ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಂಗಾ ರಕ್ಷಿಸಿ: 3 ವರ್ಷದಿಂದ ಉಪವಾಸ ಮಾಡುತ್ತಿದ್ದ ಸಾಧು ಆಸ್ಪತ್ರೆಗೆ (Baba Nagnath | Three year fast | Ganga River | Save Ganga)
ಗಂಗಾನದಿ ರಕ್ಷಿಸಿ ಎಂಬ ಆಗ್ರಹದೊಂದಿಗೆ ಇತ್ತೀಚೆಗೆ ಸ್ವಾಮೀ ನಿಗಮಾನಂದ ಎಂಬ ಸ್ವಾಮೀಜಿ ಮೂರು ತಿಂಗಳು ಆಮರಣಾಂತ ಉಪವಾಸ ನಡೆಸಿದ್ದು ಸುದ್ದಿಯಾಗಿದ್ದೇ ಅವರ ವಿವಾದಾತ್ಮಕವಾಗಿ ಸಾವನಿಂದಾಗಿ. ಇದೀಗ ಇನ್ನೊಬ್ಬ ಸ್ವಾಮೀಜಿ ಕೂಡ 1083 ದಿನಗಳಿಂದ (ಸರಿ ಸುಮಾರು ಮೂರು ವರ್ಷ) ಉಪವಾಸ ನಡೆಸುತ್ತಿದ್ದು, ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ಕೂಡ ರಾಷ್ಟ್ರೀಯ ವಾಹಿನಿಗಳ ಗಮನಕ್ಕೇ ಬಂದಿಲ್ಲ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವಾರಾಣಸಿಯ ಬಾಬಾ ನಾಗನಾಥ ಎಂಬವರ ಪರಿಸ್ಥಿತಿ ತೀರಾ ಚಿಂತಾಜನಕವಾಗಿದ್ದುದರಿಂದ ಅವರಿಗೆ ಕೃತಕವಾಗಿ ಆಮ್ಲಜನಕ ನೀಡಲಾಗುತ್ತಿದೆ.

ಗಂಗಾ ನದಿ ರಕ್ಷಣೆಗಾಗಿ ಪ್ರಾಣತ್ಯಾಗಕ್ಕೆ ತಾನು ಹೆದರುವುದೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಬಾಬಾ ನಾಗನಾಥ ಅವರು, ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಿದ್ದಾರೆ.

ಗಂಗಾ ನದಿ ಕಲುಷಿತಗೊಳ್ಳುತ್ತಿದೆ ಮತ್ತು ತೆಹ್ರಿ ಅಣೆಕಟ್ಟೆಯಂತಹಾ ಜಲ ವಿದ್ಯುತ್ ಯೋಜನೆಗಳಿಂದಾಗಿ ಗಂಗಾನದಿಯ ನೀಪು ಬತ್ತುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಸ್ಥರ ಗಮನ ಸೆಳೆಯುವುದಕ್ಕಾಗಿ ಮೂರು ವರ್ಷಗಳ ಹಿಂದೆ ಬಾಬಾ ನಾಗನಾಥ ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.

ಉಪವಾಸ ಮಾಡುತ್ತಲೇ ಇದುವರೆಗೆ ಏಳು ಬಾರಿ ಆಸ್ಪತ್ರೆಗೆ ದಾಖಲಾಗಿರುವ ಬಾಬಾ ನಾಗನಾಥ ಅವರು, ಪಟ್ಟು ಬಿಡದೆ ಉಪವಾಸ ಮುಂದುವರಿಸುತ್ತಿದ್ದಾರೆ.

ಗಂಗಾ ನದಿ ರಕ್ಷಣೆಯ ಹೆಸರಿನಲ್ಲಿ ಸರಕಾರವು ಕೋಟ್ಯಂತರ ರೂಪಾಯಿ ವ್ಯಯಿಸಿದ್ದರೂ, ಬಾಬಾ ನಾಗನಾಥರ ಆರೋಗ್ಯದ ಬಗ್ಗೆ ವಿಚಾರಿಸಲು ಒಬ್ಬನೇ ಒಬ್ಬ ಸರಕಾರಿ ಅಧಿಕಾರಿಯೂ ಬಂದಿರಲಿಲ್ಲ ಎಂದು ಮೂಲಗಳು ವರದಿ ಮಾಡಿವೆ.

ಆದರೆ, ಅವರ ಹದಗೆಡುತ್ತಿರುವ ಆರೋಗ್ಯವು ಸಂತ ಸಮುದಾಯದಲ್ಲಿ ಕಳವಳ ಮೂಡಿಸಿದೆ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ