಗ್ರಹಕ್ಕಾಗಿ ಲೋಕಪಾಲ ಕಾಯ್ದೆ ಜಾರಿಗೆ ತರುವ ನಿಟ್ಟಿನಲ್ಲಿ ಜಂಟಿ ಕರಡು ಸಮಿತಿಯ ಉಭಯ ಬಣಗಳೂ ತಮ್ಮ ತಮ್ಮ ಕರಡುಗಳನ್ನು ವಿನಿಮಯ ಮಾಡಿಕೊಂಡಿದ್ದು, ಮಂಗಳವಾರ ನಡೆದ 9ನೇ ಮತ್ತು ಕೊನೆಯ ಸಭೆಯಲ್ಲಿ ಪ್ರಮುಖ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಹಾಗೆಯೇ ಉಳಿದುಕೊಂಡವು.

ಬಹುಮುಖ್ಯವಾಗಿ, ವಿತ್ತ ಮಂತ್ರಿ ಪ್ರಣಬ್ ಮುಖರ್ಜಿ, ಗೃಹ ಮಂತ್ರಿ ಪಿ.ಚಿದಂಬರಂ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್, ಕಾನೂನು ಸಚಿವ ವೀರಪ್ಪ ಮೊಯ್ಲಿ, ಅಲ್ಪಸಂಖ್ಯಾತ ಕಲ್ಯಾಣ ಸಚಿವ ಸಲ್ಮಾನ್ ಖುರ್ಷಿದ್ ಅವರನ್ನೊಳಗೊಂಡ ಸರಕಾರಿ ಸಮಿತಿಯು ಪ್ರಧಾನಿ ಹುದ್ದೆ ಹಾಗೂ ಸಂಸತ್ ಸದಸ್ಯರುಪ, ನ್ಯಾಯಾಂಗವನ್ನು ಲೋಕಪಾಲ ವ್ಯಾಪ್ತಿಯಿಂದ ಹೊರಗಿಡಲು ತೀರ್ಮಾನಿಸಿದರೆ, ಅಣ್ಣಾ ಹಜಾರೆ, ಶಾಂತಿ ಭೂಷಣ್, ಪ್ರಶಾಂತ್ ಭೂಷಣ್, ಅರವಿಂದ ಕೇಜ್ರಿವಾಲ್, ಸಂತೋಷ್ ಹೆಗ್ಡೆ ಒಳಗೊಂಡ ನಾಗರಿಕ ಸಮಿತಿಯು ಇದಕ್ಕೆ ಅವರೆಲ್ಲರೂ ಲೋಕಪಾಲ ವ್ಯಾಪ್ತಿಗೆ ಬರಬೇಕು ಎಂಬ ಒಕ್ಕಣೆಯುಳ್ಳ ಕರಡು ಪ್ರತಿಯನ್ನು ಒಪ್ಪಿಸಿದವು.

ಲೋಕಪಾಲ ಜಂಟಿ ಕರಡು ಸಮಿತಿಯು ಪ್ರಧಾನವಾಗಿರುವ 40ರಲ್ಲಿ 34 ಅಂಶಗಳಲ್ಲಿ ಸಹಮತ ವ್ಯಕ್ತಪಡಿಸಿದ್ದು, ಆರು ಅಂಶಗಳಲ್ಲಿ ಮತಭೇದ ಹೊಂದಿದೆ. ಇದೀಗ ಎರಡೂ ಕರಡು ಪ್ರತಿಗಳನ್ನು ಸಂಪುಟದ ಮುಂದಿಡಲಾಗುತ್ತದೆ. ಎರಡೂ ಕರಡು ಪ್ರತಿಗಳಿಂದ ತಮಗೆ ಬೇಕಾದುದನ್ನು ಆರಿಸಿಕೊಂಡು ಸರಕಾರವು ಅಂತಿಮ ಕರಡು ಮಸೂದೆ ಸಿದ್ಧಪಡಿಸಿ ಸಂಸತ್ತಿನ ಮುಂದಿಡುತ್ತದೆ. ನಂತರ ಸಂಸತ್‌ನಲ್ಲಿ ಚರ್ಚೆಯಾಗಿ ಉಭಯ ಸದನಗಳ ಅಂಗೀಕಾರ ಪಡೆದು ಲೋಕಪಾಲ ಮಸೂದೆಯು ಕಾಯ್ದೆ ರೂಪ ಪಡೆಯುತ್ತದೆ.

ಒಪ್ಪದಿರಲು ಒಪ್ಪಿದ್ದೇವೆ: ಕಪಿಲ್ ಸಿಬಲ್
ಮಂಗಳವಾರ ಸಂಜೆ ಒಂದು ಗಂಟೆ ಕಾಲ ನಡೆದ ಜಂಟಿ ಕರಡು ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಪಿಲ್ ಸಿಬಲ್, ಆರು ಪ್ರಮುಖ ಅಂಶಗಳ ಬಗ್ಗೆ ಭಿನ್ನಾಭಿಪ್ರಾಯ ಉಳಿದುಕೊಂಡಿದೆ ಎಂದರು.

ಮುಖ್ಯವಾಗಿ ಈಗಿರುವ ಆಡಳಿತ ವ್ಯವಸ್ಥೆಯನ್ನು ಬದಲಾಯಿಸುವ ಕುರಿತು ಪ್ರಮುಖ ಮತಭೇದಗಳು ಏರ್ಪಟ್ಟವು. ಪ್ರಮುಖ ಆರು ಭಿನ್ನಾಭಿಪ್ರಾಯಗಳ ಕುರಿತು ಈಗಾಗಲೇ ನಾವು ಇತರ ರಾಜಕೀಯ ಪಕ್ಷಗಳ ಅಭಿಪ್ರಾಯ ಕೇಳಿದ್ದೇವೆ ಎಂದ ಸಿಬಲ್, ಇನ್ನೂ ಎರಡ್ಮೂರು ದಿನಗಳಲ್ಲಿ ನಮ್ಮ (ಸರಕಾರದ) ಕರಡು ಬಗ್ಗೆ ಅಣ್ಣಾ ಬಳಗವು ಅನಿಸಿಕೆಗಳನ್ನು ನೀಡಬಯಸಿದ್ದರೆ, ಅವುಗಳನ್ನು ತಿಳಿಸಬಹುದು. ಭಿನ್ನಾಭಿಪ್ರಾಯ ಬಗೆಹರಿಯುತ್ತದೆಂಬ ಆಶಾವಾದ ನಮ್ಮದು ಎಂದರು.

ಆದರೆ, "ನಾವು ಭರವಸೆ ನೀಡಿದಂತೆ" "ಪ್ರಬಲವಾದ" ಲೋಕಪಾಲ ಕಾಯ್ದೆಯನ್ನು ಸರಕಾರ ಜಾರಿಗೊಳಿಸಲಿದೆ ಎಂದೂ ಸಿಬಲ್ ಹೇಳಿದರು.

ಪ್ರಮುಖವಾಗಿ ಭಿನ್ನಾಭಿಪ್ರಾಯ ಉದ್ಭವಿಸಿದ ವಿಷಯಗಳೆಂದರೆ, ಲೋಕಪಾಲ ವ್ಯಾಪ್ತಿಗೆ ಪ್ರಧಾನಿ ಹುದ್ದೆ, ನ್ಯಾಯಾಂಗ ಮತ್ತು ಸಂಸದರನ್ನು ತರುವುದು, ಲೋಕಪಾಲ ಸಂಸ್ಥೆಯ ನೇಮಕಾತಿ ಮತ್ತು ವಜಾ ಅಧಿಕಾರವು ಯಾರ ಬಳಿ ಇರಬೇಕು ಎಂಬುದರ ಬಗ್ಗೆ.

ಸರಕಾರದ್ದು ಸಾಂಕೇತಿಕ ಲೋಕಪಾಲ: ಅಣ್ಣಾ ಬಳಗ
ಸರಕಾರದ ಕರಡು ಮಸೂದೆ ಕುರಿತು ಅಸಮಾಧಾನ ಭರಿತ ಅಭಿಪ್ರಾಯ ವ್ಯಕ್ತಪಡಿಸಿರುವ ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಿತಿಯು, ಸರಕಾರವು ಲೋಕಪಾಲ ಹೆಸರಿನಲ್ಲಿ ಒಂದು ಅಧಿಕಾರಿಯನ್ನು ಕೂರಿಸುವ ಸಾಂಕೇತಿಕ ಪ್ರಯತ್ನ ಎಂದು ಹೇಳಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ ಕೇಜ್ರಿವಾಲ್, ಭ್ರಷ್ಟಾಚಾರ ನಿಗ್ರಹಕ್ಕಾಗಿ 'ಸಮಗ್ರ, ಸರ್ವತಂತ್ರ ಸ್ವತಂತ್ರ, ಅಧಿಕಾರಯುತ' ಸಂಸ್ಥೆಯೊಂದರ ಬದಲು ಸರಕಾರವು ತೋರಿಕೆಯ ಲೋಕಪಾಲವನ್ನು ಸ್ಥಾಪಿಸಲು ಹೊರಟಿದೆ ಎಂದು ಟೀಕಿಸಿದರು.

ಲೋಕಪಾಲರ ಆಯ್ಕೆಗೆ ನೇಮಿಸಲಾಗುವ ಸದಸ್ಯರ ಸಮಿತಿಯಲ್ಲಿ ಹೆಚ್ಚಿನವರು ಆಡಳಿತ ಪಕ್ಷದವರೇ ಆಗಿರಬೇಕು ಎಂಬುದು ಸರಕಾರದ ಪ್ರಸ್ತಾಪ. ಇದು ತೀರಾ ನಿರಾಶಾಜನಕ ಸಂಗತಿ ಎಂದು ಪ್ರಶಾಂತ್ ಭೂಷಣ್ ಹೇಳಿದರು.
ಇವನ್ನೂ ಓದಿ