ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸರಿಯಾದ ಕರಡು ಮಸೂದೆ ಸಂಸತ್ತಿಗೆ, ಇಲ್ಲವೇ ನಿರಶನ: ಅಣ್ಣಾ (Anna Hazare | Sonia Gandhi | Congress President | Lokpal draft)
ಸರಿಯಾದ ಕರಡು ಮಸೂದೆ ಸಂಸತ್ತಿಗೆ, ಇಲ್ಲವೇ ನಿರಶನ: ಅಣ್ಣಾ
ನವದೆಹಲಿ, ಭಾನುವಾರ, 3 ಜುಲೈ 2011( 09:47 IST )
PTI
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಶನಿವಾರ ಭೇಟಿ ಮಾಡಿದ ಅಣ್ಣಾ ಹಜಾರೆ, ಲೋಕಪಾಲ ಮಸೂದೆಯ ಕುರಿತು ನಾಗರಿಕ ಸಮಿತಿಯ ನಿಲುವನ್ನು ಸ್ಪಷ್ಟಪಡಿಸಿದರಲ್ಲದೆ, ಸರಿಯಾದ ಲೋಕಪಾಲ ಕರಡು ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸದಿದ್ದರೆ ಆಗಸ್ಟ್ 16ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದ ಬೆದರಿಕೆಯನ್ನು ಪುನರುಚ್ಚರಿಸಿದರು.
ಲೋಕಪಾಲ ಕರಡಿನ ಬಗ್ಗೆ ಇರುವ 6 ಭಿನ್ನಾಭಿಪ್ರಾಯಗಳ ಕುರಿತು ನಾವು ಸೋನಿಯಾ ಗಾಂಧಿ ಅವರಿಗೆ ಮಾಹಿತಿ ನೀಡಿದ್ದೇವೆ ಎಂದು ನಾಗರಿಕ ಸಮಿತಿ ಸದಸ್ಯ ಅರವಿಂದ ಕೇಜ್ರಿವಾಲ್ ಸುದ್ದಿಗಾರರಿಗೆ ಹೇಳಿದರು. ಅಲ್ಲದೆ, ಈ ಭಿನ್ನಾಭಿಪ್ರಾಯಗಳು ಯಾಕೆ ಎಂಬುದನ್ನು ಕೂಡ ಸೋನಿಯಾ ಅವರಿಗೆ ವಿವರವಾಗಿ ತಿಳಿಸಲಾಯಿತು ಎಂದವರು ತಿಳಿಸಿದರು.
ನಾಗರಿಕ ಸಮಿತಿಯು ರೂಪಿಸಿದ ಜನ ಲೋಕಪಾಲ ಕರಡು ಮಸೂದೆ ಕುರಿತು ಬೆಂಬಲ ಒಗ್ಗೂಡಿಸುವ ನಿಟ್ಟಿನಲ್ಲಿ ಅಣ್ಣಾ ಹಜಾರೆ ಬಳಗವು ಎಲ್ಲ ರಾಜಕೀಯ ಪಕ್ಷಗಳನ್ನೂ ಭೇಟಿ ಮಾಡುತ್ತಿದ್ದು, ಶುಕ್ರವಾರ ಬಿಜೆಪಿ ಮುಖಂಡರನ್ನು ಭೇಟಿ ಮಾಡಿತ್ತು. ಇದಕ್ಕೆ ಮೊದಲು ಎಡಪಕ್ಷಗಳು ಹಾಗೂ ಜೆಡಿಯು ಸೇರಿದಂತೆ ಹಲವಾರು ಪಕ್ಷಗಳ ನಾಯಕರನ್ನೂ ಭೇಟಿ ಮಾಡಿತ್ತು.