ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಟ್ರೀಟ್‌ಮೆಂಟಿಗೆ ರೆಡಿ ಎಂದ ಅಣ್ಣಾ: ಈಗ ದಿಗ್ವಿಜಯ್ ತಿಪ್ಪರಲಾಗ (Digvijay Singh | Baba Ramdev | Anna Hazare | Congress)
ಉಪವಾಸ ಮಾಡಿದ್ರೆ ಬಾಬಾ ರಾಮದೇವ್ ಅವರಿಗಾದ ಗತಿಯನ್ನೇ ನಿಮಗೂ ಕಾಣಿಸುತ್ತೇವೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಗೆ ಎಚ್ಚರಿಸಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ದಿಢೀರನೇ ತಮ್ಮ ಹೇಳಿಕೆಯನ್ನು ಬದಲಾಯಿಸಿ ತಿಪ್ಪರಲಾಗ ಹಾಕಿದ್ದಾರೆ. ತಾವು ಆ ಅರ್ಥದಲ್ಲಿ ಹೇಳಿದ್ದು ಅಲ್ಲವೇ ಅಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ. ಈ ನಡುವೆ, ತಾವು ಯಾವುದೇ ಪೊಲೀಸ್ ಬಲ ಪ್ರಯೋಗವನ್ನು ಸ್ವಾಗತಿಸುತ್ತೇವೆ ಎಂದು ಹಜಾರೆ ಸ್ಪಷ್ಟಪಡಿಸಿದ್ದಾರೆ.

ರಾಮದೇವ್‌ಗೆ ಮಾಡಿದಂತೆಯೇ ನಾಗರಿಕ ಹೋರಾಟಗಾರ ಅಣ್ಣಾ ಹಜಾರೆಗೂ ಮಾಡಲಾಗುತ್ತದೆ ಎಂದು ನಾನು ಹೇಳಿರುವುದಾಗಿ ಪ್ರಕಟವಾಗಿರುವ ವರದಿಗಳಿಂದ ನನಗೆ ಅಚ್ಚರಿಯಾಗಿದೆ, ನೋವಾಗಿದೆ ಎಂದಿರುವ ಕಾಂಗ್ರೆಸ್ ಮುಖಂಡ, ಹಜಾರೆ ಅಥವಾ ಬಾಬಾ ರಾಮದೇವ್ ಅವರಿಗೆ ನೀಡಿದ 'ಟ್ರೀಟ್‌ಮೆಂಟ್'ಗಳಿಗೂ ಕಾಂಗ್ರೆಸಿಗೂ ಯಾವುದೇ ಸಂಬಂಧವಿಲ್ಲ ಎಂದಷ್ಟೇ ತಾನು ಹೇಳಿದ್ದು ಎಂದು ಸ್ಪಷ್ಟಪಡಿಸಿದ್ದಾರೆ.

ಆ ಕ್ಷಣದ ಪರಿಸ್ಥಿತಿಯನ್ನು ಅವಲಂಬಿಸಿ ಸ್ಥಳೀಯ ಆಡಳಿತವು ಏನಾದರೂ ಸಂಬಂಧಪಟ್ಟ ಕ್ರಮ ಕೈಗೊಳ್ಳುತ್ತದೆಯೇ ಹೊರತು ಕಾಂಗ್ರೆಸ್‌ಗೂ ಅದಕ್ಕೂ ಸಂಬಂಧವಿಲ್ಲ ಎಂದು ತಾನು ಹೇಳಿರುವುದಾಗಿ ದಿಗ್ವಿಜಯ್ ಪುನರಪಿ ಸ್ಪಷ್ಟಪಡಿಸಿದ್ದಾರೆ.

ದಿಗ್ವಿಜಯ್ ಹೇಳಿಕೆಯನ್ನು ಅವರೇ ಹಿಂತೆಗೆದುಕೊಂಡಿರುವುದನ್ನು ಗಮನಿಸಿದರೆ, ಬಿಜೆಪಿ ನಾಯಕಿ ಉಮಾ ಭಾರತಿ ಹೇಳಿದ್ದು ನೆನಪಾಗುತ್ತದೆ :"ದಿಗ್ವಿಜಯ್ ಏನು ಮಾತನಾಡುತ್ತಾರೆ ಎಂಬುದರ ಮೇಲೆ ಕಾಂಗ್ರೆಸ್‌ಗೆ ನಿಯಂತ್ರಣವಿಲ್ಲ. ಪ್ರತೀ ಬಾರಿ ಅವರು ಹೇಳಿಕೆ ನೀಡಿದಾಗ ಕಾಂಗ್ರೆಸ್ ವಕ್ತಾರರು ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿ, ಅದನ್ನು ತಳ್ಳಿ ಹಾಕುತ್ತಾರೆ."

ಪೊಲೀಸರು ಅಥವಾ ಸರ್ಕಾರದ ಕ್ರಮಕ್ಕೆ ಸ್ವಾಗತ: ಹಜಾರೆ
ದಿಗ್ವಿಜಯ್ ಹೇಳಿಕೆಗೆ ತಿರುಗೇಟು ನೀಡಿದ್ದ ಅಣ್ಣಾ ಹಜಾರೆ, ದೆಹಲಿ ಪೊಲೀಸರ ದೌರ್ಜನ್ಯಕ್ಕೆ ತಾನು ಸಿದ್ಧ, ಆಗಸ್ಟ್ 16ರಿಂದ ಉಪವಾಸ ಮಾಡುವುದು ಖಂಡಿತ. ದೆಹಲಿ ಪೊಲೀಸರು ಅಥವಾ ಸರಕಾರ ಕೈಗೊಳ್ಳುವ ಯಾವುದೇ ಕ್ರಮವನ್ನೂ ಸ್ವಾಗತಿಸುತ್ತೇನೆ ಎಂದಿದ್ದಾರೆ.
ಇವನ್ನೂ ಓದಿ