ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಲ್ಪಸಂಖ್ಯಾತರಿಗೆ ತಾರತಮ್ಯ ಮಾಡಿದ್ರೆ 5 ಲಕ್ಷ ದಂಡ, 3 ವರ್ಷ ಜೈಲು (Hefty fine | Jail soon | For bias | Against Minorities)
ಅಲ್ಪ ಸಂಖ್ಯಾತರ ಹಿತ ಕಾಯಲು ಪಣ ತೊಟ್ಟಿರುವ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು, ಅಲ್ಪ ಸಂಖ್ಯಾತರಿಗೆ ಶಿಕ್ಷಣ, ಉದ್ಯೋಗ ಹಾಗೂ ವಸತಿ ವಿಚಾರದಲ್ಲಿ ತಾರತಮ್ಯ ಮಾಡುವವರಿಗೆ 5 ಲಕ್ಷ ರೂ. ದಂಡ ಹಾಗೂ ಮೂರು ವರ್ಷ ಕಾರಾಗೃಹ ಶಿಕ್ಷೆಯನ್ನೂ ವಿಧಿಸುವ ಕುರಿತು ಯೋಚಿಸುತ್ತಿದೆ. ಈ ಕುರಿತ ಕಠಿಣ ಕಾನೂನಿನ ರಚನೆಗಾಗಿ ಸರಕಾರ ಈಗಾಗಲೇ ಕರಡು ಸಿದ್ಧಪಡಿಸಿದೆ.

ಈ ಬಗ್ಗೆ 'ಸಮಾನ ಅವಕಾಶಗಳ ಆಯೋಗ'ವೊಂದನ್ನು ರಚಿಸುವ ನಿಟ್ಟಿನಲ್ಲಿ ಅಲ್ಪ ಸಂಖ್ಯಾತರ ವ್ಯವಹಾರಗಳ ಸಚಿವಾಲಯವು ಕರಡು ಪ್ರತಿಯನ್ನು ಸಿದ್ಧಪಡಿಸಿದ್ದು, ಇದು ಜಾರಿಯಾದರೆ ಶಿಕ್ಷಣ, ಉದ್ಯೋಗ ಹಾಗೂ ವಸತಿ ವಿಚಾರದಲ್ಲಿ ಅಲ್ಪ ಸಂಖ್ಯಾತರಿಗೆ ತಾರತಮ್ಯ ಮಾಡುವವರಿಗೆ 5 ಲಕ್ಷ ರೂ. ದಂಡ ಹಾಗೂ ಮೂರು ವರ್ಷ ಜೈಲು ಶಿಕ್ಷೆಯಾಗಲಿದೆ.

ಅಷ್ಟೇ ಅಲ್ಲ, ಆರೋಪಿಗಳು ಆಯೋಗದ ತೀರ್ಪನ್ನು ಒಪ್ಪಿಕೊಳ್ಳದಿದ್ದರೆ ದಿನವೊಂದಕ್ಕೆ 1 ಲಕ್ಷ ರೂ. ದಂಡ ವಿಧಿಸುವ ಅಧಿಕಾರವನ್ನೂ ಆಯೋಗಕ್ಕೆ ನೀಡಲಾಗುತ್ತದೆ.

ಪ್ರಸ್ತಾಪಿತ ಕಾನೂನು ದೇಶದ ಎಲ್ಲ ಅಲ್ಪಸಂಖ್ಯಾತರನ್ನೂ ವ್ಯಾಪಿಸಲಿದ್ದು, ಸರಕಾರಿ ಅಧ್ಯಾದೇಶ ಮೂಲಕ ಇತರೆ ಸಾಮಾಜಿಕ ಸಂಘಟನೆಗಳನ್ನೂ ಈ ಕಾನೂನಿನ ವ್ಯಾಪ್ತಿಯೊಳಗೆ ತರಲು ಅವಕಾಶ ಕಲ್ಪಿಸಲಾಗಿದೆ.

ಅಲ್ಪಸಂಖ್ಯಾತರು ಅದರಲ್ಲೂ ಮುಖ್ಯವಾಗಿ ಮುಸ್ಲಿಮರು ಉದ್ಯೋಗ, ಶಿಕ್ಷಣ ಹಾಗೂ ವಸತಿ ಸೌಲಭ್ಯಪಡೆಯುವಲ್ಲಿ ಅನುಭವಿಸುತ್ತಿರುವ ತಾರತಮ್ಯದ ಕುರಿತು ಸಾಚಾರ್ ಸಮಿತಿ ಮಂಡಿಸಿದ ವರದಿಯಿಂದ ಪ್ರೇರಿತವಾದ ಆಯೋಗವು ಈ ಕ್ರಮ ಕೈಗೊಂಡಿದೆ.
ಇವನ್ನೂ ಓದಿ