ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಪಾಲ: ಅಣ್ಣಾ ಹಜಾರೆ ಭೇಟಿ ಒಪ್ಪಿಗೆ ಸೂಚಿಸದ ಸೋನಿಯಾ (Lokpal Bill | Anna Hazare | Congress | Sonia Gandhi)
PTI
ಭ್ರಷ್ಟಾಚಾರ ನಿಯಂತ್ರಣ ಮತ್ತು ತಡೆಗಾಗಿ ರೂಪಿಸಲಾಗುತ್ತಿರುವ ಲೋಕಪಾಲ ಮಸೂದೆ ಕುರಿತು ಕಾಂಗ್ರೆಸ್ ಅಧ್ಯಕ್ಷೆ, ಯುಪಿಎ ನಾಯಕಿ ಸೋನಿಯಾ ಗಾಂಧಿಯನ್ನು ಭೇಟಿ ಮಾಡುವ ನಾಗರಿಕ ಹೋರಾಟ ಸಮಿತಿ ಸದಸ್ಯ ಅಣ್ಣಾ ಹಜಾರೆ ಅವರಿಗೆ ನಿರಾಶೆ ಕಾದಿದೆ. ಲೋಕಪಾಲ ಕಾಯ್ದೆ ಕುರಿತು ನಾಗರಿಕ ಸಮಾಜದ ನಿಲುವು ವಿವರಿಸಲು ಹಜಾರೆ ಅವರು ಎಲ್ಲ ಪಕ್ಷಗಳ ಮುಖಂಡರನ್ನೂ ಭೇಟಿಯಾಗಿ ಬೆಂಬಲ ಕ್ರೋಡೀಕರಿಸುತ್ತಿದ್ದು, ಅದರ ಅಂಗವಾಗಿ ಭಾನುವಾರದ ಸರ್ವಪಕ್ಷ ಸಭೆಗೆ ಮುನ್ನ ಸೋನಿಯಾರನ್ನು ಭೇಟಿಯಾಗಲು ಬಯಸಿದ್ದು, ಆದರೆ ಗುರುವಾರ ಈ ಆಸೆ ಕೈಗೂಡಿಲ್ಲ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕಾರಣವೆಂದರೆ, ಸೋನಿಯಾ ಗಾಂಧಿ ಮತ್ತು ಅಣ್ಣಾ ಹಜಾರೆ ಭೇಟಿಗೆ ಗುರುವಾರ ಯಾವುದೇ ಕಾರ್ಯಕ್ರಮ ನಿಗದಿಯಾಗಿಲ್ಲ ಎಂದು ಸೋನಿಯಾ ನಿವಾಸ 10, ಜನಪಥ್ ಮೂಲಗಳು ಸ್ಪಷ್ಟಪಡಿಸಿವೆ.

ಜುಲೈ 3ರ ಸರ್ವಪಕ್ಷ ಸಭೆಗೆ ಮುನ್ನ, ಲೋಕಪಾಲ ಮಸೂದೆ ವ್ಯಾಪ್ತಿಗೆ ಪ್ರಧಾನಿ ಹುದ್ದೆಯನ್ನೂ ಸೇರಿಸುವ ನಿಟ್ಟಿನಲ್ಲಿ ಎಲ್ಲ ಪಕ್ಷಗಳನ್ನೂ ಭೇಟಿಯಾಗುತ್ತೇನೆ, ಇದಕ್ಕಾಗಿ ಸೋನಿಯಾ ಗಾಂಧಿ ಮನವೊಲಿಸಲು ತಾನು ಗುರುವಾರ ಅವರನ್ನು ಭುಟಿಯಾಗುವುದಾಗಿ ಅಣ್ಣಾ ಹಜಾರೆ ಬುಧವಾರ ಘೋಷಿಸಿದ್ದರು.

ಹಾಲಿ ಪ್ರಧಾನಿ ಪ್ರಾಮಾಣಿಕರು. ಕೇಂದ್ರ ಸಂಪುಟವು ಭಾರತದ ಜನತೆಗೆ ಸೇರಿದ್ದು. ಸಂಪುಟದಲ್ಲಿರುವವರು ನಮ್ಮ ಜನರು ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳಲು ಇರುವ ಸಮಸ್ಯೆಯಾದರೂ ಏನು? ದೇಶಕ್ಕಾಗಿ ಅವರು ಈ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಅಣ್ಣಾ ಬುಧವಾರ ಹೇಳಿದ್ದರು.

ತಮ್ಮನ್ನು ಲೋಕಪಾಲ ವ್ಯಾಪ್ತಿಗೆ ತರುವುದರಲ್ಲಿ ಯಾವುದೇ ಅಸಮಾಧಾನ ಇಲ್ಲ. ಆದರೆ ಸಂಪುಟದ ಹಲವು ಸಹೋದ್ಯೋಗಿಗಳು ಈ ರೀತಿ ಮಾಡಿದರೆ ಅಸ್ಥಿರತೆ ಉಂಟಾಗುತ್ತದೆ ಎಂಬ ಭಾವನೆ ಹೊಂದಿದ್ದಾರೆಂದು ಪ್ರಧಾನಿ ಮನಮೋಹನ್ ಸಿಂಗ್ ಬುಧವಾರ ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಅಣ್ಣಾ ಈ ಪ್ರತಿಕ್ರಿಯೆ ನೀಡಿದ್ದಾರೆ.

ಜುಲೈ 3ರಂದು ಸರ್ವ ಪಕ್ಷಗಳ ಸಭೆಗೆ ಮುನ್ನ ಎಲ್ಲ ಪಕ್ಷಗಳ ಮುಖಂಡರನ್ನೂ ಭೇಟಿಯಾಗಿ ತಮ್ಮ ಜನಲೋಕಪಾಲ ಕರಡು ಮಸೂದೆಯ ಕುರಿತು ವಿವರಣೆ ನೀಡಿ, ಪ್ರಬಲವಾದ, ಪರಿಣಾಮಕಾರಿಯಾದ ಕಾಯ್ದೆ ಜಾರಿಗೆ ಬದ್ಧರಾಗುವಂತೆ ಮನವೊಲಿಸಲು ಅಣ್ಣಾ ಹಜಾರೆ ಬಳಗವು ಈಗಾಗಲೇ ಪ್ರಯತ್ನಗಳಲ್ಲಿ ನಿರತವಾಗಿದ್ದು, ಈ ನಿಟ್ಟಿನಲ್ಲಿ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ, ಸಿಪಿಎಂನ ಪ್ರಕಾಶ್ ಕಾರಟ್, ರಾಷ್ಟ್ರೀಯ ಲೋಕದಳದ ಅಜಿತ್ ಸಿಂಗ್, ಜೆಡಿಯು ಮುಖಂಡ ನಿತೀಶ್ ಕುಮಾರ್ ಮುಂತಾದವರನ್ನು ಭೇಟಿಯಾಗಿದ್ದಾರೆ. ಶುಕ್ರವಾರ ಸರ್ವಪಕ್ಷ ಸಭೆಗೆ ಮುನ್ನ ಕಾಂಗ್ರೆಸ್ ಅಧ್ಯಕ್ಷೆಯ ಭೇಟಿ ಅವಕಾಶ ಕೈಗೂಡುತ್ತದೆಯೇ ಕಾದುನೋಡಬೇಕಾಗಿದೆ.
ಇವನ್ನೂ ಓದಿ