ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜುಲೈ 1ಕ್ಕೆ ಅಣ್ಣಾ ತಂಡದಿಂದ ಆಡ್ವಾಣಿ ಭೇಟಿ (Lokpal bill | Kiran Bedi | Anna Hazare | Advani)
PR
PR
ಆಡಳಿತಾರೂಢ ಪಕ್ಷದಿಂದ ಯಾವುದೇ ಧನಾತ್ಮಕ ಪ್ರತಿಕ್ರಿಯೆ ದೊರೆಯದ ಬಳಿಕ, ಇದೀಗ ಪ್ರತಿಪಕ್ಷಗಳತ್ತ ಮುಖ ಮಾಡಿರುವ ಜಂಟಿ ಲೋಕಪಾಲ ಕರಡು ಸಮಿತಿಯ ಅಣ್ಣಾ ಹಜಾರೆ ಅವರ ಬಳಗವು, ಬಿಜೆಪಿ ಪ್ರತಿನಿಧಿಗಳನ್ನು ಜುಲೈ ಒಂದರಂದು ಭೇಟಿ ಮಾಡಲಿದ್ದು, ತಾವು ಸಿದ್ಧ ಪಡಿಸಿರುವ ಕರಡು ಮಸೂದೆಗೆ ಉಳಿದ ಪಕ್ಷಗಳ ಬೆಂಬಲವನ್ನೂ ಯಾಚಿಸುವ ಪ್ರಯತ್ನವನ್ನು ಆರಂಭಿಸಿದೆ.

ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ ಅವರ ಆಹ್ವಾನದ ಮೇರೆಗೆ ಜುಲೈ ಒಂದರಂದು ಅವರನ್ನು ಭೇಟಿ ಮಾಡುವುದಾಗಿ ನಾಗರಿಕ ಸಮಾಜದ ನಾಯಕಿ ಕಿರಣ್ ಬೇಡಿ ಮಾಧ್ಯಮಗಳಿಗೆ ತಿಳಿಸಿದರು. ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಾಜದ ಐವರು ಸದಸ್ಯರು ಮತ್ತು ಐವರು ಕೇಂದ್ರದ ಹಿರಿಯ ಸಚಿವರುಗಳು ಜಂಟಿಯಾಗಿ ಕಳೆದ ಎರಡು ತಿಂಗಳಿಂದ ಲೋಕಪಾಲ ಕರಡನ್ನು ಸಿದ್ಧಪಡಿಸಿದ್ದರು.

ನಮ್ಮ ಜನ ಲೋಕಪಾಲ ಮಸೂದೆ ಮತ್ತು ಸರಕಾರದ ಕರಡು ಪ್ರತಿಗಳಲ್ಲಿನ ಪ್ರತಿಯೊಂದು ಅನುಚ್ಛೇದಗಳನ್ನೂ ಹೋಲಿಕೆ ಮಾಡಿ ತೋರಿಸುತ್ತೇವೆ. ನಂತರ ಅವರ ಅಭಿಪ್ರಾಯ ಪಡೆಯಲಾಗುವುದು ಎಂದು ಕಿರಣ್ ಬೇಡಿ ತಿಳಿಸಿದರು.

ಮತ್ತಷ್ಟು ಮಾಹಿತಿ ನೀಡಿದ ಲೋಕಪಾಲ ಸಮಿತಿಯ ಸದಸ್ಯ ಸಂತೋಷ್ ಹೆಗ್ಡೆ, ವಿವಿಧ ರಾಜಕೀಯ ಪಕ್ಷಗಳನ್ನು ಭೇಟಿ ಮಾಡಿ ತಮ್ಮ ನಿಲುವನ್ನು ವಿವರಿಸಲು ಪ್ರಯತ್ನಿಸುತ್ತೇವೆ ಮತ್ತು ಈ ಮೂಲಕ ಸರಕಾರದ ಪ್ರತಿನಿಧಿಗಳಿಂದ ತಪ್ಪು ಅಭಿಪ್ರಾಯಕ್ಕೆ ಒಳಗಾಗದಂತೆ ತಡೆಯಲು ಯತ್ನಿಸುತ್ತೇವೆ ಎಂದರು.

ಸರಕಾರದ ಪ್ರತಿನಿಧಿಗಳು ಸಿದ್ಧಪಡಿಸಿದ ಕರಡು ಮಸೂದೆಗೇ ಹೆಚ್ಚು ಒತ್ತು ನೀಡಬಾರದು ಎಂದು ಸರಕಾರಕ್ಕೆ ಎಚ್ಚರಿಸಿರುವ ಹೆಗ್ಡೆ, ಈ ರೀತಿ ಮಾಡಿದರೆ ನಾಗರಿಕ ಸಮಾಜದ ಸದಸ್ಯರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ಇವನ್ನೂ ಓದಿ