ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿ ಸ್ಥಾನ ಆಕ್ರಮಿಸಿದ ಟೀಂ ಅಣ್ಣಾ: ಕಾಂಗ್ರೆಸ್ ತಿರುಗೇಟು (Cong warns BJP | Team Anna | Taking opposition | Manish Tewari)
ಪರಿಣಾಮಕಾರಿಯಾದ ಲೋಕಪಾಲ ಮಸೂದೆಯ ಬಗ್ಗೆ ಅಣ್ಣಾ ಹಜಾರೆ ಬಳಗದ ಮೂಲಕ ಎಲ್ಲೆಡೆಯಿಂದ ಆಕ್ರೋಶಕ್ಕೆ ಗುರಿಯಾಗಿರುವ ಕಾಂಗ್ರೆಸ್, ಇದೀಗ ಬಿಜೆಪಿಯತ್ತ ತನ್ನ ವಾಗ್ದಾಳಿ ತಿರುಗಿಸಿದ್ದು, ದೇಶದ ಪ್ರತಿಪಕ್ಷ ಸ್ಥಾನವನ್ನು ನಾಗರಿಕ ಸಮಿತಿಯ ಬಣಗಳು ಅಲಂಕರಿಸುವಂತಾಗಲು ಕಾರಣವೇನೆಂಬ ಕುರಿತು ಪ್ರಧಾನ ಪ್ರತಿಪಕ್ಷವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಟೀಕೆ ಮಾಡಿದೆ.

'ಪ್ರತಿಪಕ್ಷ ಸ್ಥಾನವನ್ನು ಬಿಜೆಪಿ ಏಕೆ ಸರಕಾರೇತರ ಸಂಸ್ಥೆಗಳಿಗೆ ಏಕೆ ಬಿಟ್ಟು ಕೊಡಲಾಗುತ್ತಿದೆ ಎಂಬ ವಿಷಯದ ಕುರಿತು ಎಲ್‌.ಕೆ.ಆಡ್ವಾಣಿ ಅವರು ಬೆಳಕು ಚೆಲ್ಲಿದರೆ ಅವರು ದೇಶದ ರಾಜಕೀಯದ ಪರಿಸ್ಥಿತಿಯ ಅವಲೋಕನಕ್ಕೆ ಕೊಡುಗೆ ಸಲ್ಲಿಸಬಹುದು' ಎಂದು ಕಾಂಗ್ರೆಸ್‌ ವಕ್ತಾರ ಮನೀಷ್‌ ತಿವಾರಿ ವ್ಯಂಗ್ಯವಾಡಿದ್ದಾರೆ.

ಕಾಶ್ಮೀರ ವಿವಾದವು ಪ್ರಥಮ ಪ್ರಧಾನಿ ಜವಾಹರ್ ಲಾಲ್‌ ನೆಹರೂ ಅವರ ಕೊಡುಗೆ, ಕಾಂಗ್ರೆಸ್‌ ಪಕ್ಷವಿಂದು ಒಂದು ಕುಟುಂಬದ ಜಹಗೀರಾಗಿದೆ ಎಂಬ ಆಡ್ವಾಣಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಿದ್ದ ತಿವಾರಿ, 1947ಮತ್ತು 1971ರ ಯುದ್ಧಗಳು ಕಾಶ್ಮೀರ ಸಮಸ್ಯೆ ಪರಿಹರಿಸಲು ಸುವರ್ಣಾವಕಾಶ ಎಂದು ಹೇಳುವುದು ಅವರ ಉದ್ದೇಶವಾಗಿರಲಿಲ್ಲ ಎಂದರಲ್ಲದೆ, ದೇಶದಲ್ಲಿ 52 ವರ್ಷಗಳ ಕಾಲ ಆಡಳಿತ ನಡೆಸಲು ಜನರು ಕಾಂಗ್ರೆಸ್‌ಗೆ ಅವಕಾಶ ನೀಡಿದ್ದರಿಂದಾಗಿ ಹತಾಶೆಗೊಂಡಿರುವ ಬಿಜೆಪಿ ಈ ರೀತಿಯ ಅಪ ಪ್ರಚಾರ ಆಂದೋಲನದಲ್ಲಿ ತೊಡಗಿದೆ ಎಂದು ಆಪಾದಿಸಿದರು.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿ ಕಾಶ್ಮೀರ ಸಮಸ್ಯೆ ಇತ್ಯರ್ಥವಾಗದಿರಲು ಕಾರಣ ಎಂದು ಆಡ್ವಾಣಿ ಹೇಳಿರುವುದನ್ನು ಖಂಡಿಸಿರುವ ತಿವಾರಿ, ಜನ ಸಂಘ ಹಾಗೂ ಬಿಜೆಪಿಗಳು ದೇಶದ ಸಮಸ್ಯೆಗಳ ಭಾಗಗಳಾಗಿದ್ದವೇ ಹೊರತು ಎಂದಿಗೂ ಪರಿಹಾರವಾಗಿರಲಿಲ್ಲ ಎಂದು ಹೇಳಿದರು.

ಪಾಕಿಸ್ತಾನವು ಕಾಶ್ಮೀರ ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ 1947ರಲ್ಲಿ ಕಾಲು ಕೆರೆದು ಯುದ್ಧಕ್ಕೆ ಬಂದಾಗ, ದಾಳಿಕೋರರನ್ನು ಮಟ್ಟ ಹಾಕಿ ಕಾಶ್ಮೀರ ವಿವಾದವನ್ನು ಶಾಶ್ವತವಾಗಿ ಪರಿಹರಿಸಬಹುದಾದ ಅಮೂಲ್ಯ ಅವಕಾಶವೊಂದು ನೆಹರೂ ಅವರಿಗೆ ಲಭಿಸಿತ್ತು. 1971ರ ಭಾರತ-ಪಾಕ್ ಯುದ್ಧದಲ್ಲಿಯೂ ಪಾಕಿಸ್ತಾನವನ್ನು ಸಂಪೂರ್ಣವಾಗಿ ಮಣಿಸಿ 90 ಸಾವಿರ ಪಾಕ್ ಯುದ್ಧಕೈದಿಗಳು ಇದ್ದ ಹೊರತಾಗಿಯೂ ಇಂಥದ್ದೇ ಮತ್ತೊಂದು ಅಮೂಲ್ಯ ಅವಕಾಶವನ್ನೂ ಭಾರತವು ಕೈಚೆಲ್ಲಿತು ಎಂದು ಆಡ್ವಾಣಿ ತಮ್ಮ ಬ್ಲಾಗ್‌ನಲ್ಲಿ ಹೇಳಿಕೊಂಡಿದ್ದರು.
ಇವನ್ನೂ ಓದಿ