ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಪಾಲಕ್ಕಾಗಿ ಸಂವಿಧಾನ ತಿದ್ದಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ (Lokpal Bill | Mansoon Session of Parliament | Chidambaram | Constitution)
ಸರಕಾರವು ಆಗಸ್ಟ್ 1ರಿಂದ ಆರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲೇ ಲೋಕಪಾಲ ಮಸೂದೆಯನ್ನು "ಮಂಡಿಸಲಿದೆ" ಎಂದು ಹೇಳಿರುವ ಗೃಹ ಸಚಿವ ಪಿ.ಚಿದಂಬರಂ, ಆದರೆ, ಈ ಶಾಸನಕ್ಕಾಗಿ ಸಂವಿಧಾನದ ತಿದ್ದುಪಡಿ ಮಾಡುವುದು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

"ಪ್ರಬಲ ಲೋಕಪಾಲ ಕಾಯ್ದೆ ಜಾರಿಗೆ ಸಮ್ಮತಿ ಸೂಚಿಸಿದ" ಸರ್ವಪಕ್ಷ ಸಭೆ ನಡೆದ ಒಂದು ದಿನದ ಬಳಿಕ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಪಾಲ ಮಸೂದೆಯನ್ನು ಮಂಡಿಸಲಾಗುತ್ತದೆ ಎಂದಷ್ಟೇ ಹೇಳಿದರೇ ಹೊರತು ಅದು ಕಾಯ್ದೆ ರೂಪ ತಳೆಯುವ ನಿಟ್ಟಿನಲ್ಲಿ ಈ ಅಧಿವೇಶನದಲ್ಲಿಯೇ ಅಂಗೀಕೃತವಾಗುತ್ತದೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಿಲ್ಲ. ಇದರೊಂದಿಗೆ, "ನಾವು ಮುಂಗಾರು ಅಧಿವೇಶನದಲ್ಲಿ ಲೋಕಪಾಲ ಮಸೂದೆ ಮಂಡಿಸುತ್ತೇವೆ ಎಂಬ ಮಾತು ಉಳಿಸಿಕೊಂಡಿದ್ದೇವೆ" ಎಂದು ಅಣ್ಣಾ ಹಜಾರೆ ಬಳಗಕ್ಕೆ ಪ್ರಬಲ ಸಂದೇಶ ನೀಡಲು ಸರಕಾರಕ್ಕೆ ಸಾಧ್ಯವಾಗುತ್ತದೆ.

ಸರ್ವಪಕ್ಷ ಸಭೆಯಲ್ಲಿ ಕೈಗೊಂಡ ನಿರ್ಧಾರದ ಪ್ರಕಾರ, ಸರಕಾರವು ಲೋಕಪಾಲದ ಅಧಿಕೃತ ಕರಡು ಮಸೂದೆ ತಯಾರಿಸಿ ಅದನ್ನು ಸಂಸತ್ತಿನ ಸ್ಥಾಯಿ ಸಮಿತಿ ಮುಂದಿಡಬೇಕು. ಆ ನಂತರವಷ್ಟೇ ಅದನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ಇದರರ್ಥ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಈ ಕಾಯ್ದೆ ಜಾರಿಗೊಳಿಸುವುದು ಕಷ್ಟ. ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಅದು ಏನಾದರೂ ಅಂಗೀಕಾರವಾಗಬಹುದು.

ಅಂತಿಮ ಕರಡು ಭಾರತದ ಸಂವಿಧಾನಕ್ಕೆ ಬದ್ಧವಾಗಿಯೇ ಇರುತ್ತದೆ. ಈ ಅಂಶವನ್ನು ಮತ್ತೆ ಮತ್ತೆ ಒತ್ತಿ ಹೇಳಲಾಗಿದೆ ಎಂದು ಚಿದಂಬರಂ ನುಡಿಯುವುದರೊಂದಿಗೆ, ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಿತಿ ರೂಪಿಸಿದ್ದ ಜನ ಲೋಕಪಾಲ ಕರಡು ಮಸೂದೆಯಲ್ಲಿನ ರಾಜಕಾರಣಿಗಳು ಒಪ್ಪುವ ಅಂಶಗಳನ್ನು ಅಳವಡಿಸುವ ಸಾಧ್ಯತೆಗಳಿಲ್ಲ ಎಂಬುದರ ಸುಳಿವು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವರಾದ ಕಪಿಲ್ ಸಿಬಲ್ ಮತ್ತು ಪಿ.ಕೆ.ಬನ್ಸಾಲ್ ಕೂಡ ಇದ್ದರು.
ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ