ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನವದೆಹಲಿಯಲ್ಲಿ ಇಂದು ಸರ್ವಪಕ್ಷಗಳ ಲೋಕಪಾಲ ಸಭೆ (All party meet | NDA | UPA | Anna hazare)
PTI
ಜನಲೋಕಪಾಲ ಮಸೂದೆಗೆ ವಿವಿಧ ರಾಜಕೀಯ ಪಕ್ಷಗಳ ಅಭಿಪ್ರಾಯ ಪಡೆಯಲು ಪ್ರಧಾನಿ ಮನಮೋಹನ್ ಸಿಂಗ್ ಕರೆದಿರುವ ಸರ್ವಪಕ್ಷ ಸಭೆ ಇಂದು ಸಂಜೆ ನಡೆಯಲಿದೆ.

ಸರ್ವಪಕ್ಷಗಳ ಸಭೆಯಲ್ಲಿ ಲೋಕಪಾಲ ಮಸೂದೆ ವ್ಯಾಪ್ತಿಯ ವಿಷಯದಲ್ಲಿ ರಾಜಕೀಯ ಪಕ್ಷಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲಿವೆ.

ಲೋಕಪಾಲ ಮಸೂದೆಯ ಕರಡು ಸಿದ್ಧತಾ ಸಮಿತಿಯಲ್ಲಿ ಏಕಾಭಿಪ್ರಾಯ ಮೂಡದೇ ಎರಡು ಕರಡುಗಳು ರಚನೆಯಾಗಿದ್ದು, ಈ ಸಂಬಂಧದಲ್ಲಿ ಇರುವ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ, ಇಂದಿನ ಸರ್ವಪಕ್ಷ ಸಭೆ ಬಹು ಪ್ರಾಮುಖ್ಯತೆಯನ್ನು ಪಡೆದಿದೆ.

ಸರಕಾರ ಹಾಗೂ ನಾಗರಿಕ ಪ್ರತಿನಿಧಿಗಳು ತಯಾರಿಸಿರುವ ಎರಡು ಕರಡುಗಳಲ್ಲಿಯ ಅಂಶಗಳನ್ನು ಸೇರಿಸಿ ಒಂದೇ ಕರಡು ತಯಾರಿಸಿ ಸಂಪುಟ ಸಭೆಗೆ ಕಳುಹಿಸುವ ಬಗ್ಗೆ ಎಲ್ಲಾ ಪಕ್ಷಗಳು ಒಲವು ತೋರಿವೆ.ಆದರೆ, ಪ್ರಮುಖ ವಿರೋಧ ಪಕ್ಷಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸದಿರುವುದು ನಾಗರಿಕ ಸಮಿತಿ ಪಾಳಯದಲ್ಲಿ ಕಳವಳ ಮೂಡಿಸಿದೆ.

ಎನ್‌ಡಿಎ ಅಂಗಪಕ್ಷಗಳು ಕೂಡಾ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸುವ ಕುರಿತಂತೆ ಅಂತಿಮ ತೀರ್ಮಾನ ಪ್ರಕಟಿಸಿವೆ. ಸಭೆಯಲ್ಲಿ ಭಾಗವಹಿಸುತ್ತಿರುವುದಾಗಿ ಸ್ಪಷ್ಟಪಡಿಸಿವೆ.

ಈ ಹಿಂದೆ ಬಿಜಿಪಿ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸುವುದೋ ಇಲ್ಲವೋ ಎನ್ನುವ ಬಗ್ಗೆ ಸ್ಪಷ್ಟವಾಗಿರಲಿಲ್ಲ. ಎನ್‌ಡಿಎ ಮೈತ್ರಿಕೂಟ ಶಿವಸೇನೆ ಸರ್ವಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಇವನ್ನೂ ಓದಿ