ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಬಂದೂಕಿನ ಕರಿನೆರಳಲ್ಲಿ ಕಾಶ್ಮೀರ ವಿವಾದ ಇತ್ಯರ್ಥವಾಗಲ್ಲ'
(Shadow of gun | Complex issue | Kashmir issue | Nirupama Rao)
'ಬಂದೂಕಿನ ಕರಿನೆರಳಲ್ಲಿ ಕಾಶ್ಮೀರ ವಿವಾದ ಇತ್ಯರ್ಥವಾಗಲ್ಲ'
ನವದೆಹಲಿ, ಶನಿವಾರ, 25 ಜೂನ್ 2011( 12:26 IST )
ಭಾರತ ಹಾಗೂ ಪಾಕ್ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದಲ್ಲಿ ನಡೆದೆ ಮಾತುಕತೆ ಯಾವುದೇ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳದೇ ಅಂತ್ಯವಾದರೂ ನೆರೆ ಹೊರೆಯ ರಾಷ್ಟ್ರಗಳ ನಡುವೆ ಸಕಾರಾತ್ಮಕ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸಲು ಇದು ಪೂರಕವಾಗಿದೆ ಎಂದು ಅಮೆರಿಕ ಮೆಚ್ಚುಗೆ ವ್ಯಕ್ತಪಡಿಸಿದೆ.
'ಭಾರತ ಹಾಗೂ ಪಾಕ್ ನಡುವೆ ನಡೆಯುತ್ತಿರುವ ಮಾತುಕತೆ ಉತ್ತಮ ಬೆಳವಣಿಗೆಯಾಗಿದ್ದು' ಮಾತುಕತೆಯಿಂದ ಹೆಚ್ಚಿನ ಫಲಿತಾಂಶವನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಅಮೆರಿಕದ ವಕ್ತಾರರಾದ ವಿಕ್ಟೊರಿಯಾ ನೂಲ್ಯಾಂಡ್ ಹೇಳಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಹಾಗೂ ಪಾಕ್ ವಿದೇಶಾಂಗ ಸಚಿವ ಸಲ್ಮಾನ್ ಬಷೀರ್ ಅವರು ಎರಡು ದಿನಗಳ ಕಾಲ ನಡೆಸಿದ ಮಾತುಕತೆ ರಚನಾತ್ಮಕವಾಗಿತ್ತು ಎಂದು ಹೇಳಿದ್ದು, ಉಭಯ ದೇಶಗಳೂ ವಿದೇಶಾಂಗ ಸಚಿವರ ಮಟ್ಟದಲ್ಲಿ ಜುಲೈನಲ್ಲಿ ನವದೆಹಲಿಯಲ್ಲಿ ಮಾತುಕತೆ ನಡೆಸಲು ನಿರ್ಧರಿಸಿವೆ.
2008ರಲ್ಲಿ ನಡೆದ ಮುಂಬೈ ದಾಳಿಯ ಕುರಿತು ಶಿಕಾಗೋ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದ ಸಂದರ್ಭದಲ್ಲಿ ಪಾಕ್ ಮೂಲದ ಕೆನೆಡಿಯನ್ ಉಗ್ರ ತಹಾವುರ್ ರಾಣಾ, ಉಗ್ರಗಾಮಿ ಸಂಘಟನೆಗಳೊಂದಿಗೆ ಐಎಸ್‌ಐ ನಂಟು ಹೊಂದಿರುವುದಕ್ಕೆ ಮಾತುಕತೆ ಸಂದರ್ಭದಲ್ಲಿ ನಿರುಪಮಾ ರಾವ್ ಕಳವಳ ವ್ಯಕ್ತಪಡಿಸಿದರು.
ಬಂದೂಕಿನ ಕರಿನೆರಳು ಹಾಗೂ ಭಯೋತ್ಪಾದಕರ ದುಷ್ಕೃತ್ಯಗಳ ಕರಿನೆರಳಿನಲ್ಲಿ ಕಾಶ್ಮೀರ ವಿವಾದವನ್ನು ಬಗೆಹರಿಸಲು ಸಾಧ್ಯವಿಲ್ಲ ಎಂಬುದನ್ನು ನಿರುಪಮಾ ರಾವ್ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶವನ್ನು ಈ ಸಂದರ್ಭದಲ್ಲಿ ರವಾನಿಸಿದ್ದಾರೆ.